ರಾಜ್ಯದ ಹಲವೆಡೆ ಭಾರೀ ಮಳೆ: ಮನೆಯ ಗೋಡೆ ಕುಸಿದು ವೃದ್ಧ ಸಾವು

By Kannadaprabha NewsFirst Published Oct 10, 2021, 7:26 AM IST
Highlights

*  ವಾಯುಭಾರ ಕುಸಿತ: ಹೊಲಗದ್ದೆಗಳಿಗೆ ನೀರು ನುಗ್ಗಿ ಬೆಳೆ ನಾಶ
*  ರಾಯಚೂರಿನಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
*  ಕಲಬುರಗಿ, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿ ಉತ್ತಮ ಮಳೆ
 

ಬೆಂಗಳೂರು(ಅ.10): ಬಂಗಾಳ ಕೊಲ್ಲಿಯಲ್ಲಿ ವಾಯುಭಾರ(Airway Collapse) ಕುಸಿತವುಂಟಾದ ಪರಿಣಾಮ ಹಳೇ ಮೈಸೂರು(Mysuru) ಮತ್ತು ಕಲ್ಯಾಣ ಕರ್ನಾಟಕ(Kalyana Karnataka) ಬಹುತೇಕ ಭಾಗಗಳಲ್ಲಿ ಉತ್ತಮ ಮಳೆ ಸುರಿದಿದ್ದು, ಮಳೆ ಸಂಬಂಧಿ ಕಾರಣಕ್ಕೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತುಮಕೂರು(Tumakuru) ಜಿಲ್ಲೆಯ ಗುಬ್ಬಿಯಿಂದ ವರದಿಯಾಗಿದೆ.

ಗುಬ್ಬಿ ತಾಲೂಕಿನ ಮುದ್ದಾಪುರ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ(Rain) ಶಿಥಿಲಗೊಂಡಿದ್ದ ಮನೆಯ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಹಿರಿಯ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ(Death). ಮುದ್ದಾಪುರ ಗ್ರಾಮದ ಗೊಲ್ಲರಹಟ್ಟಿಯ ನಿವಾಸಿ ಉಗ್ರಯ್ಯ(60) ಮೃತಪಟ್ಟವರು.

ರಾಯಚೂರಲ್ಲಿ ಭಾರೀ ಮಳೆ: ಬಾಯಲ್ಲಿ ಮರಿ ಹಿಡಿದು ನಾಯಿ ಪರದಾಟ

ರಾಜ್ಯ ರಾಜಧಾನಿ ಬೆಂಗಳೂರು(Bengaluru) ಸೇರಿದಂತೆ ಆಸುಪಾಸಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಬಹುಭಾಗಗಳಲ್ಲಿ ಉತ್ತಮ ಮಳೆ ಸುರಿದಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಕುಂಟೆ, ಜಲಾಶಯಗಳು ಮೈದುಂಬಿದ್ದರೆ, ತಗ್ಗು ಪ್ರದೇಶದ ಮನೆ, ಶಾಲೆಗಳಿಗೆ ನೀರು ನುಗ್ಗಿದೆ. ಹೊಲ ಗದ್ದೆಗಳಿಗೂ ನೀರು ನುಗ್ಗಿದ್ದು ಆಲೂಗಡ್ಡೆ, ಟೊಮೆಟೋ ಬೆಳೆಗಳಿಗೆ ಹಾನಿಯಾಗಿದೆ.

ಕಲ್ಯಾಣ ಕರ್ನಾಟಕದ ಕಲಬುರಗಿ(Kalaburagi), ಯಾದಗಿರಿ(Yadgir), ವಿಜಯನಗರ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದರೆ, ರಾಯಚೂರಿನಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ರಾತ್ರಿ ಸುರಿದ ಮಳೆಗೆ ತಗ್ಗು ಪ್ರದೇಶದಲ್ಲಿರುವ ರಾಯಚೂರು ನಗರದ ನಾಲ್ಕಕ್ಕೂ ಅಧಿಕ ವಾರ್ಡ್‌ಗಳು ಜಲಾವೃತಗೊಂಡಿವೆ. ನಗರದ ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ(Victims) ಉಪಾಹಾರ ವ್ಯವಸ್ಥೆ ಮಾಡಲಾಗಿದೆ.
 

click me!