ಎತ್ತಿನಹೊಳೆ ಇಂದು ಲೋಕಾರ್ಪಣೆ: ಬರಪೀಡಿತ 7 ಜಿಲ್ಲೆಗಳಿಗೆ ನೀರೊದಗಿಸುವ ಯೋಜನೆ..!

Published : Sep 06, 2024, 07:31 AM IST
ಎತ್ತಿನಹೊಳೆ ಇಂದು ಲೋಕಾರ್ಪಣೆ: ಬರಪೀಡಿತ 7 ಜಿಲ್ಲೆಗಳಿಗೆ ನೀರೊದಗಿಸುವ ಯೋಜನೆ..!

ಸಾರಾಂಶ

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿಗೆ ಈ ಯೋಜನೆಯಿಂದ ಅನುಕೂಲ ಆಗಲಿದೆ. ಇಲ್ಲಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6,657 ಗ್ರಾಮಗಳ ಸುಮಾರು 75.39 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ 14.05 ಟಿಎಂಸಿ ನೀರು ಒದಗಿಸಲಾಗುವುದು.   

ಹಾಸನ(ಸೆ.06): ವಿವಾದಗಳಿಂದಲೇ ಸುದ್ದಿಯಾಗಿದ್ದ ರಾಜ್ಯದ ಏಳು ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ರಾಜ್ಯ ಸರ್ಕಾರದ ಮಹತ್ವಾ ಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಬಳಿ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರು ವಾರದ ಹಿಂದೆಯೇ ಯೋಜನೆಗೆ ಪ್ರಾಯೋಗಿಕ ಚಾಲನೆ ನೀಡಿದ್ದರು.

ಇದೀಗ ಗೌರಿ ಹಬ್ಬದ ದಿನದಂದೇ ಯೋಜನೆಯ ಮೊದಲ ಹಂತ ಅಧಿಕೃತವಾಗಿ ಉದ್ಘಾಟನೆಯಾಗಲಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟದ ಮೇಲ್ಬಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ನೀರೊದಗಿಸುವ ಈ ಯೋಜನೆಗೆ 2014ರಲ್ಲಿ ಶುರುವಾಗಿತ್ತು. ಸುಮಾರು ಎಂಟು ಸಾವಿರ ಕೋಟಿ ಅಂದಾಜು ವೆಚ್ಚದೊಂದಿಗೆ ಆರಂಭವಾದ ಈ ಯೋಜನೆಯ ಮೊದಲ ಹಂತ ಇದೀಗ ಉದ್ಘಾಟನೆಗೆ ಸಿದ್ದವಾಗಿದೆ. 

2025ರ ವೇಳೆಗೆ ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ: ಸಚಿವ ಪರಮೇಶ್ವರ್‌

ಇನ್ನು ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಮೊದಲ ಹಂತದಲ್ಲಿ ಸಕಲೇಶಪುರ ತಾಲೂಕಿನಲ್ಲಿ ನಿರ್ಮಾಣಗೊಂಡಿರುವ 8 ವಿಯರ್‌ಗಳ ಪೈಕಿ 7 ವಿಯರ್ ಗಳಿಂದ ಶುಕ್ರವಾರ ನೀರು ಹರಿಸಲಾಗುವುದು. ಬಾಕಿ ಉಳಿದಿರುವ ಒಂದು ವಿಯರ್‌ಇನ್ನೊಂದು ತಿಂಗಳಿನಲ್ಲಿ ಕಾರ್ಯಾರಂಭ ಮಾಡಲಿದೆ. ಎತ್ತಿನಹೊಳೆ ನೀರು ತಲುಪುವ ಕೊನೆಯ ತಾಲೂಕಾದ ದೊಡ್ಡಬಳ್ಳಾಪುರ ಎತ್ತಿನಹೊಳೆ ಮುಖ್ಯ ಕೇಂದ್ರದಿಂದ 261 ಕಿ.ಮೀ. ದೂರದಲ್ಲಿದ್ದು ಈಗಾಗಲೇ 162 ಕಿ.ಮಿ ಕಾಲುವೆ ಕಾಮಗಾರಿ ಮುಕ್ತಾಯಗೊಂಡಿದ್ದರೆ, 25 ಕಿ.ಮೀ. ಕಾಮಗಾರಿ ಪ್ರಗತಿ ಹಂತದಲ್ಲಿದೆ. 50 4.2.1 19.4 8.0. ಅರಣ್ಯ ವ್ಯಾಪ್ತಿಯಲ್ಲಿ ಹಾದುಹೋಗಬೇಕಿದೆ. ಈ ಸಂಬಂಧ ಅನುಮತಿ ಕೋರಿ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಶೀಘ್ರದಲ್ಲೇ ಅನುಮತಿ ದೊರೆಯುವ ನಿರೀಕ್ಷೆ ಇದೆ. ಸದ್ಯಕ್ಕೆ ವಿವಿ ಸಾಗರಕ್ಕೆ ನೀರು: ಸದ್ಯ ಎತ್ತಿನಹೊಳೆಯಿಂದ ಹರಿಯುವ ನೀರು ಯೋಜನೆ ಮುಖ್ಯ ಕೇಂದ್ರದಿಂದ 32 ಎತ್ತಿನಹೊಳೆ ಯೋಜನೆ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಗುರುವಾರ ಹೋಮದಲ್ಲಿ ಭಾಗಿಯಾದ ಶಿವಕುಮಾರ್, ಕಿ.ಮೀ ಸಾಗಿ ಹಳೇಬೀಡಿನ ದ್ವಾರಸಮುದ್ರಕೆರೆ, ಬೆಳವಾಡಿ ಕೆರೆ ತುಂಬಿಸುವ ಮೂಲಕ ವೇದಾ ವ್ಯಾಲಿ ಮೂಲಕ 132 ಕಿ.ಮೀ. ದೂರದಲ್ಲಿರುವ ವಾಣಿವಿಲಾಸ ಸಾಗರಕ್ಕೆ ಹರಿಯಲಿದೆ. ಮುಖ್ಯಮಂತ್ರಿಗಳು ಈ ಯೋಜನೆಗೆ ಚಾಲನೆ ನೀಡಿದ ನಂತರ 60 ದಿನ ನಿರಂತರವಾಗಿ ನೀರು ಮೇಲೆತ್ತಲಾಗುತ್ತಿದ್ದು, ಇದರಿಂದ ವಾಣಿವಿಲಾಸ ಸಾಗರಕ್ಕೆ ಎತ್ತಿನಹೊಳೆಯಿಂದ ಐದು ಟಿಎಂಸಿ ನೀರು 24 ಟಿಎಂಸಿ ನೀರೆತ್ತುವ ಈ ಯೋಜನೆಯಲ್ಲಿ 14 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದ್ದರೆ, ಇನ್ನುಳಿದ 10 ಟಿಎಂಸಿ ನೀರಿನಿಂದ ಯೋಜನೆ ವ್ಯಾಪ್ತಿಯ 527 ಕೆರೆಗಳನ್ನು ಶೇ. 50ರಷ್ಟು ತು೦ಬಿಸುವ ಗುರಿ ಹೊಂದಲಾಗಿದೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಯೋಜನೆ ವ್ಯಾಪ್ತಿಯಲ್ಲಿ 25.11 ಟಿಎಂಸಿ ನೀರು ಲಭ್ಯವಿದೆ. 
ಒಟ್ಟಾರೆ ಯೋಜನೆಯಿಂದ ಪ್ರತಿವರ್ಷ ಜೂ.1 ರಿಂದ ಆ.31 ರವರೆಗೆ 139 ದಿನಗಳ ಕಾಲ ನೀರು ಹರಿಸಲಾಗುವುದು. 

ಎಷ್ಟು ಜಿಲ್ಲೆಗಳಿಗೆ ಅನುಕೂಲ?: 

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿಗೆ ಈ ಯೋಜನೆಯಿಂದ ಅನುಕೂಲ ಆಗಲಿದೆ. ಇಲ್ಲಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6,657 ಗ್ರಾಮಗಳ ಸುಮಾರು 75.39 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ 14.05 ಟಿಎಂಸಿ ನೀರು ಒದಗಿಸಲಾಗುವುದು. 

ಎಷ್ಟು ವೆಚ್ಚ?:

ಒಟ್ಟಾರೆ 23,252 ಕೋಟಿ ರು. ಮೊತ್ತದ ಈ ಯೋಜನೆಗೆ ಆಗಸ್ಟ್ ವೇಳೆಗೆ 16,152 ಕೋಟಿ ರು. ವೆಚ್ಚವಾಗಿದೆ. 2014ರಲ್ಲಿ ಆರಂಭವಾದ ಈ ಯೋಜನೆಯ ಮೊದಲ ಹಂತಕ್ಕೆ ಇದೀಗ 10 ವರ್ಷಗಳ ಬಳಿಕ ಚಾಲನೆ ಸಿಗುತ್ತಿದೆ.2021ರಮಾ.31 ಕ್ಕೆಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ಎತ್ತಿನಹೊಳೆ ಯೋಜನೆ: ಹಾಸನ, ಚಿಕ್ಕಮಗಳೂರಿಗೆ ನೀರು; ಕೋಲಾರ, ಚಿಕ್ಕಬಳ್ಳಾಪುರಕ್ಕೆ ಖಾಲಿ ಚೊಂಬು?

ಕಾರ್ಯಕ್ರಮಕ್ಕೆ ಅಪಸ್ವರ 

ಉದ್ಘಾಟನಾ ಕಾರ್ಯಕ್ರಮಕ್ಕೆ ಎತ್ತಿನಹೊಳೆ ಯೋಜನೆ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳ ಶಾಸಕರು, ಸಚಿವರು. ಶಾಸಕರನ್ನು ಆಹ್ವಾನಿಸಲಾಗಿದೆ. ರಾಜ್ಯ ಸಚಿವ ಸಂಪುಟದ ಮೂವತ್ತು ಸಚಿವರಿಗೂ ಆಹ್ವಾನ ನೀಡಲಾಗಿದೆ. ಆದರೆ ಹಾಸನ ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಹಾಗೂ ಮಾಜಿ ಶಾಸಕರನ್ನೇ ಕಡೆಗಣಿಸಲಾಗಿದೆ ಎನ್ನುವ ಆರೋಪ ಇದೆ. ಆಹ್ವಾನ ಪತ್ರಿಕೆಯಲ್ಲಿ ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ, ಸಕಲೇಶಪುರ ಕ್ಷೇತ್ರದ ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಹಾಗೂ ಜಿಲ್ಲೆಯ ಮೂಲದವರೇ ಆದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಇಲ್ಲದಿರುವುದು ಜೆಡಿಎಸ್ ಆಕ್ಷೇಪಕ್ಕೆ ಕಾರಣವಾಗಿದೆ.

ಇತಿಹಾಸಪುಟ ಸೇರುವ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ನಾನು ಯಾರ ಟೀಕೆಗೂ ಉತ್ತರ ಕೊಡುವುದಿಲ್ಲ, ಅದರ ಅವಶ್ಯಕತೆಯೂ ಇಲ್ಲ. ಒಂದು ತೊಟ್ಟು ನೀರಿಗೆ ಜನ ಹೇಗೆ ಬಡಿದಾಡುತ್ತಾರೆಂಬುದು ಗೊತ್ತು. ಅಂಥದ್ದರಲ್ಲಿ ಎಲ್ಲರನ್ನೂ ಒಪ್ಪಿಸಿಕೊಂಡು ಎತ್ತಿನಹೊಳೆ ಯೋಜನೆ ಮಾಡಿದ್ದು, ಉದ್ಘಾಟನೆ ಕಾರ್ಯಕ್ರಮ ಮಾಡುತ್ತಿರುವುದು ರಾಜ್ಯದ ಇತಿಹಾಸದ ಪುಟಗಳಲ್ಲಿ ಸೇರುವ ವಿಚಾರ. ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್