'ವಿದ್ಯಾರ್ಥಿನಿಯರಿಗೆ ನ್ಯಾಪ್‌ಕಿನ್ ಪ್ಯಾಡ್‌ '

By Kannadaprabha NewsFirst Published Apr 29, 2021, 9:16 AM IST
Highlights

10ರಿಂದ 19 ವರ್ಷದೊಳಗಿನ ಪ್ರೌಢಾವಸ್ಥೆಯ ಬಾಲಕಿಯರಿಗೆ ನ್ಯಾಪ್‌ಕಿನ್‌/ಪ್ಯಾಡ್‌ಗಳನ್ನು ಒದಗಿಸಲು ‘ಶುಚಿ’ ಯೋಜನೆಯಡಿ ರಾಜ್ಯ ಸರ್ಕಾರ ಕಾರ್ಯಯೋಜನೆ ಜಾರಿಗೆ ತರಬೇಕು ಎಂದು ಹೈ ಕೋರ್ಟ್ ಸೂಚನೆ ನೀಡಿದೆ. 

ಬೆಂಗಳೂರು (ಏ.29): 2021-22ನೇ ಶೈಕ್ಷಣಿಕ ಸಾಲಿನಲ್ಲಿ ಪ್ರೌಢಾವಸ್ಥೆಯ ಶಾಲಾ ವಿದ್ಯಾರ್ಥಿನಿಯರಿಗೆ ‘ಶುಚಿ’ ಯೋಜನೆಯಡಿ ಸ್ಯಾನಿಟರಿ ನ್ಯಾಪ್‌ಕಿನ್‌/ಪ್ಯಾಡ್‌ಗಳನ್ನು ಕಾಲಮಿತಿಯೊಳಗೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ರಾಜ್ಯದ ಶಾಲೆಗಳ ಸ್ಥಿತಿಗತಿ ಹಾಗೂ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ‘ಆ್ಯಂಟಿ ಕರಪ್ಷನ್‌ ಕೌನ್ಸಿಲ್‌ ಆಫ್‌ ಇಂಡಿಯಾ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಜತೆಗೆ, ಈ ಆದೇಶದ ಅನುಪಾಲನಾ ವರದಿಯನ್ನು ಮೇ 31ಕ್ಕೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು. 10ರಿಂದ 19 ವರ್ಷದೊಳಗಿನ ಪ್ರೌಢಾವಸ್ಥೆಯ ಬಾಲಕಿಯರಿಗೆ ನ್ಯಾಪ್‌ಕಿನ್‌/ಪ್ಯಾಡ್‌ಗಳನ್ನು ಒದಗಿಸಲು ‘ಶುಚಿ’ ಯೋಜನೆಯಡಿ ರಾಜ್ಯ ಸರ್ಕಾರ ಕಾರ್ಯಯೋಜನೆ ಜಾರಿಗೆ ತರಬೇಕು.ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಒದಗಿಸಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ಸೂಚಿಸಿತು.

ಪಿರಿಯಡ್ಸ್ ನೋವು ಕಡಿಮೆಯಾಗಲು ಸೆಲೆಬ್ರಿಟಿ ಡಯಟೀಶಿಯನ್ ನೀಡಿದ ಟಿಪ್ಸ್! ..

ವಿಚಾರಣೆ ವೇಳೆ ಸರ್ಕಾರಿ ವಕೀಲರು ಮೆಮೊ ಸಲ್ಲಿಸಿ, ಏಪ್ರಿಲ್‌ ತಿಂಗಳ ಕೊನೆಯಲ್ಲಿ ತಾಂತ್ರಿಕ ಸಮಿತಿಯು ಸಭೆ ನಡೆಸಲಿದೆ. ಮೇ ತಿಂಗಳಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದು, ನಂತರದ 60 ದಿನಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌/ಪ್ಯಾಡ್‌ಗಳನ್ನು ಖರೀದಿಸಲಾಗುತ್ತದೆ. ಶಾಲೆಗಳು ಮುಚ್ಚಿರುವುದರಿಂದ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ನ್ಯಾಪ್‌ಕಿನ್‌/ಪ್ಯಾಡ್‌ ವಿತರಿಸಲಿದ್ದಾರೆ, ಶಾಲೆ ಆರಂಭವಾದರೆ  ಅಲ್ಲಿಯೇ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಮುಟ್ಟನ್ನು ಕಾಯಿಲೆ ಎಂದುಕೊಂಡಿರುತ್ತಾರಂತೆ ಶೇ.38 ಹುಡುಗಿಯರು! .

ಅದನ್ನು ಪರಿಗಣಿಸಿದ ನ್ಯಾಯಪೀಠ, ಹೆಣ್ಣುಮಕ್ಕಳ ಸಬಲೀಕರಣಕ್ಕೆ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗ ಹಾಗೂ ದೂರದ ಸ್ಥಳಗಳಲ್ಲಿ ವಾಸಿಸುವ, ಶಿಕ್ಷಣಕ್ಕಾಗಿ ಹಳ್ಳಿಗಳಿಂದ ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಿಗೆ ಪ್ರಯಾಣಿಸುವ ಹೆಣ್ಣುಮಕ್ಕಳಿಗೆ ಆತ್ಮಸ್ಥೆ$ೖರ್ಯ ತುಂಬಲು ಅವರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌/ ಪ್ಯಾಡ್‌ಗಳನ್ನು ಒದಗಿಸಬೇಕಿದೆ. ಮುಟ್ಟಿನ ಸಂದರ್ಭದಲ್ಲಿ ಪರಿಣಾಮಕಾರಿ ಈ ಉತ್ಪನ್ನಗಳು ಲಭ್ಯವಾಗದೇ ತಿಂಗಳಲ್ಲಿ ಕೆಲ ದಿನಗಳು ಶಾಲೆಗಳಲ್ಲಿ ಹಾಜರಾತಿ ಕಳೆದುಕೊಳ್ಳುವಂತಾಗಬಾರದು. ಆದ್ದರಿಂದ, 10ರಿಂದ 19 ವರ್ಷದೊಳಗಿನ ಪ್ರೌಢಾವಸ್ಥೆಯ ಬಾಲಕಿಯರಿಗೆ ನ್ಯಾಪ್‌ಕಿನ್‌/ಪ್ಯಾಡ್‌ಗಳನ್ನು ಒದಗಿಸಲು ‘ಶುಚಿ’ ಯೋಜನೆಯಡಿ ರಾಜ್ಯ ಸರ್ಕಾರ ಕಾರ್ಯಯೋಜನೆ ಜಾರಿಗೆ ತರಬೇಕು.ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಒದಗಿಸಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ಸೂಚಿಸಿತು.

click me!