ದೇಶದ ಅತ್ಯಂತ ಕಠಿಣ ಜೈಲಿಗೆ ದರ್ಶನ್‌ ಶಿಫ್ಟ್, ಬಳ್ಳಾರಿ ಜೈಲಿನ ಇತಿಹಾಸ ತಿಳಿಯಲೇಬೇಕು!

By Gowthami KFirst Published Aug 27, 2024, 8:34 PM IST
Highlights

ಒಂದು ಕಾಲದಲ್ಲಿ ಕಠಿಣ ಜೈಲುಗಳ ತಾಣವಾಗಿದ್ದ ಬಳ್ಳಾರಿ, ಸ್ವಾತಂತ್ರ್ಯ ಹೋರಾಟಗಾರರಿಂದ ಹಿಡಿದು ರಾಜಕೀಯ ನಾಯಕರವರೆಗೆ ಹಲವರನ್ನು ಬಂಧಿಸಿ ಇರಿಸಿದ್ದ ಜಾಗವಾಗಿತ್ತು. ಬ್ರಿಟಿಷರಿಂದ ಸ್ಥಾಪಿತವಾದ ಈ ಜೈಲು, ಇಂದು ಕೂಡ ತನ್ನ ಕಠಿಣ ವ್ಯವಸ್ಥೆಗೆ ಹೆಸರುವಾಸಿಯಾಗಿದೆ.

ಬೆಂಗಳೂರು (ಆ.27): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್‌ನನ್ನು ಬೆಂಗಳೂರು ಕೇಂದ್ರಕಾರಾಗೃಹದಿಂದ ಬಳ್ಳಾರಿ ಕೇಂದ್ರ ಜೈಲಿಗೆ ಶೀಪ್ಟ್ ಮಾಡಲಾಗುತ್ತಿದೆ ಎಂಬ ಸುದ್ದಿ ಬೆನ್ನಲ್ಲೇ ಬಳ್ಳಾರಿ ಜೈಲು ಈಗ  ಹೆಚ್ಚು ಮುನ್ನಲೆಗೆ ಬರುತ್ತಿದೆ. ಬಳ್ಳಾರಿ ಜೈಲಿನ ಇತಿಹಾಸ ಬಗ್ಗೆ ಜನ ಹುಡುಕಲು ಆರಂಭಿಸಿದ್ದಾರೆ. ಬಳ್ಳಾರಿ ಜೈಲು ಯಾಕೆ ಅಷ್ಟೊಂದು ಫೇಮಸ್‌ ಎಂದು ಹುಡುಕಾಟ ನಡೆಯುತ್ತಿದೆ ಅದಕ್ಕೆ ಉತ್ತರ ಇಲ್ಲಿದೆ.

ಗಣಿನಾಡು ಎಂದು ಪ್ರಸಿದ್ಧಿಯಾಗಿರುವ ಬಳ್ಳಾರಿ ಈ ಮೊದಲು ಜೈಲುಗಳ ತಾಣವಾಗಿತ್ತು. ಇಂದಿಗೂ ಕೂಡ ದೇಶದ ಅತ್ಯಂತ ಕಠಿಣ ಜೈಲುಗಳಲ್ಲಿ ಬಳ್ಳಾರಿ ಜೈಲು ಕೂಡ ಒಂದಾಗಿದೆ. ದೇಶದ್ರೋಹಿಗಳನ್ನು ಹಿಂಸಿಸಲು, ಶಿಕ್ಷೆ ನೀಡಲು ಹೇಳಿ ಮಾಡಿಸಿದ ಅಂಡಮಾನ್ ಜೈಲು ಬಿಟ್ಟರೆ ದೇಶದಲ್ಲಿ ಬಳ್ಳಾರಿ ಜೈಲು ಎರಡನೇ ಅತೀ ಕಠಿಣ ಜೈಲು ಎಂಬ ಸ್ಥಾನ ಪಡೆದಿದೆ ಎಂದು ವರದಿ ಹೇಳುತ್ತವೆ. ತಪ್ಪು ಮಾಡಿದಾಗ ನಿನ್ನನ್ನು ಬಳ್ಳಾರಿ ಜೈಲಿಗೆ ಕಳುಹಿಸುತ್ತೇನೆ ಎಂಬ ಮಾತು ಸಾಮಾನ್ಯವಾಗಿ ಆಡುವುದಿದೆ. ಸಿನೆಮಾಗಳಲ್ಲೂ ಈ ಬಗ್ಗೆ ಡೈಲಾಗ್‌ ಕೇಳುತ್ತೇವೆ.

Latest Videos

ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್, ಉಳಿದ ಆರೋಪಿಗಳು ಇತರೆಡೆಗೆ ಸ್ಥಳಾಂತರ, ಡಿ ಗ್ಯಾಂಗ್ ದಿಕ್ಕಾಪಾಲು

1800 ರಲ್ಲಿ ಬಳ್ಳಾರಿಯನ್ನು ಮದ್ರಾಸ್ ಪ್ರೆಸಿಡೆನ್ಸಿಯೊಂದಿಗೆ ವಿಲೀನಗೊಳಿಸಿದ ನಂತರ, ಬ್ರಿಟಿಷರು ಇಲ್ಲಿ ಮೂರು ಜೈಲುಗಳನ್ನು ಸ್ಥಾಪಿಸಿದರು. ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ 1872 ರಲ್ಲಿ ಮೊದಲ ಕಾರಾಗೃಹವನ್ನು ಸ್ಥಾಪಿಸಲಾಯಿತು ಮತ್ತು ಇದನ್ನು ಕೇಂದ್ರ ಕಾರಾಗೃಹ ಎಂದು ಕರೆಯಲಾಯಿತು. 

ಎರಡನೆಯದು ಅಲಿಪುರ ಬಯಲು ಜೈಲು, ಮತ್ತು ಮೂರನೆಯದು ಆರ್ಥರ್ ವೆಲ್ಲಿಸ್ಲಿ ಟಿ ಬಿ ಸ್ಯಾನಿಟೋರಿಯಂ ಜೈಲು, ಈ ಜೈಲಿನಲ್ಲಿ ಯುದ್ಧ ಕೈದಿಗಳನ್ನು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟೀಷರು ಕೂಡಿ ಹಾಕುತ್ತಿದ್ದರು. ಬಳ್ಳಾರಿ ಕೇಂದ್ರ ಕಾರಾಗೃಹವನ್ನು ಇನ್ನೂ ಬಳಸಲಾಗುತ್ತಿದೆ. 

ಬಳ್ಳಾರಿ ಕೇಂದ್ರ ಕಾರಾಗೃಹ ಹೊರತುಪಡಿಸಿ ಅಲಿಪುರ ಜೈಲು ಈಗ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಾಗಿ ಮಾರ್ಪಾಟಾಗಿದೆ. ಟಿ ಬಿ ಸ್ಯಾನಿಟೋರಿಯಂ ಜೈಲು ಕಿವುಡು ಮತ್ತು ಮೂಗು ಮಕ್ಕಳ ಆಶ್ರಮವಾಗಿ ಮಾರ್ಪಾಟಾಗಿದೆ. ಅಂದು ಬ್ರಿಟೀಷರು ಕಟ್ಟಿದ ಈ ಕಟ್ಟಡ  ಎಂಟು ದಶಕಗಳೇ ಕಳೆದರೂ ಗಟ್ಟಿಯಾಗಿಯೇ ಇದೆ.

ದರ್ಶನ್ ಅತ್ಯಾಚಾರಿಯೆಂದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ, ರೊಚ್ಚಿಗೆದ್ದ ಅಭಿಮಾನಿಗಳು

ದೇಶದ ಕೆಲವೇ ಕೆಲವು ಜೈಲುಗಳಲ್ಲಿ ಮಾತ್ರ ಗಲ್ಲುಶಿಕ್ಷೆಯ ವ್ಯವಸ್ಥೆಯಿದೆ.  ದೇಶದ ಪುರಾತನ ಜೈಲಾದ ಬಳ್ಳಾರಿಯಲ್ಲಿಯೂ  ಈ ವ್ಯವಸ್ಥೆ ಇದೆ. ಸ್ವಾತಂತ್ರದ ಹೋರಾಟ ಕಿಚ್ಚು ಹೆಚ್ಚಾದಾಗ ಬಳ್ಳಾರಿ ಕೇಂದ್ರ ಜೈಲಿನಲ್ಲಿ ಜಾಗವಿಲ್ಲದ್ದಕ್ಕೆ ಬಳ್ಳಾರಿ ಹೊರವಲಯದ ಅಲಿಪುರದ ಬಳಿ ಓಪನ್ ಜೈಲು ಆರಂಭಿಸಿ ಅಲ್ಲಿ 11 ಸಾವಿರ ಪೊಲೀಸರ ಮಧ್ಯೆ ಒಂದುವರೆ ಸಾವಿರದಷ್ಟು ಖೈದಿಗಳು ಬಯಲಿನಲ್ಲಿ ಇರಿಸಲಾಯ್ತು. ಇನ್ನು ಮೂರನೇ ಜೈಲನ್ನು ವೆಲ್ಲೆಸ್ಲಿ ಸ್ಥಾಪಿಸಿದ್ಧ ಈತ  ಬಳ್ಳಾರಿಯಲ್ಲಿ ಕೆಲ ಕಾಲ ಬ್ರಿಟಿಷ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಆಗ 350ಕ್ಕೂ ಹೆಚ್ಚು ಟಿ ಬಿ ರೋಗ ಸಂಬಂಧಿ ಕೈದಿಗಳಿಗಾಗಿಯೇ ತೆರೆಯಲಾಗಿತ್ತು. 

ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ವೇಳೆ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ ಅವರನ್ನು ಬಳ್ಳಾರಿ ಜೈಲಿನಲ್ಲಿಡಲಾಗಿತ್ತಂತೆ.  ಬಳ್ಳಾರಿ ಜೈಲಿಗೆ 1905 ಬಾಲ ಗಂಗಾಧರ ತಿಲಕ್ , 1937ರಲ್ಲಿ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಕೂಡ ಭೇಟಿ ನೀಡಿದ್ದರು. ಮಹಾತ್ಮ ಗಾಂಧೀಜಿ ಎರಡು ಬಾರಿ ಭೇಟಿ ನೀಡಿದ್ದಾರೆ. ಚಕ್ರವರ್ತಿ ರಾಜಗೋಪಾಲಾಚಾರಿ, ದ್ರಾವಿಡ ಚಳುವಳಿಯ ನೇತಾರ ಅಣ್ಣಾ ದೊರೈ, 1942ರ ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ವಿದೇಶಿ ಬಂಧಿಗಳನ್ನು ಬಳ್ಳಾರಿಯ ಜೈಲುಗಳಲ್ಲಿ ಬಂಧಿಸಿಡಲಾಗಿತ್ತು ಎನ್ನುವುದು ಗಮನಾರ್ಹ ಸಂಗತಿ.

ಬಳ್ಳಾರಿ ಜಿಲ್ಲೆಗೆ ಪ್ರಾಮುಖ್ಯತೆಗೆ ಬಂದದ್ದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಇದಕ್ಕೆ ಮೊದಲು ಈ ಪ್ರದೇಶ ಶಾತವಾಹನ, ಕಲ್ಯಾಣಿ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಬಳ್ಳಾರಿ ಜಿಲ್ಲೆಯಲ್ಲೇ ರಾಜಧಾನಿಯನ್ನು ಹೊಂದಿದ್ದರಿಂದ ಆ ಸಮಯದಲ್ಲಿ ಈ ಜಿಲ್ಲೆ ಪ್ರಾಮುಖ್ಯತೆಗೆ ಪಡೆದಿತ್ತು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆ 1953 ರಲ್ಲಿ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು. ಆಂಧ್ರಪ್ರದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮತ್ತು ಸೀಸದ ಗಣಿಗಳು ಸಾಕಷ್ಟಿವೆ.

click me!