ದಿನಾ ಬೆಳಗ್ಗೆ ಎದ್ದ ಕೂಡಲೇ ಮುಸ್ಲಿಮರ ಬಗ್ಗೆ ಮಾತಾಡುವ ಬಿಜೆಪಿಯವರು, ನಾಡು ದೇಶಕ್ಕೆ ಕೊಡುಗೆ ಏನು?

Published : May 19, 2025, 11:27 AM IST
ದಿನಾ ಬೆಳಗ್ಗೆ ಎದ್ದ ಕೂಡಲೇ ಮುಸ್ಲಿಮರ ಬಗ್ಗೆ ಮಾತಾಡುವ ಬಿಜೆಪಿಯವರು, ನಾಡು ದೇಶಕ್ಕೆ ಕೊಡುಗೆ ಏನು?

ಸಾರಾಂಶ

ಬಡವರ ನೋವು, ಮಹಿಳೆಯರ ಸಂಕಷ್ಟ ಅರಿತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಸಂಕಷ್ಟಕ್ಕೆ ಸ್ಪಂಧಿಸಿದೆ. ಗ್ಯಾರಂಟಿ ಯೋಜನೆಗಳಿಂದ ಬಡವರು ಬದುಕು ಕಟ್ಟಿಕೊಳ್ಳುವಂತಾಗಿದೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದರು.

 ಇಂಡಿ ಮೇ.19):: ಬಡವರ ನೋವು, ಮಹಿಳೆಯರ ಸಂಕಷ್ಟ ಅರಿತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಸಂಕಷ್ಟಕ್ಕೆ ಸ್ಪಂಧಿಸಿದೆ. ಗ್ಯಾರಂಟಿ ಯೋಜನೆಗಳಿಂದ ಬಡವರು ಬದುಕು ಕಟ್ಟಿಕೊಳ್ಳುವಂತಾಗಿದೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದರು.

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಮೇ 20ರಂದು ಹೊಸಪೇಟೆಯಲ್ಲಿ ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶದ ಹಿನ್ನಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ್ದು ಕಾಂಗ್ರೆಸ್‌ ಪಕ್ಷ, ಪಾಕಿಸ್ತಾನ ಹೊಡೆದುರಿಳಿಸಿದ್ದು ಇಂದಿರಾ ಗಾಂಧಿ ನೇತೃತ್ವದ ಕೇಂದ್ರದ ಕಾಂಗ್ರೆಸ್‌ ಸರ್ಕಾರ. ದೇಶ ರಕ್ಷಣೆ ಮಾಡಿದ್ದು ಕಾಂಗ್ರೆಸ್‌ ಪಕ್ಷ, ಧರ್ಮದ ವಿಚಾರದದಲ್ಲಿಯೂ ನಾವೇ ಶ್ರೇಷ್ಠರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರು, ಮಹಿಳೆಯರ ಹಿತ ಕಾಪಾಡಿದೆ ಎಂದು ಹೇಳಿದರು.ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರಲ್ಲಿ ಸಮರ್ಥ ನಾಯಕತ್ವ ಇದೆ. ಅವರು ಸಚಿವರಾಗುವುದು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಕಾಲ ಬರಬೇಕು. ಇಂಡಿ ಮತಕ್ಷೇತ್ರದ ಮತದಾರರು ಯಶವಂತರಾಯಗೌಡ ಪಾಟೀಲರನ್ನು ಸಚಿವರಾಗಿ ನೋಡುವ ಭಾಗ್ಯ ದೂರವಿಲ್ಲ ಎಂದು ಹೇಳಿದರು. ಅಲ್ಲದೇ, ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಅಧಿಕಾರಕ್ಕೆ ಬರುತ್ತಿರುವ ಬಿಜೆಪಿಗರಿಗೆ ಬುದ್ದಿ ಕಲಿಸಲು, ಹೊಸಪೇಟೆಯಲ್ಲಿ ಕಾಂಗ್ರೆಸ್‌ ಜಾತ್ರೆ ಹಮ್ಮಿಕೊಂಡಿದ್ದು, ತಾವೆಲ್ಲ ಆಗಮಿಸಬೇಕು. ಪಕ್ಷದ ಕಾರ್ಯಕರ್ತರು ಸ್ವಾಭಿಮಾನದಿಂದ ಸಾಮಾನ್ಯ ಜನರ ಬಳಿಗೆ ಹೋಗಿ ಕಾಂಗ್ರೆಸ್‌ ಪಕ್ಷದ ಸಾಧನೆ ಹೇಳಿಬರುವಂತೆ ತಲೆಎತ್ತಿ ನಡೆಯುವಂತೆ ಮಾಡಿದ ಕಾಂಗ್ರೆಸ್‌ ಸರ್ಕಾರ ಎಂದರು.

ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ 2 ವರ್ಷದ ಸಾಧನೆಯ ಸಮಾವೇಶ ಐತಿಹಾಸಿಕ ಕಾರ್ಯಕ್ರಮ ಆಗಲಿದೆ. ಪ್ರಪಂಚದಲ್ಲಿಯೇ ಯಾವ ರಾಜ್ಯವು ಗ್ಯಾರಂಟಿ ಯೋಜನೆಗಳ ಮೂಲಕ ಫಲಾನುಭವಿಗಳಿಗೆ ಅನುದಾನ ಹಾಕಿರುವ ಉದಾಹರಣೆ ಇಲ್ಲ. ಅದನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಮಾಡಿದೆ. 2028 ರಲ್ಲಿ ರಾಜ್ಯದಲ್ಲಿ ಮತ್ತೇ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಮುಂದಿನ 15 ವರ್ಷ ಇಂಡಿಯಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮೇ 20ರಂದು ಹೊಸಪೇಟೆಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶಕ್ಕೆ ಮತಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ನಾಳೆ ಸಿದ್ದು ಸರ್ಕಾರಕ್ಕೆ 2 ವರ್ಷ: 1,11,111 ಮಂದಿಗೆ ಹಕ್ಕುಪತ್ರ ವಿತರಣೆ; ಕಾರ್ಯಕ್ರಮದ ವಿವರ ಇಲ್ಲಿದೆ

ಪ್ರಶಾಂತ ಕಾಳೆ, ಜಟ್ಟೆಪ್ಪ ರವಳಿ, ಭೀಮಣ್ಣ ಕವಲಗಿ, ಇಲಿಯಾಸ ಬೊರಾಮಣಿ, ಲಿಂಬಾಜಿ ರಾಠೋಡ, ಜಹಾಂಗೀರ ಸೌದಾಗರ, ಭೀಮಾಶಂಕರ ಮೂರಮನ, ಶ್ರೀಕಾಂತ ಕುಡಿಗನೂರ, ಜಾವೀದ ಮೋಮಿನ, ಕಲ್ಲನಗೌಡ ಬಿರಾದಾರ, ಹುಚ್ಚಪ್ಪ ತಳವಾರ, ಸತೀಶ ಕುಂಬಾರ, ಯಮುನಾಜಿ ಸಾಳುಂಕೆ, ಸುಭಾಷ ಬಾಬರ, ಸಣ್ಣಪ್ಪ ತಳವಾರ, ಬಾಬುರಾವ ಗುಡಮಿ, ಶಬ್ಬಿರ ಖಾಜಿ, ಮುಸ್ತಾಕ ಇಂಡಿಕರ, ಶೇಖರ ಶಿವಶರಣ, ಉಮೇಶ ದೇಗಿನಾಳ, ರೈಸ್‌ ಅಷ್ಟೇಕರ, ನಿರ್ಮಲಾ ತಳಕೇರಿ, ಶೈಲಶ್ರೀ ಜಾಧವ, ಯಲ್ಲಪ್ಪ ಬಂಡೇನವರ, ಮಲ್ಲು ಮಡ್ಡಿಮನಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯ ನಂಬರ್ 1 ಮಾಡಿ : ಸಿಎಂ ಸಿದ್ದರಾಮಯ್ಯ

ಬೆಳಿಗ್ಗೆ ಎದ್ದ ಕೂಡಲೆ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ಬಿಜೆಪಿಯವರು, ನಾಡು, ದೇಶಕ್ಕಾಗಿ ಏನು ಮಾಡಿದ್ದಾರೆ. ಅಪರೇಷನ್‌ ಸಿಂದೂರಕ್ಕೆ ಕಾಂಗ್ರೆಸ್‌ನವರು ಸಂಪೂರ್ಣ ಬೆಂಬಲ ಸೂಚಿಸಿದ್ದೇವೆ. ಆದರೆ ಯುದ್ಧ ಯಾಕೆ ಹಿಂಪಡೆಯಲಾಯಿತು. ಇವರು ದೇಶ ರಕ್ಷಣೆ ಮಾಡುವರೇ? ಕೇಂದ್ರ ಸರ್ಕಾರದ ಬೇಹುಗಾರಿಕೆ ಸಂಪೂರ್ಣ ವಿಫಲವಾಗಿದೆ. ಮಾತೆತ್ತಿದರೆ ದೇಶ, ಧರ್ಮ ಎಂದು ಹೇಳುವ ಬಿಜೆಪಿ ದೇಶದ ರಕ್ಷಣೆ ಏಕೆ ಮಾಡಲಿಲ್ಲ. ಯುದ್ಧ ನಿಲ್ಲಿಸಿದ್ದು ಯಾಕೆ ..?

ಆರ್‌.ಬಿ.ತಿಮ್ಮಾಪುರ, ಅಬಕಾರಿ ಸಚಿವರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌