ಕುಡುಕ ಅಪ್ಪ ಮಾಡಿಸಿದ ಎನ್‌ಎ ರದ್ದತಿಗೆ ಹೈಕೋರ್ಟ್ ನಕಾರ..!

Published : Feb 28, 2024, 09:43 AM IST
ಕುಡುಕ ಅಪ್ಪ ಮಾಡಿಸಿದ ಎನ್‌ಎ ರದ್ದತಿಗೆ ಹೈಕೋರ್ಟ್ ನಕಾರ..!

ಸಾರಾಂಶ

ಶಿವಮೊಗ್ಗ ಜಿಲ್ಲೆಯ ವಿನೋಬಾ ನಗರದ ನಿವಾಸಿಗಳಾದ ಮೃತ ಹನುಮಂತಪ್ಪ ಅವರ ಪುತ್ರ ರಮೇಶ್‌ ಹಾಗೂ ಮೂವರು ಪುತ್ರಿಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಆರ್.ದೇವದಾಸ್ ಅವರ ಪೀಠ, ಭೂ ಪರಿವರ್ತನೆ ಆದೇಶ ಪ್ರಶ್ನಿಸಲು ಅರ್ಜಿ ದಾರರು ನೀಡಿರುವ ಕಾರಣಕ್ಕೆ ಕಾನೂನಬದ್ಧ ಮಾನ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.

ವೆಂಕಟೇಶ್ ಕಲಿಪಿ

ಬೆಂಗಳೂರು(ಫೆ.28): 'ನಮ್ಮ ತಂದೆ ಮದ್ಯ ವ್ಯಸನಿಯಾಗಿದ್ದು, ನಮ್ಮ ಒಪ್ಪಿಗೆಯಿಲ್ಲದೇ ಎರಡು ಎಕರೆ ಕೃಷಿ ಜಮೀನನ್ನು ಕೃಷಿಯೇತರವೆಂದು ಪರಿವರ್ತಿಸಿ ಕೊಂಡುಮಾರಾಟಮಾಡಿದ್ದಾರೆ. ಆದಕಾರಣ ಜಿಲ್ಲಾಧಿಕಾರಿಯ ಭೂ ಪರಿವರ್ತನೆ ಆದೇಶ ರದ್ದುಪಡಿಸಬೇಕು' ಎಂದು ಕೋರಿ ಕುಟುಂಬ ವೊಂದರ ನಾಲ್ವರು ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸಾರಾಸಟಾಗಿ ತಿರಸ್ಕರಿಸಿ ಆದೇಶಿಸಿದೆ.

ಶಿವಮೊಗ್ಗ ಜಿಲ್ಲೆಯ ವಿನೋಬಾ ನಗರದ ನಿವಾಸಿಗಳಾದ ಮೃತ ಹನುಮಂತಪ್ಪ ಅವರ ಪುತ್ರ ರಮೇಶ್‌ ಹಾಗೂ ಮೂವರು ಪುತ್ರಿಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಆರ್.ದೇವದಾಸ್ ಅವರ ಪೀಠ, ಭೂ ಪರಿವರ್ತನೆ ಆದೇಶ ಪ್ರಶ್ನಿಸಲು ಅರ್ಜಿ ದಾರರು ನೀಡಿರುವ ಕಾರಣಕ್ಕೆ ಕಾನೂನಬದ್ಧ ಮಾನ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.

ವಾಹನದ ನಂಬರ್‌ ಪ್ಲೇಟಲ್ಲಿ ಸರ್ಕಾರದ ಲಾಂಛನ, ಚಿಹ್ನೆ ದುರ್ಬಳಕೆ: ಹೈಕೋರ್ಟ್ ನೋಟಿಸ್

ಹಲವು ಕಾರಣಗಳಿಂದ ಅರ್ಜಿಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲದಂತಾಗಿದೆ. ಮೊದಲಿಗೆ ಹನುಮಂತಪ್ಪ ಅವರ ಎರಡು ಎಕರೆ ಜಮೀನನ್ನು ಭೂ ಪರಿವರ್ತನೆ ಮಾಡಿ 1986ರ ಫೆ.10ರಂದು ಜಿಲ್ಲಾಧಿಕಾರಿ ಆದೇಶಿ ಸಿದ್ದಾರೆ. 35 ವರ್ಷಗಳನಂತರ ಅರ್ಜಿದಾರರು ಈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಲ್ಲಿ ಆಗಿರುವ ಸುದೀರ್ಘ ವಿಳಂಬವನ್ನು ಒಪ್ಪಲಾ ಗದು. ಜತೆಗೆ ಜಿಲ್ಲಾಧಿಕಾರಿಯ ಆದೇಶವನ್ನು ಪ್ರಶ್ನಿಸಿರುವುದಕ್ಕೆ ಅರ್ಜಿದಾರರು ನೀಡಿರುವ ಕಾರಣಕ್ಕೆ ಕಾನೂನುಬದ್ಧವಾಗಿಲ್ಲ. ಹಾಗಾಗಿ, ಅರ್ಜಿಯಲ್ಲಿ ಯಾವುದೇ ಮೆರಿಟ್ ಇಲ್ಲದ ಕಾರಣ, ಅದನ್ನು ತಿರಸ್ಕರಿಸಲಾಗುತ್ತಿದೆ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ವಿವರ: 

ಶಿವಮೊಗ್ಗ ತಾಲೂಕಿನ ಅಲ್ಲೊಲ ಗ್ರಾಮದ ನಿವಾಸಿ ಹನುಮಂತಪ್ಪ, ಗ್ರಾಮದ ಸರ್ವೇ ನಂ 13ರಲ್ಲಿನ 2 ಎಕರೆ 15 ಗುಂಟೆ ಕೃಷಿ ಜಮೀನಿನ ಮಾಲೀಕರಾಗಿದ್ದರು. ಈಜಮೀನನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸಲು ಭೂ ಪರಿವರ್ತನೆಗೆ ಅನುಮತಿ ಕೋರಿ 1986 ರಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಪುರಸ್ಕರಿಸಿದ್ದ ಶಿವಮೊಗ್ಗ ಜಿಲ್ಲಾಧಿಕಾರಿ, ಹನುಮಂತಪ್ಪ ಅವರ ಜಮೀನಿನ ಭೂ ಪರಿವರ್ತನೆಗೆ ಅನು ಮತಿ ನೀಡಿ 1986ರ ಫೆ.2ರಂದು ಆದೇಶಿಸಿ ದ್ದರು. ಆದೇಸದ ನಂತರ ಹನುಮಂತಪ್ಪ ಆ ಜಮೀನನ್ನು ಮಾರಾಟ ಮಾಡಿದ್ದರು. ಭೂಪರಿವರ್ತನೆಗೆ ಜಿಲ್ಲಾಧಿಕಾರಿ ಅನುಮತಿ ಆದೇಶ ಹೊರಬಿದ್ದು 35 ವರ್ಷಗಳ ನಂತರ 20210 4.300 ಪುತ್ರ ರಮೇಶ್, (45) ಪುತ್ರಿಯರಾದ ಮಲ್ಲಿ (61),  (59), (49) ಮತ್ತು ಕಲಾವತಿ(47) ಅವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿ ಜಿಲ್ಲಾಧಿಕಾರಿ ಆದೇಶ ವನ್ನು ರದ್ದುಪಡಿಸುವಂತೆ ಕೋರಿದ್ದರು. ನಂತರ ಅರ್ಜಿಗೆ ಅರ್ಜಿದಾರರು ನ್ಯಾಯಾಲಯದ ಕಚೇರಿ ಎತ್ತಿದ್ದ ಆಕ್ಷೇಪಣೆಗಳನ್ನು ಬಗೆಹರಿಸಿರು ವುದರಲ್ಲೇ ಎರಡೂವರೆ ವರ್ಷ ಸಮಯ ಕಳೆದುಹೋಯಿತು. ಅರ್ಜಿ ಇತ್ತೀಚೆಗೆನ್ಯಾಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಮಂಡಿಸಿ. ಹನುಮಂತಪ್ಪ ಅವರು ಮದ್ಯ ವ್ಯಸನಿಯಾಗಿದ್ದರು. ಕುಟುಂಬ ಸದಸ್ಯರ ಒಪ್ಪಿಗೆಯಿಲ್ಲದೆ 2 ಎಕರೆ 15 ಗುಂಟೆ ಜಾಗವನ್ನು ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆ ಮಾಡಿಸಿಕೊಂಡು ಜಮೀನು ಮಾರಾಟ ಮಾಡಿದ್ದಾರೆ. ಆದ್ದರಿಂದ ಭೂ ಪರಿವರ್ತನೆ ಮಾಡಿರುವ ಆದೇಶರದ್ದುಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ವಾದ ಕೋರಿದ್ದರು.

ಅನುಕಂಪದ ಉದ್ಯೋಗ ನೀಡಲು ಬ್ಯಾಂಕ್‌ ನಿರಾಕರಿಸಿದ ಕ್ರಮವನ್ನ ಎತ್ತಿ ಹಿಡಿದ ಹೈಕೋರ್ಟ್‌

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರ ಪರ ವಕೀಲರಿಗೆ ಭೂ ಅರ್ಜಿ ಸಲ್ಲಿಸಿದ್ದೀರಿ. ಇಷ್ಟು ವರ್ಷ ಏನು ಮಾಡುತ್ತೀದ್ದೀರಿ? ಇಷ್ಟು ವರ್ಷಗಳ ಕಾಲ ವಿಳಂಬ ಮಾಡಿ ಈಗ ಅರ್ಜಿ ಸಲ್ಲಿಸಿದರೆ ನ್ಯಾಯಾಲಯ ಯಾವ ಆಧಾರದ ಮೇಲೆ ಆದೇಶ ಮಾಡಲು ಸಾಧ್ಯವಾಗುತ್ತದೆ. ಅದು ಬೇರೆ ಭೂ ಮಾಲೀಕರು ಮದ್ಯ ವ್ಯಸನಿ. ಅದಕ್ಕಾಗಿ ಭೂಮಿ ಮಾರಾಟ ಎಂಬುದಾಗಿ ಹೇಳುತ್ತೀದ್ದೀರಿ, ಇಂತಹ ವಾದ ಪುರಸ್ಕರಿಸಲು ಕಾನೂನಿನಲ್ಲಿ ಯಾವ ಅವಕಾಶವಿದೆ? ನಿಮ್ಮ ವಾದಕ್ಕೆಕಾನೂನಿನಮಾನ್ಯತೆಯೇ ಇಲ್ಲ ಎಂದು ಮೌಖಿಕವಾಗಿ ಹೇಳಿತು.

ನ್ಯಾಯಾಲಯ ಕೇಳಿದ ಪ್ರಶ್ನೆಗಳಿಗೆ ಅರ್ಜಿದಾರರ ಪರ ವಕೀಲರು ನಿರುತ್ತರಾದರು. ಅಂತಿಮವಾಗಿ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರ ವಾದ ಒಪ್ಪಲು ನಿರಾಕರಿಸಿ ಅರ್ಜಿ ವಜಾಗೊಳಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!