ಮಕ್ಕಳ ಅಶ್ಲೀಲ ದೃಶ್ಯ ನೋಡಿದವನಿಗೆ ಸಿಕ್ತು ಬೇಲ್‌..!

By Kannadaprabha News  |  First Published Sep 6, 2024, 9:52 AM IST

ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಬೆಂಗಳೂರಿನ ಸೋಮನಹಳ್ಳಿ ನಿವಾಸಿ ಪವನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯ ಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಪೀಠ ಈ ಆದೇಶ ಮಾಡಿದೆ. 


ಬೆಂಗಳೂರು(ಸೆ.06):  ಅಂತರ್ಜಾಲದಲ್ಲಿ ಮಕ್ಕಳ ಅಶ್ಲೀಲ ದೃಶ್ಯ ನೋಡಿದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ 24 ವರ್ಷದ ಯುವಕನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಬೆಂಗಳೂರಿನ ಸೋಮನಹಳ್ಳಿ ನಿವಾಸಿ ಪವನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯ ಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಪೀಠ ಈ ಆದೇಶ ಮಾಡಿದೆ. 

ಪ್ರಕರಣ ಕುರಿತು ದೂರು ದಾಖಲಿಸಿರುವ ರಾಮನಗರ ಸಿಇಎನ್ ಠಾಣೆ ಅಥವಾ ಕರ್ನಾಟಕದ ಇನ್ಯಾವುದೇ ಪೊಲೀಸರು ಅರ್ಜಿದಾರರನ್ನು ಬಂಧಿಸಿದ ಸಂದರ್ಭದಲ್ಲಿ ಆತನನ್ನು ಬಿಡುಗಡೆ ಮಾಡಬೇಕು. ಸೆ.9ರಂದು ಬೆಳಗ್ಗೆ 10.30ಕ್ಕೆ ತನಿಖಾಧಿಕಾರಿ ಮುಂದೆ ಅರ್ಜಿದಾರ ಹಾಜರಾಗಬೇಕು. ವಿಚಾರಣೆ ಉದ್ದೇಶಕ್ಕಾಗಿ ಆತನನ್ನು ವಶಕ್ಕೆ ಪಡೆಯಲು ತನಿಖಾಧಿಕಾರಿ ಸ್ವತಂತ್ರರಾಗಿದ್ದಾರೆ. ಆದರೆ, ಆತನನ್ನು ಅದೇ ದಿನ ಸಂಜೆ 6 ಗಂಟೆ ಯೊಳಗೆ 1 ಲಕ್ಷ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಪಡೆದು ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ. 

Tap to resize

Latest Videos

ರಾಮ ಕೂಡ ನಾಲ್ಕ್‌ ಕೊಲೆ ಮಾಡಿದ್ದ, ದರ್ಶನ್‌ ಮಾಡಿದ್ರೆ ತಪ್ಪೇನು: ಕಿಲ್ಲಿಂಗ್‌ ಸ್ಟಾರ್‌ ಪರ ಮಾತನಾಡಿದ ಪುಂಗ ಉಮೇಶ್‌!

ಅರ್ಜಿದಾರ ಸಕಾರಣವಿಲ್ಲದೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗುವುದರಿಂದ ತಪ್ಪಿಸಿಕೊಳ್ಳಬಾರದು. ಸಾಕ್ಷ್ಯಧಾರ ನಾಶಕ್ಕೆ ಯತ್ನಿಸಬಾರದು. ತನಿಖಾಧಿಕಾರಿ ಕರೆದಾಗೆಲ್ಲಾ ಅವರ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಬೇಕು. ಇದೇ ಮಾದರಿಯ ಅಪರಾಧ ಕೃತ್ಯದಲ್ಲಿ ಭಾಗಿ ಯಾಗಬಾರದು ಎಂದು ಅರ್ಜಿದಾರನಿಗೆ ನ್ಯಾಯಪೀಠ ಷರತ್ತು ವಿಧಿಸಿ ನಿರೀಕ್ಷಣಾ ಜಾಮೀನು ನೀಡಿದೆ.

ತನಿಖೆಗೆ ಸಹಕಾರಕ್ಕೆ ಸಿದ್ಧ: 

ಮುಚ್ಚಳಿಕೆ ಅರ್ಜಿದಾರನಿಗೆ 24 ವರ್ಷವಾಗಿದ್ದು, ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಪೊಲೀಸರ ಮುಂದೆ ಹಾಜರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಸಿದ್ದನಿರುವು ದಾಗಿ ಮುಚ್ಚಳಿಕೆ ನೀಡಿರುವುದರಿಂದ ಆತನಿಗೆ ನಿರೀಕ್ಷಣಾ ಜಾಮೀನು ನೀಡಬಹು ದಾಗಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ. ಲೈಂಗಿಕ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲ ವೆಬ್ ಪೋರ್ಟಲ್ ರೂಪಿಸಿದೆ. ಅದರಂತೆ ರಾಷ್ಟ್ರೀಯ ಸೈಬರ್‌ಪೋರ್ಟಲ್/ ರಾಷ್ಟ್ರೀಯ ನಾಪತ್ತೆ ಹಾಗೂ ಶೋಷಿತ ಮಕ್ಕಳ ಕೇಂದ್ರ ನೀಡಿದ ಮಾಹಿತಿಯ ಪ್ರಕಾರ ವಿಚಾರಣೆ ಗೊತ್ತಾಗಿದೆ. 

ಸೆಷನ್ಸ್ ಕೋರಲ್ಲಿ ಬೇಲ್ ತಿರಸ್ಕೃತ 

ಅಪ್ರಾಪ್ತರ ಅಶ್ಲೀಲ ಚಿತ್ರ ವೀಕ್ಷಿಸಿದ ಹಾಗೂ ಅದನ್ನು ಸಾಮಾಜಿಕ ಜಾಲ ತಾಣಕ್ಕೆ ಅಪ್‌ ಲೋಡ್ ಮಾಡಿದ ಆರೋಪದಲ್ಲಿ ಅರ್ಜಿದಾರ ಯುವಕನ ವಿರುದ್ಧ 2023ರ ಸೆ.23ರಂದು ರಾಮ ನಗರ ಸಿಇಎನ್ ಅಪರಾದಗಳ ಠಾಣೆಯಲ್ಲಿ ಎಫ್‌ಐಆರ್‌ದಾಖಲಿಸ ಲಾಗಿತ್ತು. ಬಂಧನ ಭೀತಿಯಿಂದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ಯುವಕ ರಾಮನಗರ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಸೆಷನ್ ಕೋರ್ 2024ರ ಆ.3ರಂದು ವಜಾಗೊಳಿಸಿತ್ತು. ಇದರಿಂದ, ಹೈಕೋರ್ಟ್ ಮೆಟ್ಟಿಲೇರಿದ್ದ.

click me!