ನ್ಯಾ.ಎಂ. ನಾಗಪ್ರಸನ್ನ ಅವರ ನ್ಯಾಯಪೀಠದಿಂದ ಆದೇಶ ಹೊರಬೀಳಲಿದೆ. ವಾದ-ಪ್ರತಿವಾದವನ್ನ ಆಲಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ನಾಳೆ ಮಧ್ಯಾಹ್ನ 2.30ಕ್ಕೆ ತೀರ್ಪು ಪ್ರಕಟವಾಗಲಿದೆ. ಹೀಗಾಗಿ ಎಚ್.ಡಿ. ರೇವಣ್ಣ ಅವರಿಗೆ ಈಗಿನಿಂದಲೇ ತಳಮಳ ಶುರುವಾಗಿದೆ.
ಬೆಂಗಳೂರು(ಆ.27): ಅತ್ಯಾಚಾರ, ಸಂತ್ರಸ್ತೆಯನ್ನ ಕಿಡ್ನಾಪ್ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಬಿಗ್ ಡೇ ಆಗಲಿದೆ. ಹೌದು, ಜಾಮೀನು ರದ್ದುಪಡಿಸುವಂತೆ ಕೋರಿ ಎಸ್ಐಟಿ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು.
ಅರ್ಜಿ ಸಂಬಂಧ ಹೈಕೋರ್ಟ್ ನಾಳೆ(ಬುಧವಾರ) ಆದೇಶ ಪ್ರಕಟಿಸಲಿದೆ. ಇದೇ ವೇಳೆ ಅಪಹರಣ ಪ್ರಕರಣದ ಇತರೆ ಆರೋಪಿಗಳಾದ ಎಚ್.ಕೆ. ಸುಜಯ್, ಸತೀಶ್ ಬಾಬಣ್ಣ, ರಾಜಗೋಪಾಲ, ಮಾವುಗೌಡ ಅವರ ಜಾಮೀನು ಅರ್ಜಿ ಆದೇಶ ಕೂಡ ಪ್ರಕಟಿಸಲಿದೆ.