ಬೆಂಗಳೂರಲ್ಲಿ ಭಾರೀ ಮಳೆ: ಕಸದ ರಾಶಿಯನ್ನೇ ಹೊತ್ತು ತಂದ ವೃಷಭಾವತಿ!

Published : May 19, 2025, 12:13 PM ISTUpdated : May 19, 2025, 12:16 PM IST
ಬೆಂಗಳೂರಲ್ಲಿ ಭಾರೀ ಮಳೆ: ಕಸದ ರಾಶಿಯನ್ನೇ ಹೊತ್ತು ತಂದ ವೃಷಭಾವತಿ!

ಸಾರಾಂಶ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿಯಿಂದ ಬೆಳಗಿನವರೆಗೆ ಸುರಿದ ಭಾರೀ ಮಳೆಯಿಂದ ವೃಷಭಾವತಿ ನದಿ ತುಂಬಿ ಹರಿಯುತ್ತಿದೆ. ಆದರೆ, ಈ ನದಿಯಲ್ಲಿ ಬೆಂಗಳೂರು ನಗರದ ಕೊಳಚೆ ನೀರು ಮತ್ತು ರಾಶಿರಾಶಿ ಕಸ ಹರಿದುಬರುತ್ತಿರುವುದು ಬಿಡದಿ ಹೋಬಳಿಯ ಚಿಕ್ಕಕುಂಟನಹಳ್ಳಿ ಗ್ರಾಮಸ್ಥರಿಗೆ ತೀವ್ರ ಕಿರಿಕಿರಿಯನ್ನುಂಟು ಮಾಡಿದೆ.

ಬೆಂಗಳೂರು (ಮೇ.19): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿಯಿಂದ ಬೆಳಗಿನವರೆಗೆ ಸುರಿದ ಭಾರೀ ಮಳೆಯಿಂದ ವೃಷಭಾವತಿ ನದಿ ತುಂಬಿ ಹರಿಯುತ್ತಿದೆ. ಆದರೆ, ಈ ನದಿಯಲ್ಲಿ ಬೆಂಗಳೂರು ನಗರದ ಕೊಳಚೆ ನೀರು ಮತ್ತು ರಾಶಿರಾಶಿ ಕಸ ಹರಿದುಬರುತ್ತಿರುವುದು ಬಿಡದಿ ಹೋಬಳಿಯ ಚಿಕ್ಕಕುಂಟನಹಳ್ಳಿ ಗ್ರಾಮಸ್ಥರಿಗೆ ತೀವ್ರ ಕಿರಿಕಿರಿಯನ್ನುಂಟು ಮಾಡಿದೆ.

ಗ್ರಾಮದ ಸೇತುವೆ ಬಳಿ ಲೋಡ್ ಗಟ್ಟಲೆ ಕಸ ಸಂಗ್ರಹವಾಗಿದ್ದು, ನದಿಗೆ ಅಡ್ಡಲಾಗಿ ಕಸ ತಡೆಯೊಡ್ಡಿರುವ ಕಾರಣ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಇದೆ. ಇದರಿಂದ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನದಿ ಪಕ್ಕದಲ್ಲಿರುವ ಮನೆಗಳಿಗೆ ಕೊಳಚೆ ನೀರು ಮತ್ತು ಕಸದ ರಾಶಿ ತೊಂದರೆಯನ್ನುಂಟು ಮಾಡಿದ್ದು, ಗ್ರಾಮಸ್ಥರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವರುಣನ ಆರ್ಭಟ: ದಾಖಲೆಯ 104 ಮಿ.ಮೀ. ಮಳೆ, ಎಲ್ಲೆಲ್ಲಿ ಏನಾಯ್ತು? ಇಲ್ಲಿದೆ ವಿವರ

ವೃಷಭಾವತಿ ಸ್ವಚ್ಛತೆಗೆ ಗ್ರಾಮಸ್ಥರು ಮನವಿ:

ವೃಷಭಾವತಿ ನದಿಯ ಸ್ವಚ್ಛತೆಗೆ ಒತ್ತಾಯಿಸಿರುವ ಚಿಕ್ಕಕುಂಟನಹಳ್ಳಿ ಗ್ರಾಮಸ್ಥರು, ನದಿಯಲ್ಲಿ ಸಂಗ್ರಹವಾದ ಕಸವನ್ನು ತಕ್ಷಣ ತೆರವುಗೊಳಿಸಿ, ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಡುವಂತೆ ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. 'ನಗರದ ಕಸ ಮತ್ತು ಕೊಳಚೆ ನೀರು ನಮ್ಮ ಗ್ರಾಮಕ್ಕೆ ತೊಂದರೆಯಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಾಣಬೇಕು' ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಸ್ತುತ, ಸ್ಥಳೀಯ ಆಡಳಿತದಿಂದ ಯಾವುದೇ ಕ್ರಮಕ್ಕೆ ಸಂಬಂಧಿಸಿದ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಮುಂದಿನ ವರದಿಗಳಿಗೆ ಸಂಪರ್ಕದಲ್ಲಿರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್