ವಾರದಲ್ಲಿ ಎರಡು ಬಾರಿ ಒಡೆದ ಹೆಚ್ಎಲ್ಸಿ ಕಾಲುವೆ; ನೀರಿಲ್ಲದ ಸಮಯದಲ್ಲಿ ರೈತರಿಗೆ ಮತ್ತಷ್ಟು ಸಂಕಷ್ಟ

By Ravi JanekalFirst Published Sep 4, 2023, 6:16 PM IST
Highlights

ರಾಜ್ಯದಲ್ಲಿ ಒಂದಷ್ಟು ಭಾಗ ಬರ ತಾಂಡವವಾಡುತ್ತಿದೆ. ಮತ್ತೊಂದು ಕಡೆ ಒಂದಷ್ಟು ಮಳೆಯಾಗಿ ಜಲಾಶಯಗಳು ಭರ್ತಿಯಾಗಿವೆ. ಆದ್ರೇ ಆ ನೀರನ್ನು ಕಾಲೂವೆಗಳ ಮೂಲಕ ರೈತರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಎಡವಟ್ಟು ಮಾಡುತ್ತಿದ್ದಾರೆ. ತುಂಗಭದ್ರ ಜಲಾಶಯ ವ್ಯಾಪ್ತಿಯ ಬರುವ ಬಳ್ಳಾರಿ ತಾಲೂಕಿನ ಈ ಹೆಚ್ಎಲ್ಸಿ ಕಾಲುವೆ ಒಡೆದು ನೀರು ವ್ಯರ್ಥವಾಗಿ ಹರಿದಿದೆ.

ವರದಿ : ನರಸಿಂಹ ಮೂರ್ತಿ ಕುಲಕರ್ಣಿ 

ಬಳ್ಳಾರಿ (ಸೆ.4) : ರಾಜ್ಯದಲ್ಲಿ ಒಂದಷ್ಟು ಭಾಗ ಬರ ತಾಂಡವವಾಡುತ್ತಿದೆ. ಮತ್ತೊಂದು ಕಡೆ ಒಂದಷ್ಟು ಮಳೆಯಾಗಿ ಜಲಾಶಯಗಳು ಭರ್ತಿಯಾಗಿವೆ. ಆದ್ರೇ ಆ ನೀರನ್ನು ಕಾಲೂವೆಗಳ ಮೂಲಕ ರೈತರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಎಡವಟ್ಟು ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ತುಂಗಭದ್ರ ಜಲಾಶಯ ವ್ಯಾಪ್ತಿಯ ಬರುವ ಬಳ್ಳಾರಿ ತಾಲೂಕಿನ ಈ ಹೆಚ್ಎಲ್ಸಿ ( ಹೈ ಲೇವಲ್ ಕೆನಾಲ್ )  ಕಾಲೂವೆ. ಕಳಪೆ ಕಾಮಗಾರಿಯಿಂದಾಗಿ ವಾರದಲ್ಲಿ ಎರಡೆರುಡು ಬಾರಿ ಕಾಲೂವೆ ಒಡೆದು ನೀರು ಸೊರಿಕೆಯಾಗೋ ಮೂಲಕ  ನೀರಿಲ್ಲದೇ ವೇಳೆ ಗಾಯದ ಮೇಲೆ ಬರೆ ಎಳೆಯುತ್ತಿದೆ. 

 ದಶಕದಿಂದ ಇರೋ ಕಾಲುವೆ ನಿರ್ವಹಣೆ ಹೆಸರಲ್ಲಿ ಹಣದ ಜೊತೆ ನೀರು ಪೋಲು

ಕಣ್ಣೆದುರುಗೆ ನೀರು ಇದ್ರೂ ಅದನ್ನು ಸದ್ಭಳಕೆ ಮಾಡಿಕೊಳ್ಳಲಾಗದೆ ರೈತರ ಪರದಾಟ..ವಾರದಲ್ಲಿ ಎರಡು ಬಾರಿ ಒಡೆಯುತ್ತಿದ್ರು ಇದನ್ನು ಕಳಪೆ ಕಾಮಗಾರಿ ಎಂದು ಒಪ್ಪಿಕೊಳ್ಳಲು ಅಧಿಕಾರಿಗಳ ಕಳ್ಳಾಟ… ಕಾಲೂವೆ ಒಡೆಯುತ್ತಿರೋ ಹಿನ್ನೆಲೆ ಕಳೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲವೆನ್ನುವ ಆರೋಪ.. ಹೌದು, ಮುಂಗಾರು ಮಳೆ ಆರಂಭದಲ್ಲಿ ಮಳೆ ಕೈಕೊಟ್ಟ ಹಿನ್ನೆಲೆ ಜುಲೈ ಅಂತ್ಯದ ವೇಳೆಗೆ ತುಂಗಭಧ್ರ ಜಲಾಶಯ ಒಂದು ಹಂತದಲ್ಲಿ ಭರ್ತಿಯಾಯ್ತು. 100 ಟಿಎಂಸಿ ಸಾಮರ್ಥ್ಯದ ಜಲಾಶಯ ಹರಸಾಹಸ ಪಟ್ಟು 90 ಟಿಎಂಸಿ ತುಂಬಿತ್ತು.  ಇರೋ ನೀರಿನಲ್ಲಿ ಆಂಧ್ರ ಮತ್ತು ಕರ್ನಾಟಕದ ರೈತರಿಗೆ ಎರಡು ಬೆಳೆಗೆ ನೀರು ನೀಡೋದ್ರ ಜೊತೆ ಕುಡಿಯುವ ನೀರನ್ನು ಒದಗಿಸಬೇಕಿದೆ. ಹೀಗಾಗಿ ಕಾಲೂವೆಗಳ ಮೂಲಕ ಆಗಸ್ಟ್ ತಿಂಗಳಿಂದ ಹಂತ ಹಂತವಾಗಿ ನೀರನ್ನು ಬಿಡಲಾಗ್ತಿದೆ. ಆದ್ರೇ, ಪ್ರಸಕ್ತ ವಾರದಲ್ಲಿ ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದಲ್ಲಿ ಎರಡು ಬಾರಿ ಕಾಲೂವೆ ಒಡೆಯೋ ಮೂಲಕ ಕಳೆಪೆ ಕಾಮಗಾರಿ ಇರೋದು ಬಹಿರಂಗವಾಗಿದೆ. ಆದ್ರೇ, ಇದನ್ನು ಅಧಿಕಾರಿಗಳು ಒಪ್ಪಿಕೊಳ್ಳುತ್ತಿಲ್ಲ. 

ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಪರಿಹಾರ: ಉಸ್ತುವಾರಿ ಸಚಿವರಿಂದಲೇ ಚೆಕ್ ವಿತರಣೆ

 ಕಳಪೆ ಕಾಮಗಾರಿಯಾದ್ರೇ, ತನಿಖೆಯ ಬಳಿಕ ಶಿಕ್ಷೆ ಎಂದ ಸಚಿವ ನಾಗೇಂದ್ರ
 
ಇನ್ನೂ ಈ ಕಾಲೂವೆಯನ್ನು ನಿನ್ನೆ ಮೊನ್ನೆ ನಿರ್ಮಾಣ ಮಾಡಿದ್ದಲ್ಲ. ಜಲಾಶಯ ನಿರ್ಮಾಣ ಮಾಡಿದ್ದಾಗ ಅಂದರೇ,  ಕಳೆದ ಐದಾರು ದಶಕಗಳಿಂದಲೂ ಈ ಕಾಲೂವೆ ಇದೆ. ಆದ್ರೇ, ವರ್ಷಕ್ಕೊಮ್ಮೆ ನಿರ್ವಹಣೆ ಹೆಸರಲ್ಲಿ ತುಂಗಭದ್ರ ಜಲಾಶಯದ ಆಡಳಿತ ಮಂಡಳಿ ಸರ್ಕಾರದ ಮೂಲಕ ಕೋಟಿ ಕೊಟಿ ಖರ್ಚು ಮಾಡುತ್ತದೆ. ಆದ್ರೇ, ಇಷ್ಟೇಲ್ಲ ಖರ್ಚು ಮಾಡಿದ್ರೂ ಕಾಲೂವೆ ಒಡೆಯುತ್ತಿರೋದೇಕೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಇನ್ನೂ ಈ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಕಳಪೆ ಕಾಮಗಾರಿಯಾದ್ರೇ, ತನಿಖೆಯ ಬಳಿಕ ಶಿಕ್ಷೆ ಖಚಿತ ಎನ್ನುತ್ತಿದ್ದಾರೆ. ಆದ್ರೇ, ಕಾಲೂವೆ ಒಡೆದ ಭಾಗದಲ್ಲಿ ಬೆಳೆಹಾನಿ ಸಂಕಷ್ಟ ಒಂದೇಡೆಯಾದ್ರೇ ಕೆಳ ಭಾಗಕ್ಕೆ ನೀರು ಹೋಗದೇ ಬೆಳೆ ಒಣಗುತ್ತಿದೆ.

ಬಿಗ್‌ 3 ವರದಿಗೆ ಸರ್ಕಾರ ಅಲರ್ಟ್.. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಸಿಕ್ತು ಪರಿಹಾರ !

 

ಆಂಧ್ರ ಅಧಿಕಾರಿಗಳ ದರ್ಬಾರ ರಾಜ್ಯದ ರೈತರ ಸಂಕಷ್ಟ

  ಗುತ್ತಿಗೆದಾರನ ಎಡವಟ್ಟೋ ಅಧಿಕಾರಿಗಳ ನಿರ್ಲಕ್ಷ್ಯವೋ ಗೊತ್ತಿಲ್ಲ. ಬರ ಇರೋ ವೇಳೆ ಅಳೆದು ತೂಗಿ ನೀರು ಬಳಕೆ ಮಾಡುತ್ತಿರುವ ರೈತರಿಗೆ ಇದೀಗ ಕಾಲೂವೆ ಒಡೆದಿರೋದು ಮತ್ತೋಮ್ಮೆ ಸಂಕಷ್ಟಕ್ಕಿಡು ಮಾಡಿದೆ.

click me!