ಕರ್ಫ್ಯೂ ಜಾರಿ ಮಾಡಿದ್ರೂ ರಾಜ್ಯದಲ್ಲಿ ಕೊರೋನಾ ಹೆಚ್ಚಳ: ಮೇ.04ರ ಅಂಕಿ-ಸಂಖ್ಯೆ ನೋಡಿ

By Suvarna News  |  First Published May 4, 2021, 9:23 PM IST

ಕೊರೋನಾ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಜನತಾ ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೂ ಸಹ ರಾಜ್ಯದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಏರುತ್ತಲೇ ಇದೆ.


ಬೆಂಗಳೂರು, (ಮೇ.04):  ರಾಜ್ಯದಲ್ಲಿ ಅಟ್ಟಹಾಸ ಮುಂದುವರೆದಿದ್ದು, ಇಂದು (ಮಂಗಳವಾರ) 44631 ಪಾಸಿಟಿವ್ ಕೇಸ್‌ ಪತ್ತೆಯಾಗಿವೆ. 292 ಸೋಂಕಿತರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 16,90,934 ಕ್ಕೆ ಏರಿಕೆಯಾಗಿದ್ರೆ, ಸಾವಿನ ಸಂಖ್ಯೆ 16538ಕ್ಕೇರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Latest Videos

undefined

ಸಚಿವ ಸುಧಾಕರ್​ಗೆ ಮುಖಭಂಗ: ಎಲ್ಲ ಜವಾಬ್ದಾರಿ ಕಿತ್ತುಕೊಂಡ ಸಿಎಂ

24,714 ಜನ ಮಂಗಳವಾರ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 12,10,013 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಬರೋಬ್ಬರಿ 4,64,363 ಸಕ್ರಿಯ ಪ್ರಕರಣಗಳಿವೆ.

ಈ ಮೂಲಕ ಸೋಂಕಿತರ ಸಂಖ್ಯೆ 1690934ಕ್ಕೆ ಏರಿಕೆಯಾಗಿದೆ. ಇವರಲ್ಲಿ ಮಂಗಳವಾರ 24714 ಜನರು ಸೇರಿದಂತೆ ಇದುವರೆಗೆ 1210013 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 464363 ಸಕ್ರಿಯ ಕೇಸ್‌ಗಳಿವೆ.

click me!