ಕೊರೋನಾ ರಣಕೇಕೆ: ಲಾಕ್‌ಡೌನ್ ಇದ್ರೂ ಸೊಂಕಿತರ ಸಂಖ್ಯೆಯಲ್ಲಿ ಏರಿಕೆ

By Suvarna NewsFirst Published May 15, 2021, 8:12 PM IST
Highlights

*ಕರ್ನಾಟಕದಲ್ಲಿ ಕೊರೋನಾ ರಣಕೇಕೆ
* ಲಾಕ್‌ಡೌನ್ ಜಾರಿ ಮಾಡಿದ್ರೂ ರಾಜ್ಯದಲ್ಲಿ ಏರುತ್ತಲೇ ಇದೆ ಕೊರೋನಾ ಸೋಂಕಿತರ ಸಂಖ್ಯೆ
* ಒಂದೇ ದಿನ 41664 ಹೊಸ ಕೇಸ್, 349 ಸೊಂಕಿತರ ಸಾವು

ಬೆಂಗಳೂರು, (ಮೇ.15): ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಆದರೂ ಸಹ ಕರ್ನಾಟಕದಲ್ಲಿ ಕೊರೋನಾ ಸೋಂಕಿನ  ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಗುತ್ತಿಲ್ಲ. ಬದಲಿಗೆ ಏರುತ್ತಲೇ ಇದೆ.

ಇಂದು (ಶನಿವಾರ) 41664 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 349 ಜನರು ಮಹಾಮಾರಿ ಬಲಿಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ನಿಮ್ಮೊಂದಿಗೆ ನಾವಿದ್ದೇವೆ..ಕರೆ ಮಾಡಿ ವೈದ್ಯರೊಂದಿಗೆ ಸಲಹೆ ಪಡೆದುಕೊಳ್ಳಿ

ಇನ್ನು ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 7379 ಸೇರಿದಂತೆ ರಾಜ್ಯದಲ್ಲಿ ಒಟ್ಟ 34,425 ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಗುಣಮುಖರಾದವರ ಸಂಖ್ಯೆ 15,44,982ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2,17,1931ಕ್ಕೆ ಏರಿದ್ದು, ಸಾವಿನ ಸಂಖ್ಯೆ 21,434ಕ್ಕೆ ಜಿಗಿತ ಕಂಡಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ  6,05,494. 

ಬಾಗಲಕೋಟೆ-584, ಬಳ್ಳಾರಿ-1622, ಬೆಳಗಾವಿ-1502, ಬೆಂಗಳೂರು ಗ್ರಾಮಾಂತರ-1265, ಬೆಂಗಳೂರು ನಗರ-13402, ಬೀದರ್-185, ಚಾಮರಾಜನಗರ-535, ಚಿಕ್ಕಬಳ್ಳಾಪುರ-595, ಚಿಕ್ಕಮಗಳೂರು-1093, ಚಿತ್ರದುರ್ಗ-454, ದಕ್ಷಿಣ ಕನ್ನಡ-1787, ದಾವಣಗೆರೆ-292, ಧಾರವಾಡ-901, ಗದಗ-459,ಹಾಸನ-2443, ಹಾವೇರಿ-267, ಕಲಬುರಗಿ-832, ಕೊಡಗು-483, ಕೋಲಾರ-778, ಕೊಪ್ಪಳ-630,ಮಂಡ್ಯ-1188, ಮೈಸೂರು-2489, ರಾಯಚೂರು-467, ರಾಮನಗರ-524, ಶಿವಮೊಗ್ಗ-1081, ತುಮಕೂರು-2302, ಉಡುಪಿ-1146, ಉತ್ತರ ಕನ್ನಡ-1226, ವಿಜಯಪುರ-789, ಯಾದಗಿರಿ-343 .
 

click me!