
ಜನಿವಾರ ತೆಗೆಸಿದ ಪ್ರಕರಣದ ಹೋರಾಟಕ್ಕೆ ಟ್ವಿಸ್ಟ್ ಸಿಕ್ಕಿದೆ. ಹಿಜಾಬ್ ತೆಗೆಸಿದಾಗ ಮಾತನಾಡದವರು ಈಗ ಜನಿವಾರ ತೆಗೆದಾಗ ನ್ಯಾಯ ಕೇಳುತ್ತಿದ್ದಾರೆ. ಜನಿವಾರ ಬ್ರಾಹ್ಮಣರಿಗೆ ಎಷ್ಟು ಮುಖ್ಯವೋ ಹಿಜಾಬ್ ನಮಗೆ ಅಷ್ಟೇ ಮುಖ್ಯ ಎಂದು ಹಿಜಾಬ್ ಹೋರಾಟಗಾರ್ತಿ ಅಲಿಯ ಅಸಾದಿ ಟ್ವೀಟ್ (Hijab activist Aliya Asadi) ಮಾಡಿದ್ದಾರೆ. ಈ ಕುರಿತು ಕೆಲ ಮುಸ್ಲಿಂ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ, ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹಮದ್ ಜೊತೆ ನಮ್ಮ ಉಡುಪಿ ಪ್ರತಿನಿಧಿ ನಡೆಸಿರುವ ಚಿಟ್ ಚ್ಯಾಟ್ ಇಲ್ಲಿದೆ.
ಹಿಜಾಬ್ ಹೋರಾಟಗಾರ್ತಿ ಅಲಿಯಾ ಅಸಾದಿ ಟ್ವೀಟ್ ವಿಚಾರದ ಬಗ್ಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅಹಮದ್ ಅವರು, ಅಲಿಯ ಅಸಾದಿ ಮಾಡಿರುವ ಟ್ವೀಟ್ ನೋಡಿದೆ. ಆಕೆ ಹೇಳಿರುವ ಕೆಲ ವಿಚಾರಗಳು ಸರಿಯಾಗಿದೆ. ಹಿಜಾಬ್ ಕಳಚಿದ ಅಧಿಕಾರಿಯನ್ನು ಅಮಾನತು ಮಾಡಿಲ್ಲ. ಜನಿವಾರ ಕಳಚಿದ ಅಧಿಕಾರಿ ಅಮಾನತು ಮಾಡಿದ್ದೀರಿ. ನಮಗೆ ಪರೀಕ್ಷೆ ಇಲ್ಲದೆ ಒಂದು ವರ್ಷ ಹಾಳಾಗಿದೆ. ಈಗ ಮರು ಪರೀಕ್ಷೆಗೆ ಸಮಿತಿ ರಚನೆ ಮಾಡಿದ್ದೀರಿ ಇದು ಸರೀನಾ ಎಂದು ಕೇಳಿದ್ದಾರೆ.
ಜನಿವಾರ ತೆಗೆಸಿದ ವಿಚಾರದ ಬಗ್ಗೆ ತನಿಖೆ ಮಾಡಲು ಸಮಿತಿ ರಚನೆ ಮಾಡುವುದೇ ಆದಲ್ಲಿ, ಬುರ್ಖಾ ತೆಗೆಸಿದ್ದ ವೇಳೆ ಯಾಕೆ ಮಾಡಿಲ್ಲ. ಸರ್ಕಾರದ ಮುಂದೆ ಮುಸಲ್ಮಾನರು ನಿಮಗೆ ಅಷ್ಟು ಕನಿಷ್ಠಾನಾ? ಹಿಜಾಬ್ ಬಗ್ಗೆ ನಿಮಗೆ ಯಾಕೆ ಅಷ್ಟು ಕೀಳರಿಮೆ? ನಮಗೂ ಸಮಿತಿ ರಚಿಸಿ, ರೀ ಎಕ್ಸಾಮ್ ಮಾಡಿಸಬಹುದಿತ್ತಲ್ಲ. ಈ ವಿಚಾರದ ಬಗ್ಗೆ ಅಲಿಯ ಜೊತೆ ನನ್ನ ಸಹಮತ ಇದೆ. ಜನಿವಾರ ತೆಗೆದದ್ದು ಸರಿ ಅನ್ನೋದನ್ನು ನಾನು ಒಪ್ಪಲ್ಲ. ಮುಸಲ್ಮಾನರಿಗೆ ಹಿಜಾಬ್ ಎಷ್ಟು ಮುಖ್ಯವೋ ಬ್ರಾಹ್ಮಣರಿಗೆ ಜನಿವಾರ ಅಷ್ಟೇ ಮುಖ್ಯ. ಶಿಕ್ಷಣದ ವಿಚಾರದಲ್ಲಿ ಧರ್ಮ ತರಬೇಡಿ ಎಂದು ಹೇಳಿದರು.
ಇದನ್ನೂ ಓದಿ: ಜನಿವಾರ ತೆಗೆಸಿದ ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ ಸಿದ್ದರಾಮಯ್ಯ
ಯಾರದ್ದೇ ಆಗಲಿ ಹಿಜಾಬು ಜನಿವಾರ ಕಳಚುವುದು ಸರಿಯಲ್ಲ. ಇದು ಕೆಟ್ಟ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಷಣದ ವಿಚಾರದಲ್ಲಿ ಹಿಜಾಬ್ ಜನಿವಾರ ವಿಚಾರ ಮಧ್ಯ ತರಬೇಡಿ. ಮಕ್ಕಳದ ಶಿಕ್ಷಣದ ಹಕ್ಕನ್ನು ಕಸಿಯಬೇಡಿ. ಒಬ್ಬರಿಗೆ ಸಮಸ್ಯೆ ಬಂದಾಗ ಎಲ್ಲರೂ ಒಟ್ಟಾಗಬೇಕು. ಹಿಜಾಬು ಹೋರಾಟದ ಸಂದರ್ಭ ಎಲ್ಲರೂ ಒಟ್ಟಾಗಿದ್ದರೆ, ಈಗ ಜನಿವಾರ ಕಳುಹಿಸುತ್ತಿರಲಿಲ್ಲ. ಹಿಂದೂ ಮುಸ್ಲಿಂ ಎಲ್ಲರೂ ಒಟ್ಟಾಗ ಬೇಕಿತ್ತು. ಅಂದು ಒಗ್ಗಟ್ಟಾಗಿದ್ದರೆ ಈಗ ಎರಡು ಬಾರಿ ಸರಕಾರ ಯೋಚನೆ ಮಾಡುತ್ತಿತ್ತು. ಜನಿವಾರ ಕಳಿಸಿದ್ದಕ್ಕೆ ಮುಸಲ್ಮಾನರ ಸಂತೋಷ ಪಡಬೇಕಾಗಿಲ್ಲ. ಅದರ ವಿರುದ್ಧ ನಾವು ಹೋರಾಟ ಮಾಡಬೇಕು. ಧಾರ್ಮಿಕ ಮತ್ತು ಶಿಕ್ಷಣ 2 ಬೇರೆ ಬೇರೆ ಎಂದರು.
ಘಟನೆಯ ಹಿನ್ನೆಲೆಯೇನು?
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯ ವೇಳೆ ಪರೀಕ್ಷೆ ಬರೆಯಲು ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಪರಿಶೀಲನೆ ಮಾಡಿದಾಗ ಜನಿವಾರ ಧರಿಸಿದ ವಿದ್ಯಾರ್ಥಿಗಳನ್ನು ಒಳಗೆ ಬಿಡಲಿಲ್ಲ. ಈ ವೇಳೆ ಜನಿವಾರವನ್ನು ಬಿಚ್ಚಿ ಪರೀಕ್ಷಾ ಕೇಂದ್ರದ ಒಳಗೆ ಹೋಗುವಂತೆ ಸೂಚಿಸಲಾಗಿದೆ. ಆದರೆ, ಒಬ್ಬ ವಿದ್ಯಾರ್ಥಿ ಜನಿವಾರ ಬಿಚ್ಚಿ ಎಂದು ಹೇಳುವುದಾರೆ ಪರೀಕ್ಷೆಗೆ ಹೋಗುವುದಿಲ್ಲ ಎಂದು ಹಠ ಮಾಡಿದ್ದಾನೆ. ಈ ವೇಳೆ ಆತ ಪರೀಕ್ಷೆಯಿಂದಲೇ ಹೊರಗೆ ಉಳಿದಿದ್ದು, ಮಾಧ್ಯಮಗಳ ಮುಂದೆ ತನಗಾದ ಅನ್ಯಾಯ ಹೇಳಿಕೊಂಡಿದ್ದಾನೆ. ಇದೀಗ ಜನಿವಾರ ಪರಿಶೀಲನೆ ಮಾಡಿದ ಹಾಗೂ ಒಳಗೆ ಬಿಡಲೊಪ್ಪದ ಗೃಹರಕ್ಷಕ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಜೊತೆಗೆ, ಇದಕ್ಕ ಕಾರಣರಾರು ಎಂಬುದನ್ನು ಪತ್ತೆ ಮಾಡಲು ಸಮಿತಿ ರಚನೆ ಮಾಡಲಾಗಿದೆ.
ಇದನ್ನೂ ಓದಿ: ನಿಲ್ಲದ ಜನಿವಾರ್: ರಾಜ್ಯವ್ಯಾಪಿ ಹೋರಾಟ, ಸರ್ಕಾರದ ವಿರುದ್ಧ ಆಕ್ರೋಶ
ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ ಪಿಯುಸಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಹಿಜಾಬ್ ತೆಗೆಯುವಂತೆ ಆದೇಶ ಹೊರಡಿಸಲಾಗಿತ್ತು. ಆದರೆ, ಈ ವೇಳೆ ಕೆಲವು ಮಹಿಳಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದರಿಂದಲೇ ಹೊರಗುಳಿದಿದ್ದರು. ಹಿಜಾಬ್ ಧರಿಸಿ ಪರೀಕ್ಷೆಗೆ ಅವಕಾಶವಿಲ್ಲ ಎಂಬ ವಿವಾದ ರಾಜ್ಯ ಹಾಗೂ ದೇಶದಾದ್ಯಂತ ಭಾರೀ ವಿವಾದವಾಗಿತ್ತು. ಈ ವೇಳೆ ಪರೀಕ್ಷೆ ನಿರಾಕರಿಸಿದ್ದ ವಿದ್ಯಾರ್ಥಿನಿ ಅಲಿಯ ಅಸಾದಿ ಹಿಜಾಬ್ ಹೋರಾಟಗಾರ್ತಿ ಆಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ