ಕರ್ನಾಟಕದಲ್ಲಿ ಕೊರೋನಾ ಕೊಂಚ ಏರಿಕೆ: ಇರಲಿ ಎಚ್ಚರಿಕೆ

By Suvarna News  |  First Published Oct 9, 2021, 9:04 PM IST

* ಕರ್ನಾಟಕದಲ್ಲಿ ಕೊರೋನಾ ಕೊಂಚ ಏರಿಕೆ
* ಹೊಸದಾಗಿ 451 ಜನರಿಗೆ ಸೋಂಕು, 9 ಜನ ಬಲಿ
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ 


ಬೆಂಗಳೂರು, (ಅ.09): ರಾಜ್ಯದಲ್ಲಿ ಇಂದು (ಅ.09) ಕೊರೋನಾ ವೈರಸ್ (Coronavirus) ಕೊಂಚ ಏರಿಕೆಯಾಗಿದೆ. ಹೊಸದಾಗಿ 451 ಜನರಿಗೆ ಸೋಂಕು ತಗುಲಿದ್ದು,  ಸೋಂಕಿನಿಂದ 9 ಜನರು ಸಾವನ್ನಪ್ಪಿದ್ದಾರೆ. 

ರಾಜ್ಯದಲ್ಲಿ ಕೊರೋನಾ ಸೋಂಕಿತರ (Coronavirus) ಸಂಖ್ಯೆ 29,80,621 ಕ್ಕೆ ಏರಿಕೆಯಾಗಿದ್ರೆ, ಈವರೆಗೆ ಕೊರೋನಾದಿಂದ 37,875 ಜನ ಸಾವನ್ನಪ್ಪಿದ್ದಾರೆ. 

Latest Videos

undefined

ಕೋವಿಡ್‌ ಬಗ್ಗೆ ಇನ್ನೂ 3 ತಿಂಗಳು ಎಚ್ಚರ

ಸೋಂಕಿತರ ಪೈಕಿ 29,32,322 ಜನ  ಗುಣಮುಖರಾಗಿ ಆಸ್ಪತ್ರೆಯಿಂದ (Hospital) ಡಿಸ್ಚಾರ್ಜ್ ಆಗಿದ್ದು, ಪ್ರಸ್ತುತ ರಾಜ್ಯದಲ್ಲಿ 10,395 ಸಕ್ರಿಯ (Active Case) ಕೇಸ್‌ಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ (Bengaluru) ಇಂದು ಒಂದೇ ದಿನ 187 ಜನರಿಗೆ ಕೊವಿಡ್-19 (Covid19) ಸೋಂಕು ದೃಢಪಟ್ಟಿದ್ದು, 3 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಬೆಂಗಳೂರಲ್ಲಿ ಕೊರೋನಾ ಪೀಡಿತರ ಸಂಖ್ಯೆ 12,48,157 ಕ್ಕೆ ಏರಿಕೆಯಾಗಿದ್ರೆ, 16,183 ಜನರು ಬಲಿಯಾಗಿದ್ದಾರೆ.

 12,48,157 ಸೋಂಕಿತರ ಪೈಕಿ 12,25,246 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಬೆಂಗಳೂರಲ್ಲಿ 6,727 ಜನರಲ್ಲಿ ಕೊರೊನಾ  ಸಕ್ರಿಯವಾಗಿದೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ
ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 187, ಬೀದರ್ 1, ಚಾಮರಾಜನಗರ 3, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 3, ಚಿತ್ರದುರ್ಗ 4, ದಕ್ಷಿಣ ಕನ್ನಡ 27, ದಾವಣಗೆರೆ 2, ಧಾರವಾಡ 5, ಗದಗ 1, ಹಾಸನ 43, ಹಾವೇರಿ 0, ಕಲಬುರಗಿ 0, ಕೊಡಗು 14, ಕೋಲಾರ 4, ಕೊಪ್ಪಳ 0, ಮಂಡ್ಯ 11, ಮೈಸೂರು 48, ರಾಯಚೂರು 0, ರಾಮನಗರ 1, ಶಿವಮೊಗ್ಗ 9, ತುಮಕೂರು 17, ಉಡುಪಿ 21, ಉತ್ತರ ಕನ್ನಡ 37, ವಿಜಯಪುರ 0, ಯಾದಗಿರಿ 0.

click me!