Makara Sankranti: ಕೃಷ್ಣ ನದಿಯಲ್ಲಿ ಪುಣ್ಯಸ್ನಾನಕ್ಕೆ ಹೋದ ಮಹಿಳೆ ನೀರು ಪಾಲು

Suvarna News   | Asianet News
Published : Jan 16, 2022, 12:15 AM IST
Makara Sankranti: ಕೃಷ್ಣ ನದಿಯಲ್ಲಿ ಪುಣ್ಯಸ್ನಾನಕ್ಕೆ ಹೋದ ಮಹಿಳೆ ನೀರು ಪಾಲು

ಸಾರಾಂಶ

ರಾಜ್ಯದಲ್ಲಿ ಮಕರ ಸಂಕ್ರಾಂತಿ ಹಬ್ಬದ ದಿನದಂದೇ ಕೃಷ್ಣ ನದಿಯಲ್ಲಿ ಪುಣ್ಯಸ್ನಾನಕ್ಕೆ ಹೋದ ಮಹಿಳೆ ನೀರು ಪಾಲಾಗಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶೆಳ್ಳಗಿ ಬಳಿ ಘಟನೆ ನಡೆದಿದೆ. 

ಯಾದಗಿರಿ (ಜ. 16): ರಾಜ್ಯದಲ್ಲಿ (Karnataka) ಮಕರ ಸಂಕ್ರಾಂತಿ (Makar Sankranti) ಹಬ್ಬದ ದಿನದಂದೇ ಕೃಷ್ಣ ನದಿಯಲ್ಲಿ (Krishna River) ಪುಣ್ಯಸ್ನಾನಕ್ಕೆ ಹೋದ ಮಹಿಳೆ ನೀರು ಪಾಲಾಗಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶೆಳ್ಳಗಿ ಬಳಿ ಘಟನೆ ನಡೆದಿದೆ. ಸುರಪುರ ನಗರದ ನಿವಾಸಿ ಕಾವೇರಿ (35) ನೀರು ಪಾಲಾದ‌ ಮಹಿಳೆ. ಮೃತಪಟ್ಟ ಕಾವೇರಿ ಖಾಸಗಿ‌‌ ಶಾಲೆಯ ಶಿಕ್ಷಕಿಯಾಗಿದ್ದರು. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುಣ್ಯಸ್ನಾನಕ್ಕೆ ತೆರಳಿದ್ದ ಗೆಳೆಯರು ನೀರುಪಾಲು: ನದಿಗೆ ತೆರಳಲು ಆಗದಿದ್ದವರು ಮನೆಗಳಲ್ಲಿಯೇ ಎಣ್ಣೆ ಸ್ನಾನ ಮಾಡ್ತಾರೆ. ಆದರೆ ಶುಕ್ರವಾರ ನದಿ ಸ್ನಾನಕ್ಕೆ ತೆರಳಿದ್ದ ಗೆಳೆಯರಿಬ್ಬರು ನೀರು ಪಾಲಾಗಿದ್ದಾರೆ. ಗಣೇಶ್ (42) ಮತ್ತು ಉದಯ್ (43) ಮೃತ ಗೆಳೆಯರು. ಹಬ್ಬದ ಹಿನ್ನೆಲೆ ಗಣೇಶ್, ಉದಯ ಸೇರಿದ ಗೆಳೆಯರ ಗುಂಪು ಪುಣ್ಯಸ್ನಾನಕ್ಕಾಗಿ ರಾಯಚೂರು ತಾಲೂಕಿನ ಶಕ್ತಿನಗರದ ಬಳಿಯ ಕೃಷ್ಣಾ ನದಿಗೆ ತೆರಳಿದ್ದರು. ಈ ವೇಳೆ ಇಬ್ಬರು ಜಲಸಮಾಧಿ ಆಗಿದ್ದಾರೆ. 

20 ವರ್ಷಗಳ ವೈಜ್ಞಾನಿಕ ಎಚ್‌ಐವಿ, ಕೊರೋನಾ ಸೇರಿ ವಿವಿಧ ವೈರಸ್‌ ಸಂಗ್ರಹ ನೀರುಪಾಲು

ಸದ್ಯ ಗಣೇಶ್ ಮೃತದೇಹ ಪತ್ತೆಯಾಗಿದ್ದು, ಉದಯ್​ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಗಣೇಶ್ ನಿಜಲಿಂಗಪ್ಪ ಕಾಲೋನಿಯ ನಿವಾಸಿಯಾಗಿದ್ರೆ, ಉದಯ್ KEB ಕಾಲೋನಿಯ ನಿವಾಸಿಯಾಗಿದ್ದಾರೆ. ಮಕರ ಸಂಕ್ರಾಂತಿ ಸಂಭ್ರಮದಲ್ಲಿ ಮನೆಯಲ್ಲಿ ಸಾವಿನ ಸೂತಕದ ಛಾಯೆ ಆವರಿಸಿದೆ.ಉದಯ್ ಮತ್ತು ಗಣೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ನಲ್ಲಿ ಸೇತುವೆ ದಾಟುತ್ತಿದ್ದ ಯುವಕ ನೀರುಪಾಲು: ಹಳೇ ಮೈಸೂರು(Mysuru) ಭಾಗದ 2 ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದ(Rain) ಕೃಷಿ ಬೆಳೆಗಳಿಗೆ ಹಾನಿಯಾಗಿದ್ದು ಸೇತುವೆ ದಾಟುತ್ತಿದ್ದ ಯುವಕನೊಬ್ಬ ಬೈಕ್‌ ಸಮೇತ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.  ಮಂಡ್ಯ(Mandya) ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಕೈಗೋನಹಳ್ಳಿ ಗ್ರಾಮದ ಉದಯಶಂಕರ್‌ (27) ನೀರಿನ ಪ್ರವಾಹದಲ್ಲಿ(Flood) ಕೊಚ್ಚಿ ಹೋದ ಯುವಕ. 

Haveri Road Accident: ರಟ್ಟಿಹಳ್ಳಿ ಬಳಿ ಭೀಕರ ಅಪಘಾತ: 4 ಮಂದಿ ಸಾವು

ಶುಕ್ರವಾರ ಸಂಜೆ ಕಾರ್ಯನಿಮಿತ್ತ ಸಮೀಪದ ಮಲ್ಲೇನಹಳ್ಳಿಗೆ ಹೋಗಿದ್ದ ದಯ ಕುಮಾರ್‌ ರಾತ್ರಿ ಹಿಂತಿರುಗುವ ವೇಳೆ ಕೈಗೋನಹಳ್ಳಿ- ಸಾರಂಗಿ ನಡುವೆ ಹಳ್ಳ ದಾಡುವ ವೇಳೆ ನೀರಿನ ರಭಸಕ್ಕೆ ಸಿಕ್ಕಿ ಬೈಕ್‌ ಸಮೇತ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಮೃತದೇಹಕ್ಕಾಗಿ (Deadbody) ಶೋಧ ಮುಂದುವರಿದಿದೆ. ಇನ್ನು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಿಂದ ಲಕ್ಷಾಂತರ ರು. ಮೌಲ್ಯದ ಬಾಳೆ ಮತ್ತು ಈರುಳ್ಳಿ ಬೆಳೆ ನಾಶವಾಗಿರುವ (Crop Damage) ಘಟನೆ ತಾಲೂಕಿನ ದೇಪೆಗೌಡನಪುರ ಗ್ರಾಮದಲ್ಲಿ ನಡೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?