
ಪಾಂಡವಪುರ (ಡಿ.17): ತಾಲೂಕಿನ ಚಿಕ್ಕಮರಳಿ ಗೇಟ್‌ನ ಮಡಿಕೆಪಟ್ಟಣ ಗ್ರಾಮದ ನಿವಾಸಿ, ನಿವೃತ್ತ ಶಿಕ್ಷಕ ರಾಮೇಗೌಡ ಎಂಬ ರೈತ ತಾನು ಸಾಕುತ್ತಿದ್ದ ವರಲಕ್ಷ್ಮಿ ಎಂಬ ಹೆಸರಿನ ಹಸುವು ಗರ್ಭಧರಿಸಿ 9 ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಹಸುವಿಗೆ ಸೀಮಂತ ಮಾಡಿ ನೂರಾರು ಜನರಿಗೆ ಊಟ ಹಾಕಿಸುವ ಮೂಲಕ ಹಸುವಿನ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಹಸುಗಳನ್ನು ಖಸಾಯಿ ಖಾನೆಗೆ ಬಿಡುವುದು, ಕೆಚ್ಚಲು ಕತ್ತರಿಸುವ ಸಮಾಜದ ನಡುವೆ ರೈತನೊಬ್ಬ ಗರ್ಭಿಣಿಯರಿಗೆ ಸೀಮಂತ ಮಾಡುವ ಮಾದರಿಯಲ್ಲಿಯೇ ಹಸುವಿಗೆ ಮಾಡಿದ್ದಾರೆ. ರೈತ ರಾಮೇಗೌಡರು ತನ್ನ ಹಸು 2ನೇ ಬಾರಿ ಗರ್ಭಧರಿಸಿ 9 ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ಮನೆಯಲ್ಲಿ ತಮ್ಮ ಸಂಬಂಕರು, ಕುಟುಂಬಸ್ಥರು ಎಲ್ಲರಿಗೂ ಮಾಹಿತಿ ನೀಡಿ ಗರ್ಭಿಣಿ ಹೆಣ್ಣು ಮಕ್ಕಳಿಗೆ ಸೀಮಂತ ಮಾಡುವ ಮಾದರಿಯಲ್ಲಿ ಹಣ್ಣು, ತರಕಾರಿ, ವಿವಿಧ ಸಿಹಿ ತಿನಿನ್ನುಗಳ ತಟ್ಟೆತುಂಬಿ, ಹಸುವಿನ ಮೇಲೆ ಹೊಸ ಸೀರೆ, ರವಿಕೆ ಹಾಕಿ ಸೀಮಂತ ಮಾಡಿದ್ದಾರೆ. 100ಕ್ಕೂ ಹೆಚ್ಚುಮಂದಿ ಜನರಿಗೆ ಭರ್ಜರಿ ಊಟ ಹಾಕಿಸಿ ಗೋಪ್ರೇಮಿ ಎಂಬುದನ್ನು ಸಾಬೀತುಪಡಿಸಿದ್ದಾರೆ.
ನಿವೃತ್ತ ಶಿಕ್ಷಕನಾಗಿ, ಗೋವುಗಳ ಮೇಲೆ ಅಪಾರ ಪ್ರೀತಿ ಹೊಂದಿರುವ ರೈತ ರಾಮೇಗೌಡ ತಾವು ಸಾಕಿರುವ ಎಲ್ಲಾ ಹಸುಗಳನ್ನು ತಮ್ಮ ಮಕ್ಕಳಂತೆ ಪಾಲನೆ ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ. ಮಕ್ಕಳಿಗೆ ಹುಟ್ಟುಹಬ್ಬ ಆಚರಣೆ ಮಾಡುವ ಮಾದರಿಯಲ್ಲಿಯೇ ಹಸುಗಳಿಗೆ ಹುಟ್ಟುಹಬ್ಬ ಮಾಡುವುದು, ಹಬ್ಬಗಳಲ್ಲಿ ಪೂಜೆ ಸಲ್ಲಿಸುವುದು, ಗರ್ಭಧರಿಸಿ ಹಸುಗಳಿಗೆ ಸೀಮಂತ ಮಾಡುವುದು ಹೀಗೆ ವಿಶೇಷವಾದ ರೀತಿಯಲ್ಲಿ ಹಸುಗಳನ್ನು ಸಾಕಾಣಿಕೆ ಮಾಡಿಕೊಂಡು ಬರುತ್ತಾ ಬರುತ್ತಿದ್ದು, ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ