ಚುನಾವಣೆ ಕರ್ತವ್ಯಕ್ಕೆ ಹೋಗಿದ್ದ ರಾಜ್ಯದ ಹೋಮ್ ಗಾರ್ಡ್ಸ್ ಮಧ್ಯಪ್ರದೇಶದಲ್ಲಿ ಪರದಾಟ!

By Ravi Janekal  |  First Published Nov 22, 2023, 8:27 AM IST

ಬಳ್ಳಾರಿ ಜಿಲ್ಲೆಯಿಂದ ಚುನಾವಣಾ ಕರ್ತವ್ಯಕ್ಕೆ ಮಧ್ಯಪ್ರದೇಶಕ್ಕೆ ಹೋಗಿದ್ದ 400ಕ್ಕೂ ಅಧಿಕ ಗೃಹರಕ್ಷಕ ದಳದ ಸಿಬ್ಬಂದಿ ವಾಪಸ್ ಬರಲಾರದೆ ರೈಲ್ವೆ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ. 


ಬಳ್ಳಾರಿ (ನ.22): ಬಳ್ಳಾರಿ ಜಿಲ್ಲೆಯಿಂದ ಚುನಾವಣಾ ಕರ್ತವ್ಯಕ್ಕೆ ಮಧ್ಯಪ್ರದೇಶಕ್ಕೆ ಹೋಗಿದ್ದ 400ಕ್ಕೂ ಅಧಿಕ ಗೃಹರಕ್ಷಕ ದಳದ ಸಿಬ್ಬಂದಿ ವಾಪಸ್ ಬರಲಾರದೆ ರೈಲ್ವೆ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ. 

ಇತ್ತೀಚೆಗೆ ನಡೆದ ಚುನಾವಣೆ ವೇಳೆ ಸೂಕ್ತ ಬಂದೋಬಸ್ತ್‌ ಗೆ ನಿಯೋಜಿತರಾಗಿದ್ದ ಹೋಮ್ ಗಾರ್ಡ್ಸ್. ರಾಜ್ಯದಿಂದ ವಿಶೇಷ ರೈಲು ಮೂಲಕ ಮದ್ಯಪ್ರದೇಶಕ್ಕೆ ತೆರಳಿದ್ದರು. ಇದೀಗ ಚುನಾವಣೆ ಮುಗಿದರೂ ಗೃಹರಕ್ಷಕ ದಳದ ಸಿಬ್ಬಂದಿಯನ್ನು ವಾಪಸ್ ಕಳಿಸಿಕೊಡದ ಚುನಾವಣೆ ಆಯೋಗ. ಇತ್ತ ಮಧ್ಯಪ್ರದೇಶ ಸರ್ಕಾರವೂ ಸಹ ಸಿಬ್ಬಂದಿಯನ್ನು ವಾಪಸ್ ಕಳಿಸುವ ಯಾವುದೇ ವ್ಯವಸ್ಥೆ ಮಾಡಿಲ್ಲ. ಈ ಹಿನ್ನೆಲೆ ಕಳೆದ ಮೂರು ದಿನಗಳಿಂದ ರೈಲ್ವೆ ನಿಲ್ದಾಣದಲ್ಲೇ ಕಾಲ ಕಳೆಯುತ್ತಿರುವ ಸಿಬ್ಬಂದಿ. ಕರ್ನಾಟಕಕ್ಕೆ ಕಳಿಸಿಕೊಡುವಂತೆ ಒತ್ತಾಯಿಸಿದ್ದಾರೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Latest Videos

undefined

ಅತ್ತ ಕುಟುಂಬದ ಜೊತೆ ಹಬ್ಬವೂ ಮಾಡಲಿಲ್ಲ, ಇತ್ತ ಟ್ರೈನ್ ಬರಲಿಲ್ಲ; ಯಾದಗಿರಿ ರೈಲ್ವೆ ನಿಲ್ದಾಣದಲ್ಲೇ ಮಲಗಿದ ಹೋಮ್ ಗಾರ್ಡ್ಸ್!

4 ಸಾವಿರಕ್ಕೂ ಅಧಿಕ ಹೋಮ್ ಗಾರ್ಡ್‌ಗಳು ಪರದಾಟ:

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಕರ್ತವ್ಯಕ್ಕೆ ರಾಜ್ಯದಿಂದ ತೆರಳಿದ್ದ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಕನ್ನಡಿಗ ಗೃಹರಕ್ಷಕ ದಳದ ಸಿಬ್ಬಂದಿ ಪರದಾಡುತ್ತಿದ್ದಾರೆ. ಶಾಂತಿಯುತ ಚುನಾವಣೆಗೆ ನಡೆಸಲು ಗೃಹರಕ್ಷಕ ಸಿಬ್ಬಂದಿ ಬೇಕು. ಆದರೆ ಅವರನ್ನು ಸುರಕ್ಷಿತವಾಗಿ ವಾಪಸ್ ಕಳಿಸಿಕೊಡುವ ಜವಾಬ್ದಾರಿ ಇರಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಮೈ ಚಳಿ ಬಿಡಿಸುತ್ತೇವೆ: ರಾಜ್ಯ ಸರ್ಕಾರದ ವಿರುದ್ಧ ಆರ್‌ ಅಶೋಕ್ ಗುಡುಗು!

ಕಳೆದ ನವೆಂಬರ್ 13ರಂದು ಸಹ ಮಧ್ಯಪ್ರದೇಶಕ್ಕೆ ತೆರಳಬೇಕಿದ್ದ ಗೃಹರಕ್ಷಕ ದಳದ ಸಿಬ್ಬಂದಿ ತೆರಳಬೇಕಿದ್ದ ಟ್ರೈನ್ ಬಾರದೆ ಯಾದಗಿರಿ ನಿಲ್ದಾಣದಲ್ಲೇ ರಾತ್ರಿ ಮಲಗಿದ್ದ ಹೋಮ್ ಗಾರ್ಡ್ಸ್. ತಮ್ಮದೇ ಜಿಲ್ಲೆ ವ್ಯಾಪ್ತಿಯಲ್ಲಿದ್ದರೂ ಕುಟುಂಬದವರೊಂದಿಗೆ ಅಂದು ದೀಪಾವಳಿ ಹಬ್ಬವನ್ನು ಆಚರಿಸಲು ಆಗಲಿಲ್ಲ. ಅತ್ತ ಟ್ರೈನ್ ಸಹ ಬರಲಿಲ್ಲ. ಇದೀಗ ಚುನಾವಣೆ ಮುಗಿದ ಬಳಿಕ ವಾಪಸ್ ರಾಜ್ಯಕ್ಕೆ ಕಳಿಸದೇ ನಿರ್ಲಕ್ಷ್ಯವಹಿಸಿರುವುದು ಮಧ್ಯಪ್ರದೇಶ ಸರ್ಕಾರ, ಚುನಾವಣೆ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

click me!