ಹೆಚ್ಚು ಕಲ್ಲಿದ್ದಲು ಪೂರೈಸಲು ಕೇಂದ್ರ ಸಮ್ಮತಿ: ಸಿಎಂ ಬೊಮ್ಮಾಯಿ

By Kannadaprabha News  |  First Published Oct 10, 2021, 7:13 AM IST

*   ಪ್ರಸ್ತುತ 10 ರೇಕ್‌ ಬರುತ್ತಿದೆ, 14ಕ್ಕೆ ಹೆಚ್ಚಿಸಲು ಸಚಿವ ಜೋಶಿ ಒಪ್ಪಿಗೆ: ಸಿಎಂ
*   ಹೆಚ್ಚುವರಿ ರಸಗೊಬ್ಬರ, ಕೋವಿಡ್‌ ಲಸಿಕೆ
*   ನಡ್ಡಾ ಭೇಟಿ ಇಲ್ಲ


ಬೆಂಗಳೂರು(ಅ.10): ಕಲ್ಲಿದ್ದಲು(Coal) ಕೊರತೆ ನೀಗಿಸಲು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ಅವರಿಗೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.

ದೆಹಲಿಯಿಂದ(Delhi) ಹಿಂತಿರುಗಿದ ಬಳಿಕ ಶನಿವಾರ ನಗರದಲ್ಲಿ(Bengaluru) ಸುದ್ದಿಗಾರರ ಜತೆ ಮಾತನಾಡಿದ ಅವರು, ಕಲ್ಲಿದ್ದಲಿನ ಕೊರತೆ ಇಡೀ ಭಾರತ(India) ದೇಶವನ್ನು ಬಾಧಿಸುತ್ತಿದೆ. ಕರ್ನಾಟಕದಲ್ಲಿ(Karnataka) ಕಲ್ಲಿದ್ದಲ್ಲಿನ ಸಂಗ್ರಹ ಕಡಿಮೆಯಾಗಬಾರದು ಎಂಬ ದೃಷ್ಟಿಯಿಂದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಮನವಿ ಮಾಡಲಾಗಿದೆ. ರಾಜ್ಯಕ್ಕೆ ಪ್ರಸ್ತುತ ಸರಬರಾಜು ಆಗುತ್ತಿರುವ 10 ರೇಕ್‌ ಕಲ್ಲಿದ್ದಲು ಪ್ರಮಾಣವನ್ನು ಹೆಚ್ಚಿಸಿ 14 ರೇಕ್‌ ಸರಬರಾಜು ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

Tap to resize

Latest Videos

undefined

ಕರುನಾಡಿಗೆ ಕಾದಿದೆಯಾ ಕಗ್ಗತ್ತಲ ಶಾಕ್‌..?

ಹೆಚ್ಚುವರಿ ರಸಗೊಬ್ಬರ, ಕೋವಿಡ್‌ ಲಸಿಕೆ:

ಕೇಂದ್ರ ಆರೋಗ್ಯ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್‌ಸುಖ್‌ ಮಾಂಡವೀಯ(Mansukh Mandaviya) ಅವರನ್ನು ಭೇಟಿಯಾಗಿ ರಬಿ ಹಂಗಾಮಿಗೆ ಹೆಚ್ಚಿನ ಡಿಎಪಿ ಮತ್ತು ಎಂಓಪಿ ಒದಗಿಸಲು ಮನವಿ ಮಾಡಲಾಯಿತು. ಇದನ್ನು ಒಂದು ವಾರದೊಳಗೆ ಒದಗಿಸುವುದಾಗಿ ಹೇಳಿದ್ದಾರೆ ಎಂದು ಹೇಳಿದ ಅವರು, ರಾಜ್ಯದಲ್ಲಿ ಡಿಸೆಂಬರ್‌ ಅಂತ್ಯದೊಳಗೆ ಮೊದಲನೇ ಡೋಸ್‌ ಶೇ.90ರಷ್ಟು ಮತ್ತು ಎರಡನೇ ಡೋಸ್‌ ಶೇ.70(Vaccine) ಕೊಡುವ ಗುರಿಗೆ ಕೇಂದ್ರ ಆರೋಗ್ಯ ಸಚಿವರು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.

ನಡ್ಡಾ ಭೇಟಿ ಇಲ್ಲ:

ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಅವರು ಅನ್ಯ ಕಾರ್ಯದಲ್ಲಿ ನಿರತರಾಗಿದ್ದರು. ಹೀಗಾಗಿ ಅವರ ಭೇಟಿ ಸಾಧ್ಯವಾಗಿಲ್ಲ. ಸಚಿವ ಸಂಪುಟ ವಿಸ್ತರಣೆ(Cabinet Expansion) ಕುರಿತು ಯಾವುದೇ ಚರ್ಚೆಯಾಗಿಲ್ಲ ಎಂದು ತಿಳಿಸಿದರು.
 

click me!