
ಕೊಪ್ಪಳ (ಜ.21): ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಡಿಸ್ಕವರಿ ಕೊಪ್ಪಳ ( ಕೊಪ್ಪಳ ಅನ್ವೇಷಿಸಿ) ಕಾರ್ಯಕ್ರಮ ಕ್ಕೆ ಬುಧವಾರ ಕೊಪ್ಪಳ ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.
ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳು, ಪೌರಾಣಿಕ ಐತಿಹ್ಯ ಗಳು, ಪ್ರಾಗೈತಿಹಾಸಿಕ ತಾಣಗಳನ್ನು ನಾಡಿಗೆ ಪರಿಚಯಿಸುವ ದಿಸೆಯಲ್ಲಿ ಕಾರ್ಯಕ್ರಮದಲ್ಲಿ ಜಿಲ್ಲೆಯ ವೈವಿದ್ಯತೆಯ ಅನಾವರಣ ಮಾಡಲಾಯಿತು. ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಮಾತನಾಡಿ, ಕೊಪ್ಪಳ ನಂಬಲು ಅಸಾಧ್ಯವಾದ ವಿಶೇಷತೆಯನ್ನು ಮೈಗೂಡಿಸಿಕೊಂಡಿದೆ. ಇಲ್ಲಿರುವಷ್ಟು ವೈವಿದ್ಯತೆಯನ್ನು ಉಹೆ ಮಾಡಲು ಸಾಧ್ಯವಿಲ್ಲದಷ್ಟು ಕೊಪ್ಪಳ ಹುದುಗಿಕೊಂಡಿದೆ ಎಂದರು.
ಪುರಾತನ ಇತಿಹಾಸ ಕ್ಕೆ ಸಾಕ್ಷಿಯಾಗಿ ಹಿರೇಬೆಣಕಲ್ ಶಿಲಾಸಮಾಧಿಗಳಿವೆ. ರಾಮಾಯಣ ಮಹಾಭಾರತದ ಐತಿಹ್ಯಗಳು ಇವೆ. ವಿಜಯನಗರ ಸಾಮ್ರಾಜ್ಯದ ಭಾಗ, ಕಲ್ಯಾಣ, ಕದಂಬರು ಆಳ್ವಿಕೆಯ ಇತಿಹಾಸವಿದೆ. ಇಂಥ ಕೊಪ್ಪಳಕ್ಕೆ ವಿಮಾನಯಾನ, ರೈಲ್ವೇ ಪ್ರಯಾಣ, ಸುಸಜ್ಜಿತ ಸಾರಿಗೆ ವ್ಯವಸ್ಥೆ ಹೊಂದಿದೆ. ಕೇವಲ ಒಂದುವರೆ ಗಂಟೆಯಲ್ಲಿ ತಲುಪಬಹುದಾದ ವಿಮಾನ ನಿಲ್ದಾಣ ಇವೆ. ಕೊಪ್ಪಳದ ಲ್ಲಿ ಕೇವಲ ಐತಿಹಾಸಿಕ ಹಿನ್ನೆಲೆ ಅಷ್ಟೇ ಅಲ್ಲ ವಿಶಿಷ್ಟ ಪ್ರಾಣಿಪ್ರಪಂಚವೇ ಇಲ್ಲಿದೆ ಎಂದು ಹೇಳಿದರು. ಕೊಪ್ಪಳಕ್ಕೆ ಇದೆಲ್ಲವನ್ನು ಮುಂದಿಟ್ಟುಕೊಂಡು ಪ್ರವಾಸೋದ್ಯಮ ಅಭಿವೃದ್ಧಿ ಗೆ ವಿಪುಲ ಅವಕಾಶ ಇದೆ ಎಂದು ಹೇಳಿದರು.
ಕೊಪ್ಪಳದ ಹಿರೇಬೆಣಕಲ್ ಶಿಲಾಸಮಾಧಿ ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದಾಗಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಗುರುತಿಸಿದೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಉಲ್ಲೇಖಿಸಿದರು. ತೊಗಲುಗೊಂಬೆಯಾಟದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭೀಮವ್ವ ಶಿಳ್ಳಿಕ್ಯಾತರ ಅವರು ತಮ್ಮ ತೊಗಲುಗೊಂಬೆಯಾಟವನ್ನು ಪ್ರದರ್ಶನ ಮಾಡುವ ಮೂಲು ನೆರೆದವರನ್ನು ಮೂಕವೀಸ್ಮರನ್ನಾಗಿ ಮಾಡಿದರು.
ಕೊಪ್ಪಳದಲ್ಲಿ ಎಲ್ಲವೂ ಇದೆ. ಆದರೆ ಸೂಕ್ತ ಪ್ರಚಾರ ಸಿಕ್ಕಿಲ್ಲ ಎಂದು ಸಂಸದ ರಾಜಶೇಖರ ಹಿಟ್ನಾಳ ಬೇಸರ ವ್ಯಕ್ತಪಡಿಸಿದರು. ಡಿಸ್ಕವರಿ ಕೊಪ್ಪಳ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು. ಭಕ್ತಿಯ ಸಾಗರ ನೋಡಬೇಕು ಎಂದರೆ ಅದು ಕೊಪ್ಪಳದ ಶ್ರೀಗವಿಸಿದ್ದೇಶ್ವರ ಜಾತ್ರೆಗೆ ಬರಬೇಕು. ಇಲ್ಲಿ ಅಂಜನಾದ್ರಿ ಇದೆ. ಇಟಗಿ ಮಹದೇವದೇವಾಯ ಇದೆ. ಹುಲಿಗೆಮ್ಮಾ ದೇವಸ್ಥಾನ ಇದೆ. ಇಲ್ಲಿ ಅನೇಕ ಸ್ಥಳಗಳು ಇವೆ. ಅವುಗಳಿಗೆ ಸೂಕ್ತ ಪ್ರಚಾರ ನೀಡಿದರೆ ಪ್ರವಾಸೋದ್ಯಮ ಅಭಿವೃದ್ಧಿ ಗೆ ಅವಕಾಶಗಳಿವೆ.
ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಆರ್ಥಿಕ ಅಭಿವೃದ್ಧಿಯಾಗುತ್ತದೆ. ಹೀಗಾಗಿ ಈ ಕಾರ್ಯಕ್ರಮ ಬಹಳ ಅರ್ಥಪೂರ್ಣ ಎಂದು ಬಣ್ಷಿಸಿದರು.
ಬೇರೆ ಬೇರೆ ದೇಶಕ್ಕೆ ಹೋಗುವ ಬದಲು ಕೊಪ್ಪಳ ಸುತ್ತಮುತ್ತ ಸುತ್ತಾಡಿದರೆ ಅದೆಲ್ಲವನ್ನು ನೋಡಬಹುದು ಎಂದರು.
ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಜಿಪಂ ವರ್ಣೀತ ನೇಗಿಲ , ಪಧ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭೀಮವ್ವ ಶಿಳ್ಲಿಕ್ಯಾತರ ಇದ್ದರು.
ಸಂಧ್ಯಾ ಹರಿದಾಸರ , ರೋಷನ್ ಪಿಂಟೋ, ಟ್ರಾವೆಲ್ ಏಜೆಂಟರು, ಬ್ಲಾಗರ್ಸ್ , ಇನ್ಫ್ಯುಲಿಯನ್ಸರ್ಸ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಅವರು ಸ್ವಾಗತಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ