*ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ಹುಡುಗ ಮದುವೆ
* ಒಂದೇ ಮುಹೂರ್ತದಲ್ಲಿ ಅಕ್ಕ-ತಂಗಿಯನ್ನ ಮದ್ವೆಯಾದ ಆಮಂತ್ರಣ ಪತ್ರಿಕೆ ಫುಲ್ ವೈರಲ್
*ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ಮದ್ವೆ ಹಿಂದಿದೆ ಅಸಲಿ ಕಾರಣ
ಕೋಲಾರ, (ಮೇ.15): ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ಹುಡುಗ ಮದುವೆ ಆಗುವ ದೃಶ್ಯಗಳು ಸಿನಿಮಾದಲ್ಲಿ ಬರುತ್ತವೆ. ಸಿನಿಮಾದಲ್ಲಿ ಇಂಥ ಸನ್ನಿವೇಶಗಳನ್ನು ತಮ್ಮ ಕಲ್ಪನೆಗೆ ತಕ್ಕಂತೆ ಸೃಷ್ಟಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಎಲ್ಲವೂ ತಂತಾನೆ ಸೃಷ್ಟಿಯಾಗಿ ಅಪರೂಪದ ಮದುವೆಯೊಂದು ನಡೆದು ಹೋಗಿದೆ.
ಹೌದು... ಈ ಮದುವೆ ನಡೆದಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಎನ್ನಲಾಗಿದ್ದು, ಸುಪ್ರಿಯಾ ಹಾಗೂ ಲಲಿತ ಎಂಬ ಇಬ್ಬರು ಅಕ್ಕ ತಂಗಿಯರನ್ನು ಉಮಾಪತಿ ಎಂಬುವವರು ಒಂದೇ ಮುಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದಾರೆ.
undefined
1100 ಮೃತದೇಹ ಅಂತ್ಯಸಂಸ್ಕಾರ: ಪ್ರೀತಿಯ ಮಗಳ ಮದ್ವೆಯನ್ನೇ ಮುಂದೂಡಿದ ತಂದೆ
ಸದ್ಯ, ಮದುವೆಯಾದ ಫೋಟೋ ಹಾಗೂ ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಮದುವೆ ನೋಡಿದ ಬಗ್ಗೆ ಸಾಕಷ್ಟು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಟ್ರೋಲ್ ಸಹ ಆಗುತ್ತಿದೆ. ಆದ್ರೆ, ಈ ಇಬ್ಬರನ್ನು ಮದ್ವೆಯಾಗಲು ಒಂದು ಕಾರಣವೂ ಇದೆ ಎಂದು ತಿಳಿದುಬಂದಿದೆ.
ಎರಡು ಮದ್ವೆಗೆ ಅಸಲಿ ಕಾರಣ
ಹೌದು...ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ. ಅವರಿಗೆ ಮದುವೆಯಾಗದೆ ತಂಗಿ ಲಲಿತಾಗೆ ಮದುವೆಯಾಗೋದಿಲ್ಲ. ಅಕ್ಕನಿಗೆ ಎಲ್ಲಿ ಮದುವೆಯಾಗುವುದಿಲ್ಲವೋ ಎಂದು ಯೋಚಿಸಿದ ತಂಗಿ ಲಲಿತಾ ನನ್ನನ್ನು ಮದುಯಾಗಬೇಕೆಂದರೆ ಅಕ್ಕನನ್ನೂ ಮದುವೆ ಮಾಡಿಕೊಳ್ಳಬೇಕು ಎಂಬ ಷರತ್ತನ್ನು ವರ ಉಮಾಪತಿಗೆ ವಿಧಿಸಿದ್ದರು. ಅದಕ್ಕೆ ಒಪ್ಪಿದ ಅವರು ಮೇ 7ರಂದು ಗ್ರಾಮದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸಹೋದರಿಯರನ್ನು ಮದುವೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದೊಂದು ತ್ಯಾಗ ಮತ್ತು ಕಾರುಣ್ಯದ ಸಂಬಂಧಗಳ ಮದುವೆ ಕಣ್ರಪ್ಪಾ. ನಾವುಗಳು ನಮ್ಮ ಟೈಮ್ ಪಾಸ್ ಗೆ ಬಾಯಿ ಚಪ್ಪರಿಸುವುದು ಬೇಡ.