ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ವಪಕ್ಷಗಳ ಸಭೆ ಅಂತ್ಯವಾಗಿದೆ. ಸಭೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಮಹತ್ವದ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಬೆಂಗಳೂರು, (ಏ.20): ರಾಜ್ಯದಲ್ಲಿ ಕೊರೋನಾ ಸ್ಥಿತಿಗತಿಗಳ ಕುರಿತು ಇಂದು (ಏ.20) ರಾಜ್ಯಪಾಲರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು.
ಸುಮಾರು 3 ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಆಡಳಿತ ಪಕ್ಷದ ನಾಯಕರುಗಳು ಭಾಗಿಯಾಗಿ ತಮ್ಮ-ತಮ್ಮ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಸರ್ಕಾರಕ್ಕೆ ನೀಡಿದರು.
undefined
ಸರ್ವಪಕ್ಷ ಸಭೆ ಅಂತ್ಯ: ಲಾಕ್‌ಡೌನ್ ಸುಳಿವು ಕೊಟ್ರಾ ಸಿಎಂ?
ಇನ್ನು ಇದೇ ವೇಳೆ ರಾಜ್ಯಪಾಲ ವಜುಭಾಯಿ ವಾಲಾ ಸಹ ಮಾತನಾಡಿ, ಯಾವುದೇ ಕಠಿಣ ಕ್ರಮವನ್ನಾದರೂ ಕೈಗೊಳ್ಳುವಂತೆ ಸರ್ಕಾರ ಖಡಕ್ ಸೂಚನೆ ನೀಡಿದ್ದಾರೆ.
ಲಾಕ್ ಡೌನ್ ಮಾಡುವುದಾದರೆ ಮಾಡಿ, ನಮಗೆ ಬೇಕಿರುವುದು ಆರೋಗ್ಯಪೂರ್ಣ ಕರ್ನಾಟಕ. ಲಾಕ್‌ಡೌನ್ ಸೇರಿ ಯಾವುದೇ ರೀತಿಯ ಕಠಿಣ ಕ್ರಮವನ್ನಾದರೂ ತೆಗೆದುಕೊಳ್ಳಿ ಎಂದು ರಾಜ್ಯಪಾಲರು ಸಭೆಯಲ್ಲಿ ತಿಳಿಸಿದ್ದಾರೆ.
ಈ ಪರಿಸ್ಥಿತಿಯ ಸವಾಲುಗಳನ್ನು ಎದುರಿಸಬೇಕಾಗಿದೆ. ಜನರು ಸಹ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.
ಲಾಕ್‌ಡೌನ್ ಬಗ್ಗೆ ಜನರಿಗೆ ಹೆದರಿಕೆ ಇದೆ. ಕಾರ್ಮಿಕರ ಬಗ್ಗೆಯೂ ಯೋಚನೆ ಮಾಡಬೇಕು. ಯಾವುದೇ ನಿರ್ಧಾರ ತೆಗೆದುಕೊಳ್ಳಲೂ ಸಿಎಂ ಯಡಿಯೂರಪ್ಪ ಸ್ವತಂತ್ರವಾಗಿದ್ದಾರೆ ಎಂದಿದ್ದಾರೆ. ಇನ್ನು ಈ ಸಭೆಯಲ್ಲಿ ಯಡಿಯೂರಪ್ಪನವರೂ ಸಹ ಲಾಕ್‌ಡೌನ್ ಸಲಹೆಯನ್ನು ಸ್ವಾಗತಿಸಿದ್ದಾರೆ ಎನ್ನಲಾಗಿದೆ. ಸಚಿವರ ಜತೆ ಚರ್ಚಿಸುವುದಾಗಿಯೂ ತಿಳಿಸಿದ್ದಾರೆ.