ಹೃದಯಾಘಾತಕ್ಕೆ ಹೆದರಿದ ಜನತೆ: ಜಯದೇವ ಆಸ್ಪತ್ರೆಗಳಿಗೆ ದಾಂಗುಡಿ

Kannadaprabha News   | Kannada Prabha
Published : Jul 02, 2025, 05:51 AM IST
heart attack

ಸಾರಾಂಶ

ಹಾಸನದಲ್ಲಿ ಸಾಲುಸಾಲು ಹೃದಯಸ್ತಂಭನದಿಂದ ಸಾವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಮತ್ತು ಕಲಬುರಗಿಯಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಹೃದಯ ತಪಾಸಣೆಗಾಗಿ ಜನರು ದಾಂಗುಡಿ ಇಡುತ್ತಿದ್ದಾರೆ.

ಬೆಂಗಳೂರು/ ಮೈಸೂರು/ ಕಲಬುರಗಿ (ಜು.02): ಹಾಸನದಲ್ಲಿ ಸಾಲುಸಾಲು ಹೃದಯಸ್ತಂಭನದಿಂದ ಸಾವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಮತ್ತು ಕಲಬುರಗಿಯಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಹೃದಯ ತಪಾಸಣೆಗಾಗಿ ಜನರು ದಾಂಗುಡಿ ಇಡುತ್ತಿದ್ದಾರೆ. ಮೂರು ಆಸ್ಪತ್ರೆಗಳಲ್ಲದೆ ಖಾಸಗಿ ಆಸ್ಪತ್ರೆಗಳಿಗೂ ಯುವಕ-ಯುವತಿಯರು, ವೃದ್ಧರು ಹೃದಯ ತಪಾಸಣೆಗೆ ಒಳಗಾಗುತ್ತಿದ್ದಾರೆ. ಬಹುತೇಕ ಆಸ್ಪತ್ರೆಗಳಲ್ಲಿ ನಿತ್ಯ ಬರುವ ರೋಗಿಗಳಿಗಿಂತಲೂ ಹೆಚ್ಚಿನ ಜನರು ಕಂಡು ಬರುತ್ತಿದ್ದಾರೆ.

ಬೆಂಗಳೂರಿನ ಜಯದೇವದಲ್ಲಿ ಮಂಗಳವಾರ ಸಾಮಾನ್ಯ ದಿನಗಳಿಗಿಂತ ಶೇ.20ರಷ್ಟು ಹೆಚ್ಚಿನವರು ಹೃದಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಜನತೆಯಲ್ಲಿ ಹೃದಯಾಘಾತ, ಹೃದಯ ಸ್ತಂಭನ ಆತಂಕ ಆವರಿಸಿದ್ದು ಹೆಚ್ಚಾಗಿ ಯುವಕರು, ಮಧ್ಯವಯಸ್ಕರು ತಪಾಸಣೆಗೆ ಬಂದಿದ್ದರು. ಪ್ರತಿದಿನ ರೋಗಿಗಳು ಸೇರಿದಂತೆ ಸಾಮಾನ್ಯವಾಗಿ 1200-1300 ಜನ ಇಲ್ಲಿನ ಜಯದೇವ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಾರೆ. ಮಂಗಳವಾರ ಸುಮಾರು 1700 ಜನ ಹೃದಯ ತಪಾಸಣೆ ಮಾಡಿಸಿಕೊಂಡಿದ್ದಾರೆ.

ಇನ್ನು ಮೈಸೂರಿನ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಿಂದ ನೂರಾರು ಮಂದಿ ಆಗಮಿಸಿದ್ದು, ಮುಂಜಾನೆಯೆಯಿಂದಲೇ ಆಸ್ಪತ್ರೆಯ ಓಪಿಡಿ ಫುಲ್ ರಷ್ ಆಗಿತ್ತು. ಆಸ್ಪತ್ರೆ ಆವರಣದಲ್ಲಿ ಜನ ಹೆಚ್ಚಾದ ಹಿನ್ನೆಲೆಯಲ್ಲಿ ಜನರನ್ನು ನಿಯಂತ್ರಣ ಮಾಡಲಾಗದೇ ಬ್ಯಾರಿಕೇಡ್ ಸಿಸ್ಟಮ್‌ ಮಾಡಿದ ಆಸ್ಪತ್ರೆ ಸಿಬ್ಬಂದಿ. ಸರತಿ ಸಾಲಲ್ಲಿ ನಿಂತಿರುವ ರೋಗಿಗಳಲ್ಲಿ ಯುವಕ, ಯುವತಿಯರ ಸಂಖ್ಯೆ ಹೆಚ್ಚಾಗಿತ್ತು. ಪ್ರತಿನಿತ್ಯ 500 ರಷ್ಟು ಬರುತ್ತಿದ್ದ ರೋಗಿಗಳ ಸಂಖ್ಯೆ ದಿಢೀರ್ 1500 ಅಧಿಕವಾಗಿದೆ. ಇವರಲ್ಲಿ ಮೊದಲ ಬಾರಿ ಬಂದಿರುವವರ ಸಂಖ್ಯೆಯೇ ಹೆಚ್ಚಿದೆ.

ಇನ್ನು ಕಲಬುರಗಿಯ ಜಯದೇವ ಹೃದರ್ರೋಗ ವಿಜ್ಞಾನಗಳ ಸಂಸ್ಥೆಗೆ 6 ತಿಂಗಳಲ್ಲೇ ರೋಗಿಗಳ ಸಂಖ್ಯೆ ಹೆಚ್ಚಿದೆ. ಓಪಿಡಿಗೆ 600 ಮಂದಿ ಭೇಟಿ ನೀಡಿದ್ದರು. ಸಾಮಾನ್ಯವಾಗಿ 300ರಿಂದ 500 ಮಂದಿ ಭೇಟಿ ನೀಡುತ್ತಿದ್ದರು. ಶೇ.25ರಷ್ಟು ಭೀತಿಯಿಂದ ಬಂದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಇಪ್ಪತ್ತು ಮಂದಿ ಹೃದಯಾಘಾತದಿಂದ ಮೃತಪಟ್ಟಿರುವ ಪ್ರಕರಣಗಳ ಅಧ್ಯಯನ ನಡೆಸಿ 10 ದಿನಗಳಲ್ಲಿ ವರದಿ ನೀಡುವಂತೆ ತಜ್ಞರ ಸಮಿತಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಇಂತಹ ಪ್ರಕರಣಗಳ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌