ಇರುಮುಡಿ ಹೊತ್ತು ಅಯ್ಯಪ್ಪಸ್ವಾಮಿ ದರ್ಶನ ಪಡೆದ ಗೃಹ ಸಚಿವ: ಭಕ್ತರೊಂದಿಗೆ ಅರಗ ಜ್ಞಾನೇಂದ್ರ ಹೆಜ್ಜೆ

By Sathish Kumar KH  |  First Published Jan 16, 2023, 5:32 PM IST

ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಅಯ್ಯಪ್ಪ ಸ್ವಾಮಿ ಮಾಲಾಧಾರಿಯಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಭಕ್ತರಾಗಿರುವರಅಪೇಕ್ಷೆಯಂತೆ ಜ್ಞಾನೇಂದ್ರ ರಿಂದ ಶಬರಿಮಲೆ ಯಾತ್ರೆ ಮಾಡಿದ್ದು, ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ.


ಶಿವಮೊಗ್ಗ (ಜ.16): ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಅಯ್ಯಪ್ಪ ಸ್ವಾಮಿ ಮಾಲಾಧಾರಿಯಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಭಕ್ತರಾಗಿರುವರಅಪೇಕ್ಷೆಯಂತೆ ಜ್ಞಾನೇಂದ್ರ ರಿಂದ ಶಬರಿಮಲೆ ಯಾತ್ರೆ ಮಾಡಿದ್ದು, ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ.

ಕಳೆದ ಆರು ಏಳು ವರ್ಷಗಳ ಹಿಂದೆ ಅಯ್ಯಪ್ಪ ಮಾಲದಾರಿಯಾಗಿ ಶಬರಿಮಲೆ ಯಾತ್ರೆ ಮಾಡುವ ಸಂಕಲ್ಪ ತೊಟ್ಟಿದ್ದ ಆರಗ ಜ್ಞಾನೇಂದ್ರ ಅವರು, ಈ ವರ್ಷ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಇರುಮುಡಿ ಹೊತ್ತು ತೆರಳಿದ್ದಾರೆ. ಕಳೆದ ಹಲವು ವರ್ಷಗಳಿಂದ  ಅಯ್ಯಪ್ಪ ಸ್ವಾಮಿ ಭಕ್ತರಾಗಿರುವರ  ಅಪೇಕ್ಷೆಯಂತೆ ಜ್ಞಾನೇಂದ್ರ ರಿಂದ ಶಬರಿಮಲೆ ಯಾತ್ರೆಗೆ ಮುಂದಾಗಿದ್ದರು. ಹಲವು ಬಾರಿ ಹೋಗಲು ಪ್ರತ್ನಿಸಿದ್ದರೂ ಕೊನೇ ಕ್ಷಣದಲ್ಲಿ ಹೋಗಲು ಸಾಧ್ಯವಾಗಿರಲಿಲ್ಲ. ಈ ವರ್ಷ ಏನೇ ಕಾರ್ಯದೊತ್ತಡ ಇದ್ದರೂ ಸ್ವಾಮಿಯ ಸನ್ನಿದಾನಕ್ಕೆ ಭೇಟಿ ಕೊಡಲೇಬೇಕು ಎಂದು 15 ದಿನ ಹಿಂದೆ ನಿಶ್ಚಯಿಸಿದ್ದರು. ಅದರಂತೆ, ಇಂದು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಇರುಮುಡಿಯನ್ನು ಹೊತ್ತು ತೆರಳಿದ್ದಾರೆ ಎಂದು ತಿಳಿದುಬಂದಿದೆ. 

Tap to resize

Latest Videos

ಪಿಂಪ್‌ಗಳಿಂದ ಹಣ ಮಾಡೋದಾದ್ರೆ ಸೂಸೈಡ್‌ ಮಾಡಿಕೊಳ್ಳುವೆ: ಸಚಿವ ಅರಗ ಜ್ಞಾನೇಂದ್ರ

ಅಭಿಲಾಷೆ ಈಡೇರಿಸಿಕೊಂಡ ಗೃಹ ಸಚಿವ: ಸ್ವತಃ ಜ್ಞಾನೇಂದ್ರ ಅವರು ಮಾತನಾಡಿ, ನಾನು ಅಯ್ಯಪ್ಪನ ಭಕ್ತನಾಗಿ ಅಯ್ಯಪ್ಪ ಸ್ವಾಮಿ ಭಕ್ತರ ಭಕ್ತಿಯಲ್ಲಿ ಕೈ ಜೊಡಿಸಬೇಕು ಎಂಬ ಅಭಿಲಾಷೆಯಿತ್ತು. ಅಯ್ಯಪ್ಪಸ್ವಾಮಿಯ  ದರ್ಶನ ಮಾಡಲೇಬೇಕೆನ್ನುವ ಸಂಕಲ್ಪದೊಂದಿಗೆ ಭಕ್ತರ ಜೊತೆಗೆ ಅಯ್ಯಪ್ಪನ ದರ್ಶನ ಮಾಡಿದದ್ದೇನೆ. ಹಲವು ಬಾರಿ ಪ್ರಯತ್ನಿಸಿದ್ದರೂ ಕಾರಣಾಂತರಗಳಿಂದ ಕಾಲ ಕೂಡಿ ಬಂದಿರಲಿಲ್ಲ. ಕಳೆದ ಹದಿನೈದು ದಿನದ ಹಿಂದೆ ಶಬರಿಮಲೆಗೆ ಪಾದಯಾತ್ರೆ ಮುಗಿಸಿ ಬಂದವರು ಈ ಬಾರಿ ನಿಮ್ಮನ್ನು ಕರೆದುಕೊಂಡು ಬಂದೇ ಬರುತ್ತೇವೆ ಎಂದು ಶಪತ ಮಾಡಿ ಬಂದಿದ್ದೇವೆ ಹೊರಡಲೇಬೇಕು ಎಂದಿದ್ದರು. ಹಾಗಾಗಿ, ಅವರೊಂದಿಗೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಬಂದಿದ್ದಾಗಿ ತಿಳಿಸಿದ್ದಾರೆ. 

ಶಿವಮೊಗ್ಗದಲ್ಲಿ ಅಗ್ನಿಶಾಮಕದಳದ ವಿರುದ್ಧ ಪ್ರತಿಭಟನೆ:  ಶಿವಮೊಗ್ಗದಲ್ಲಿ ನಡೆದಿರುವ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ ಶರತ್ ಭೂಪಾಳಂ ಫೊಟೊ ಹಿಡಿದು ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಜಸ್ಟಿಸ್ ಫಾರ್ ಶರತ್ ಎಂಬ ಪ್ಲೇಕಾರ್ಡ್ ಹಿಡಿದು ಪ್ರತಿಭಟನೆ ಮಾಡಿದರು. ಶಿವಮೊಗ್ಗದ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಲಾಗಿದೆ. ಜ.8ರಂದು ಅಗ್ನಿ  ಅವಘಡದಲ್ಲಿ ಯುವ ಉದ್ಯಮಿ ಶರತ್ ಭೂಪಾಳಂ ಮೃತಪಟ್ಟಿದ್ದನು. ಶರತ್ ಭೂಪಾಳಂ ಸಾವಿಗೆ ಅಗ್ನಿಶಾಮಕ ದಳದ ವೈಫಲ್ಯವೇ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹ ಮಾಡಿದ್ದಾರೆ. 

Shivamogga: ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ: ಉದ್ಯಮಿ ಶರತ್ ಭೂಪಾಳಂ ಸಾವು

ತನಿಖೆ ನಡೆಸುವ ಭರವಸೆ ನೀಡಿದ ಜಿಲ್ಲಾಧಿಕಾರಿ: ನಗರದ ಕುವೆಂಪು ರಸ್ತೆಯಿಂದ  ಡಿಸಿ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಗ್ನಿಶಾಮಕದಳದ ಬೆಂಕಿ ಅವಘಡಗಳಿಗೆ ಸನ್ನದ್ಧವಾಗಿರಲಿಲ್ಲ. ನಮ್ಮ ಕುಟುಂಬಕ್ಕೆ ಆದ ಅನ್ಯಾಯ ಮತ್ಯಾರಿಗೂ ಆಗಬಾರದು ಎಂದು ಮೃತ ಶರತ್ ತಂದೆ ಶಶಿಧರ್ ಆಗ್ರಹ ಮಾಡಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ರಿಂದ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.

click me!