ಇಂದು (ಮಂಗಳವಾರ) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುರ್ತು ವಿಶೇಷ ಸಚಿವ ಸಂಪುಟ ಸಭೆ ನಡೆಸಿದರು. ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಇಂತಿವೆ.
ಬೆಂಗಳೂರು, (ಮೇ.04) : ರಾಜ್ಯದಲ್ಲಿ ಕೊರೋನಾ ಅಬ್ಬರ ಹೆಚ್ಚಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆ, ಔಷಧ ಹಾಗೂ ಲಸಿಕೆ ಕೊರತೆ ಬಗ್ಗೆ ಚರ್ಚಿಸಲು ಇಂದು (ಮಂಗಳವಾರ) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುರ್ತು ವಿಶೇಷ ಸಚಿವ ಸಂಪುಟ ಸಭೆ ನಡೆಸಿದರು.
ಸಚಿವ ಸುಧಾಕರ್ಗೆ ಮುಖಭಂಗ: ಎಲ್ಲ ಜವಾಬ್ದಾರಿ ಕಿತ್ತುಕೊಂಡ ಸಿಎಂ
undefined
ಸಭೆಯಲ್ಲಿ ಚಾಮರಾನಗರ ದುರಂತ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಅಲ್ಲದೇ ಸಚಿವರುಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡರು. ಇನ್ನು ಸಂಪುಟ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಅವು ಈ ಕೆಳಗಿನಂತಿವೆ.
ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು
1. ಜಿಲ್ಲಾವ್ಯಾಪ್ತಿಯಲ್ಲಿ ಕೊರತೆಯಿರುವ ಆಕ್ಸಿಜನ್, ಬೆಡ್, ರೆಮಿಡಿಸಿವಿಯರ್ ಹಾಗೂ ಇನ್ನಿತರೆ ಅತ್ಯವಶ್ಯಕಗಳ ಸಂಪೂರ್ಣ ಉಸ್ತೂವಾರಿಯನ್ನು ಆಯಾ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಗಿದೆ.
2. ಜಗದೀಶ್ ಶೆಟ್ಟರ್ - ಆಕ್ಸಿಜನ್ ಸೆಂಟರ್ ಗಳ ಮೇಲುಸ್ತುವಾರಿ ಹಾಗೂ ಕೇಂದ್ರ ಸರ್ಕಾರ ಸಮನ್ವಯದೊಂದಿಗೆ ರಾಜ್ಯದಲ್ಲಿ ಅಕ್ಸಿಜನ್ ಕೊರತೆಯಾಗದಂತೆ ನಿರ್ವಹಿಸುವುದು.
3. ಅಶ್ವಥ್ ನಾರಾಯಣ - ರೆಮಿಡಿಸಿವಿಯರ್ ಔಷದಿಗಳ ಕೊರತೆ, ಮಾನವ ಸಂಪನ್ಮೂಲ ಮತ್ತು ರಾಜ್ಯದಲ್ಲಿನ ಎಲ್ಲಾ ಮೆಡಿಕಲ್ ಕಲೇಜುಗಳೊಂದಿಗೆ ಸಮನ್ವಯತೆಯನ್ನು ಸಾದಿಸಿ ಔಷಧಿಗಳ ಕೊರತೆಯಾಗದಂತೆ ನಿರ್ವಹಿಸುವುದು.
4. ಬಸವರಾಜ ಬೊಮ್ಮಾಯಿ ಹಾಗೂ ಆರ್. ಆಶೋಕ - ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಬೆಡ್ ಗಳ ಕೊರತೆಯಾಗದಂತೆ ನಿರ್ವಹಿಸುವುದು.
5. ಅರವಿಂದ ಲಿಂಬಾವಳಿ - ಬಿಬಿಎಂಪಿ ವಾರ್ ರೂಂ ನಿರ್ವಹಣೆ ಉಸ್ತುವಾರಿ
6. ನೆರೆ ರಾಜ್ಯವಾದ ಮಹರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವುದರಿಂದ, ಕರ್ನಾಟಕದ ಜಿಂದಾಲ್ ಕಂಪನಿಯಿಂದ ಪೂರೈಸಲಾಗುತ್ತಿರುವ ಆಕ್ಸಿಜನ್ ಅನ್ನು ರಾಜ್ಯದಲ್ಲಿ ಬಳಕೆಮಾಡಿಕೊಳ್ಳಲು ಕೇಂದ್ರ ಸರ್ಕಾರದೊಂದಿಗೆ ಈಗಾಗಲೇ ಚರ್ಚಿಸಲಾಗಿದೆ.
7. ದಿನಾಂಕ: 03/04/2021ರಂದು ಚಾಮರಾಜನಗರದಲ್ಲಿ ನಡೆದ ಘಟನೆಗೆ ಕುಲಂಕುಷವಾಗಿ ಪರಿಶೀಲಿಸಿ 3 ದಿನಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಶ್ರೀ. ಶಿವಯೋಗಿ ಕಳಸದ್ ಇವರನ್ನು ನಿಯೋಜಿಸಿದೆ.
8. ಮಾಧ್ಯಮ ಪ್ರತಿನಿಧಿಗಳಿಗೆ Frontline Workers ಎಂದು ಪರಿಗಣಿಸಿ ಕೋವಿಡ್ - 19 ಉಚಿತ ಲಸಿಕೆಯನ್ನು ನೀಡುವುದು.
9. ರೆಮಿಡಿಸಿವಿಯರ್ ಔಷದಿಯನ್ನು ರಾಜ್ಯಕ್ಕೆ ಹೆಚ್ಚಿನ ಪೂರೈಕೆಗಾಗಿ ಕೇಂದ್ರ ಸರ್ಕಾರದೊಂದಿಗ ಸಮನ್ವಯವನ್ನು ಸಾದಿಸಿದೆ.