ಸರ್ವಪಕ್ಷ ಸಭೆಯಲ್ಲಿ ಏನೆಲ್ಲ ಚರ್ಚೆ ಆಯ್ತು? ಮಾಧ್ಯಮಗಳ ಮೂಲಕ ಜನರ ಮುಂದಿಟ್ಟ ಸಚಿವರು

By Suvarna News  |  First Published Apr 20, 2021, 8:18 PM IST

ಕೊರೋನಾ ನಿಯಂತ್ರಣದ ಬಗ್ಗೆ ಇಂದು (ಏ.20) ನಡೆದ ಸರ್ವಪಕ್ಷಗಳ ಸಭೆಯಲ್ಲಿ ಏನೆಲ್ಲಾ ಚರ್ಚೆಗಳು ನಡೆದವು ಎನ್ನುವ ಬಗ್ಗೆ ಇಬ್ಬರು ಸಚಿವರುಗಳು ಮಾಧ್ಯಮಗಳ ಮೂಲಕ ಜನರ ಮುಂದಿಟ್ಟಿದ್ದಾರೆ. ಅದು ಈ ಕೆಳಗಿನಂತಿದೆ.


ಬೆಂಗಳೂರು, (ಏ.20): ಮತ್ತೊಮ್ಮೆ ಲಾಕ್​ ಡೌನ್ ಜಾರಿಯಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಇಂದು (ಏ.20) ರಾಜ್ಯಪಾಲ ವಜೂಬಾಯಿ ವಾಲಾ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆದಿದ್ದು, ಮುಕ್ತಾಯದ ಹೊತ್ತಿಗೆ ಸಿಎಂ ಯಡಿಯೂರಪ್ಪ ಕೂಡ ಲಾಕ್​ಡೌನ್ ಪರ ಒಲವು ತೋರಿದ್ದಾರೆ ಎಂದು ಹೇಳಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ನೇರವಾಗಿಯೇ ಲಾಕ್​ಡೌನ್​ ಸಲಹೆ ಕೊಟ್ಟಿದ್ದರೆ, ರಾಜ್ಯಪಾಲರೂ ಕೂಡ ಇದನ್ನೇ ಹೇಳಿದ್ದಾರೆ.

ಇನ್ನು ಸುಮಾರು 3 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಏನೆಲ್ಲಾ ಚರ್ಚೆಗಳು ನಡೆದವು ಎನ್ನುವ ಮಾಹಿತಿಯನ್ನು ಸಚಿವರಾದ ಅಶೋಕ್ ಹಾಗೂ ಬಸವರಾಜ್ ಬೊಮ್ಮಾಯಿ ಮಾಧ್ಯಮಗಳಿಗೆ ತಿಳಿಸಿದರು.

Tap to resize

Latest Videos

ಸರ್ವಪಕ್ಷಗಳ ಸಭೆ ಮುಕ್ತಾಯ: ಮಹತ್ವದ ಅಭಿಪ್ರಾಯ ತಿಳಿಸಿದ ರಾಜ್ಯಪಾಲ

ಸಭೆ ಬಳಿಕ ಮಾತನಾಡಿದ ಅಶೋಕ್, ಸರ್ವಪಕ್ಷಗಳ ಸಭೆಯಲ್ಲಿ ಲಾಕ್​ಡೌನ್ ಬಗ್ಗೆ ಸಲಹೆ ಬಂದಿದೆ. ನಾವು ಕಠಿಣ ನಿಲುವು ತೆಗೆದುಕೊಳ್ಳಬೇಕಾಗಿದೆ. ಸಿಎಂ ಯಡಿಯೂರಪ್ಪನವರ ಜತೆ ಚರ್ಚಿಸಿ ಮುಂದಿನ ಆದೇಶ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್​ ಹೇಳಿದರು. ಸಭೆಯ ಬಳಿಕ ಮಾತನಾಡಿದ ಅವರು, ಯಡಿಯೂರಪ್ಪನವರು ಮುಖ್ಯ ಕಾರ್ಯದರ್ಶಿ ಜತೆ ಮಾತುಕತೆ ನಡೆಸಿದ ಬಳಿಕ ಮಾರ್ಗಸೂಚಿ ಆದೇಶ ಪ್ರಕಟಿಸುವುದಾಗಿ ತಿಳಿಸಿದರು.

ಕೊರೋನಾ ನಿಯಂತ್ರಣಕ್ಕಾಗಿ ಕಠಿಣ ನಿಯಮ ಜಾರಿಗೊಳಿಸುವ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆಯುತ್ತಿದೆ. ಜನರ ಸಹಕಾರ ಬೇಕು. ಇಂದಿನ ಸಭೆಯಲ್ಲಿ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಲಾಕ್​ ಡೌನ್ ಸಲಹೆ ನೀಡಿದ್ದಾರೆ. ಇನ್ನು ಲಾಕ್​ಡೌನ್​ ಮಾತ್ರ ಪರಿಹಾರವಲ್ಲ, ತಜ್ಞರ ವರದಿ ಅನುಸರಿಸಿ ಎಂದು ಡಿ.ಕೆ.ಶಿವಕುಮಾರ್​, ಸಿದ್ದರಾಮಯ್ಯ ಹೇಳಿದ್ದಾರೆ. ಯಾವುದಕ್ಕೂ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸರ್ವಪಕ್ಷ ಸಭೆ ಅಂತ್ಯ: ಲಾಕ್‌ಡೌನ್ ಸುಳಿವು ಕೊಟ್ರಾ ಸಿಎಂ?

ನಮ್ಮ ನಿಲುವಿಗೆ ಪೂರಕವಾದ ಸಲಹೆ ನೀಡಿದ ವಿಪಕ್ಷ ನಾಯಕರಿಗೆ ಕೃತಜ್ಞತೆಗಳು ಎಂದ ಆರ್​.ಅಶೋಕ್ ಅವರು, ಸ್ಮಶಾನಗಳಲ್ಲಿ ಉಂಟಾಗುತ್ತಿರುವ ಅಡಚಣೆ, ಕ್ಯೂ ತಪ್ಪಿಸಲು ತಾತ್ಕಾಲಿಕ ಚಿತಾಗಾರಗಳ ನಿರ್ಮಾಣ ಮಾಡುವಂತೆ ಎಲ್ಲ ಮಹಾನಗರ ಪಾಲಿಕೆಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗೃಹ ಸಚಿವರ ಮಾತು
ಇನ್ನು ಸಭೆ ಬಳಿಕ ಗೃಹ ಸಚಿವ  ಬಸವರಾಜ್ ಬೊಮ್ಮಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಎಲ್ಲಾ ಆಯಾಮಗಳನ್ನು ಗಮನಿಸುತ್ತಿದ್ದೇವೆ. ಕಠಿಣ ನಿಲುವು ತಾಳೆಯಲೇ ಬೇಕಾದ ಅವಶ್ಯಕತೆ ಇದೆ. ಹಿಂದಿನ ಅನುಭವದ ಆಧಾರದ ಮೇಲೆ ತೀರ್ಮಾನ ತೆಗೆದು ಕೊಳ್ಳಬೇಕಿದೆ ಎಮದು ಹೇಳಿದರು.

ರಾಜ್ಯಪಾಲರು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಹೆಲ್ದಿ ಕರ್ನಾಟಕ ಅಂತ ಹೇಳಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ವರದಿ ಅನುಷ್ಠಾನಕ್ಕೆ ಸೂಚಿಸಿದ್ದಾರೆ. ಅಂತಿಮ ನಿರ್ಧಾರ ಬರಲಿದೆ. ತಾಂತ್ರಿಕ ಸಲಹಾ ಸಮಿತಿ ಮತ್ತು ರಾಜ್ಯಪಾಲರ ನಿರ್ಧಾರ ತೆಗದುಕೊಳ್ಳಲಿದ್ದೇವೆ ಎಂದರು.

ತಾಂತ್ರಿಕ ಸಮಿತಿ‌ ನೀಡುವ ವರದಿ ಜಾರಿಗೆ ತನ್ನಿ ಎಂದು ರಾಜ್ಯಪಾಲರು ಹೇಳಿದ್ದಾರೆ. ಕಳೆದ ವರ್ಷದ ಅನುಭವ ಇದೆ. ಎರಡನ್ನು ಗಮನದಲ್ಲಿಟ್ಟುಕೊಂಡು ಕಠಿಣ ನಿಯಮ ತಗೊಳ್ತೊವೆ. ಆದಷ್ಟು ಬೇಗ ಮಾರ್ಗಸೂಚಿ ಹೊರಡಿಸಲಾಗುತ್ತೆ ಎಂದು ತಿಳಿಸಿದರು.

ಇಬ್ಬರು ಸಚಿವರುಗಳನ್ನು ಸೂಕ್ಷ್ಮವಾಗಿ ಗಮನಿಸಿದ್ರೆ, ಲಾಕ್‌ಡೌನ್ ಮಾಡುವ ಬಗ್ಗೆ ಒಲವು ಹೆಚ್ಚಾಗಿದೆ. ಈಗ ಸಚಿವರುಗಳು ಸಿಎಂ ಜತೆ ಮಾತುಕತೆ ನಡೆಸಿದ್ದು, ಬಳಿಕ ಅಂತಿಮ ನಿರ್ಧಾರ ಪ್ರಕಟವಾಗಲಿದೆ. ಒಂದಂತೂ ಸತ್ಯ ಬೆಂಗಳೂರಿನಲ್ಲಿ ಮೊದಲಿನಂತೆ ಜೀವನ ಇರುವುದಿಲ್ಲ. ಬದಲಿಗೆ ಕಠಿಣ ಕ್ರಮ ಜಾರಿಯಾಗುವುದು ಖಚಿತ. ಹಾಗಾಗಿ ಜನರು ಎಲ್ಲದಕ್ಕೂ ಸಿದ್ಧರಾಗಿರಬೇಕು.

click me!