Corona Lockdown: ಲಾಕ್‌ಡೌನ್‌ ಪ್ರಸ್ತಾವನೆ ಇಲ್ಲ: ಗೃಹ ಸಚಿವ ಆರಗ ಸ್ಪಷ್ಟನೆ

By Kannadaprabha News  |  First Published Jan 16, 2022, 1:30 AM IST

ಲಾಕ್‌ಡೌನ್‌ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಜನರ ಆರ್ಥಿಕ ಚಟುವಟಿಕೆಗಳಿಗೆ ತೊಂದರೆ ಕೊಟ್ಟು ಲಾಕ್‌ಡೌನ್‌ ಮಾಡುವ ಉದ್ದೇಶವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. 


ಬೆಂಗಳೂರು (ಜ. 16): ಲಾಕ್‌ಡೌನ್‌ (Lockdown) ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಜನರ ಆರ್ಥಿಕ ಚಟುವಟಿಕೆಗಳಿಗೆ ತೊಂದರೆ ಕೊಟ್ಟು ಲಾಕ್‌ಡೌನ್‌ ಮಾಡುವ ಉದ್ದೇಶವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿಳಿಸಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿದಿನ ಕೋವಿಡ್‌ (Covid 19) ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. 

ಜನರು ಕೋವಿಡ್‌ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಜನರಿಗೆ ತೊಂದರೆ ಕೊಟ್ಟು ನಾವು ಲಾಕ್‌ಡೌನ್‌ ಮಾಡಬೇಕಾದ ಅಗತ್ಯವಿಲ್ಲ. ಪ್ರಧಾನಿಯೊಂದಿಗಿನ ಸಭೆಯಲ್ಲಿಯೂ ಸಹ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಒಂದು ಮತ್ತು ಎರಡನೇ ಅಲೆ ವೇಳೆಯಲ್ಲಿ ಜನಸಾಮಾನ್ಯರಿಗೆ ಎಷ್ಟು ತೊಂದರೆಯಾಗಿದೆ ಎಂಬುದು ನಮಗೂ ಗೊತ್ತು. ಕೆಲವು ಸಂದರ್ಭದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಕಠಿಣವಾದ ನಿಯಮಗಳು ಅನಿವಾರ್ಯ ಎಂದರು.

Latest Videos

undefined

Shivamogga Accident: ಗಾಯಗೊಂಡ ಬಾಲಕಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಚಿವ ಜ್ಞಾನೇಂದ್ರ

ಲಾಕ್‌ಡೌನ್‌ ಬಗ್ಗೆ ಹೇಳಿ ಉಲ್ಟಾ ಹೊಡೆದ ಸಚಿವ ಜ್ಞಾನೇಂದ್ರ: ಕಾಂಗ್ರೆಸ್‌ ಪಾದಯಾತ್ರೆಯಿಂದ (Congress Padayatra)  ಲಾಕ್‌ಡೌನ್‌ (Lockdown) ಆಗುವ ಪರಿಸ್ಥಿತಿ ಎದುರಾಗಬಹುದು, ಲಾಕ್‌ಡೌನ್‌ ಜಾರಿಯಾದರೆ ಕಾಂಗ್ರೆಸ್‌(Coongress) ನಾಯಕರೇ ಕಾರಣ ಎಂದು ಹೇಳಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಕೆಲ ಸಮಯದ ಬಳಿಕ ಕೋವಿಡ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಪರಿಹಾರವಲ್ಲ. ಲಾಕ್‌ಡೌನ್‌ ಮಾಡುವುದೂ ಇಲ್ಲ ಎಂದು ಉಲ್ಟಾಹೊಡೆದಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋವಿಡ್‌ (Covid19) ಸೋಂಕನ್ನು ತಡೆಗಟ್ಟಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಆದರೆ ಕಳೆದ ಹಲವು ದಿನಗಳಿಂದ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಪರಿಸ್ಥಿತಿ ಕೈಮೀರಿದರೆ ಲಾಕ್‌ಡೌನ್‌ ಅನಿವಾರ್ಯ. ಪಾದಯಾತ್ರೆಯಿಂದ ಲಾಕ್‌ಡೌನ್‌ ಜಾರಿಯಾದರೆ ಕಾಂಗ್ರೆಸ್‌ ಕಾರಣ ಎಂದು ವಾಗ್ದಾಳಿ ನಡೆಸಿದರು.

ನಂತರ ವಿಕಾಸಸೌಧದಲ್ಲಿ ಮಾತನಾಡಿ, ಪರಿಸ್ಥಿತಿ ವಿಕೋಪಕ್ಕೆ ಹೋದರೆ ಕೆಲ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಲಾಕ್‌ಡೌನ್‌ ಪರಿಹಾರ ಅಲ್ಲ. ಸೋಂಕು ಉಲ್ಬಣವಾದ ತಕ್ಷಣ ಲಾಕ್‌ಡೌನ್‌ ಮಾಡುವ ಯೋಚನೆ ಇಲ್ಲ. ಮುಖ್ಯಮಂತ್ರಿಗಳು ಸಹ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರದ (Central Government)ಸೂಚನೆಯನ್ನು ಅನುಸರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

Karnataka Politics: ಪಾದಯಾತ್ರೆ ವಿರುದ್ಧ ಯಾವುದೇ ಷಡ್ಯಂತ್ರ ನಡೆಸಿಲ್ಲ: ಆರಗ ಜ್ಞಾನೇಂದ್ರ

ವಾರಂತ್ಯದ ಕರ್ಫ್ಯೂನಲ್ಲಿ (Weekend Curfew) ಬೀದಿ ವ್ಯಾಪಾರಿಗಳು, ಹೊಟೇಲ್‌ ಉದ್ಯಮಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದ ಬಡವರಿಗೆ, ಬೀದಿ ವ್ಯಾಪಾರಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸರ್ಕಾರಕ್ಕೆ (Government of Karnataka) ಲಾಕ್‌ಡೌನ್‌ ಮಾಡುವ ಇರಾದೆ ಏನೂ ಇಲ್ಲ. ಪರಿಸ್ಥಿತಿ ಕೈತಪ್ಪುವ ಸ್ಥಿತಿಗೆ ಬಂದಾಗ ಲಾಕ್‌ಡೌನ್‌ ಮಾಡುವುದು ಅದೊಂದು ವಿಧಾನ ಅಷ್ಟೆ.

 ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ ಎಂದ ಅವರು, ಕೋವಿಡ್‌ ಸೋಂಕಿನ ನಡುವೆಯೂ ಪಾದಯಾತ್ರೆ ಕೈಗೊಳ್ಳುವುದರ ಮೂಲಕ ಕಾಂಗ್ರೆಸ್‌ ನಾಯಕರು ಜನರ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕರ ಉದ್ದೇಶ ನೀರಿನ ಮೇಲೆ ರಾಜಕೀಯ ಮಾಡುವುದು. ಆದರೆ, ನಮ್ಮ ಆತಂಕ ಇರುವುದು ಸಾರ್ವಜನಿಕರ ಆರೋಗ್ಯ ಕಾಪಾಡಿಕೊಳ್ಳುವುದಾಗಿದೆ ಎಂದು ತಿಳಿಸಿದರು.

click me!