ಕಾಂಗ್ರೆಸ್ ಸರ್ಕಾರಕ್ಕೆ ಪರಿಷತ್‌ನಲ್ಲಿ ಮುಜುಗರ, ಹಿಂದೂ ಧಾರ್ಮಿಕ ದತ್ತಿ ಬಿಲ್ ತಿರಸ್ಕೃತ!

By Suvarna NewsFirst Published Feb 23, 2024, 8:28 PM IST
Highlights

ಭಾರಿ ವಿರೋಧದ ನಡುವೆ ವಿಧಾನಸಭೆಯಲ್ಲಿ ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ಬಿಲ್ ಮಂಡಿಸಿ ಗೆದ್ದಿದ್ದ ಕಾಂಗ್ರೆಸ್ ಇದೀಗ ವಿಧಾನ ಪರಿಷತ್‌ನಲ್ಲಿ ಹಿನ್ನಡೆ ಎದುರಿಸಿದೆ. 10 ನಿಮಿಷ ಕಲಾಪ ಮುಂದೂಡಿದರೂ ಕಾಂಗ್ರೆಸ್‌ಗೆ ಬಿಲ್ ಪಾಸ್ ಮಾಡಲು ಸಾಧ್ಯವಾಗಲಿಲ್ಲ. ಬಿಲ್ ಬಿದ್ದುಹೋಗುತ್ತಿದ್ದಂತೆ ಬಿಜೆಪಿ ಸದಸ್ಯರು ಜೈಶ್ರೀರಾಮ್ ಘೋಷಣೆ ಮೊಳಗಿಸಿದ್ದಾರೆ.
 

ಬೆಂಗಳೂರು(ಫೆ.23) ಕಾಂಗ್ರಸ್ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ಮಸೂದೆ ಕೋಲಾಹಲಕ್ಕೆ ಕಾರಣವಾಗಿತ್ತು. ಆದರೆ ಭಾರಿ ವಿರೋಧ, ಕೋಲಾಹಲ ನಡುವೆ ವಿಧಾನಸಭೆಯಲ್ಲಿ ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ಮಸೂದೆ ಪಾಸ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಬಿಜೆಪಿ ಈ ಬಿಲ್ ವಿರುದ್ದ ಭಾರಿ ಪ್ರತಿಭಟನೆ ನಡೆಸಿತ್ತು. ಇದೀಗ ವಿಧಾನ ಪರಿಷತ್‌ನಲ್ಲಿ ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ಮಸೂದೆ ಪಾಸ್ ಆಗದೆ ಹಿನ್ನಡೆಯಾಗಿದೆ. ಬಿಲ್‌ಗೆ ಹಿನ್ನಡೆಯಾಗಲಿದೆ ಎಂದು ಅರಿತ ಕಾಂಗ್ರೆಸ್ 10 ನಿಮಿಷ ಕಲಾಪ ಮುಂದೂಡಿತ್ತು. ಆದರೆ ಮತ್ತೆ ಕಲಾಪ ಆರಂಭಗೊಂಡಾಗ ಬಿಲ್ ಮಂಡನೆ ಮಾಡಿದರೂ ಪರಿಷತ್‌ನಲ್ಲಿ ಸರ್ಕಾರಕ್ಕೆ ಸಂಖ್ಯಾಬಲದ ಕೊರತೆ ಕಾರಣ ಬಿಲ್ ಬಿದ್ದು ಹೋಯಿತು. ಇದೇ ವೇಳೆ ಬಿಜೆಪಿ ಸದಸ್ಯರು ಜೈಶ್ರೀರಾಮ್ ಘೋಷಣೆ ಕೂಗಿದರೆ, ಕಾಂಗ್ರೆಸ್ ಸದಸ್ಯರು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದರು.

ಧಾರ್ಮಿಕ ದತ್ತಿ ತಿದ್ದುಪಡಿ ಮಸೂದೆ ವಿರುದ್ಧ ವಿಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ವಿಪಕ್ಷಗಳ ಒತ್ತಡಕ್ಕೆ ಮಣಿದ ಸಚಿವ ರಾಮಲಿಂಗಾ ರೆಡ್ಡ, ಸೋಮವಾರ ಮತ್ತೆ ಬಿಲ್ ಮಂಡಿಸುತ್ತೇನೆ ಎಂದರು. ಆದರೆ ಇದಕ್ಕೆ ಉಭಾಸಭಾಪತಿ ಪ್ರಾಣೇಶ್ ಆಕ್ಷೇಪ ವ್ಯಕ್ತಪಡಿಸಿದ್ದರು. ಒಮ್ಮೆ ಪರ್ಯಾಲೋಚನೆಗೆ ತೆಗೆದುಕೊಂಡ ಬಿಲ್ ಮುಂದೂಡಲು ಸಾಧ್ಯವಿಲ್ಲ ಎಂದು ಉಪಸಭಾಪತಿ ಹೇಳಿದ್ದಾರೆ.

Latest Videos

ಧಾರ್ಮಿಕ ಗತ್ತಿ ವಿಧೇಯಕ ಅಂಗೀಕಾರ, ದೇವಸ್ಥಾನದ ಆದಾಯದ ಶೇ.10 ರಷ್ಟು ಹಣ ಸರ್ಕಾರಕ್ಕೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಈ ಕುರಿತು ಚರ್ಚಿಸುವ ಅಗತ್ಯವಿದೆ. ಹೀಗಾಗಿ ಅವಕಾಶ ನೀಡಬೇಕು ಎಂದು ರಾಮಲಿಂಗಾ ರೆಡ್ಡಿ ಮನವಿ ಮಾಡಿದ್ದಾರೆ. ಆದರೆ ಇದಕ್ಕೂ ಅವಕಾಶ ಸಿಗಲಿಲ್ಲ. ಪರ್ಯಾಲೋಚನೆಗೆ ತೆಗೆದುಕೊಂಡಿದ್ದೇವೆ. ಮಂದೂಡಲು ಅಸಾಧ್ಯ ಎಂದು ಉಪಸಭಾಪತಿ ಹೇಳಿದ್ದಾರೆ. ಚರ್ಚೆ ಮಾಡಿ ನಿರ್ಧರಿಸಿ ಎಂದು ಕಲಾಪವನ್ನು 10 ನಿಮಿಷ ಮುಂದೂಡಲಾಯಿತು.

ಕಲಾಪ ಮತ್ತೆ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಧಾರ್ಮಿಕ ದತ್ತಿ ಮಸೂದೆಯನ್ನು ಅನಿವಾರ್ಯವಾಗಿ ಮತಕ್ಕೆ ಹಾಕಿತು. ಬಿಜೆಪಿ ಹಾಗೂ ವಿರೋಧ ಪಕ್ಷದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇತ್ತ ಆಡಳಿತ ಪಕ್ಷದ ಐವರು ಸದಸ್ಯರು ಮಾತ್ರ ಹಾಜರಿದ್ದರು. ಅನಿವಾರ್ಯವಾಗಿ ಬಿಲ್ ಮತಕ್ಕೆ ಹಾಕಲಾಯಿತು. ಈ ವೇಳೆ ವಿಪಕ್ಷಗಳ ಸಂಖ್ಯಾಬಲ ಹೆಚ್ಚಿದ್ದ ಕಾರಣ ಬಿಲ್ ಪಾಸ್ ಆಗಲಿಲ್ಲ.  

ಶ್ರೀಮಂತ ದೇಗುಲದ 10% ಆದಾಯ ಸರ್ಕಾರಕ್ಕೆ; 'ದೇಗುಲ ಆದಾಯದ ಮೇಲೆ ಸರ್ಕಾರದ ಕ್ರೂರ ದೃಷ್ಟಿ; ವಿಜಯೇಂದ್ರ ಕಿಡಿ

click me!