ಬ್ರಿಟನ್ ಕೊರೋನಾ ವೈರಸ್ ಇದೀಗ ದೇಶದೆಲ್ಲೆಡೆ ಬೀತಿ ಶುರುವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇನ್ನು ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಅವರು ಮಾಹಿತಿ ಕೊಟ್ಟಿದ್ದಾರೆ.
ಬೆಂಗಳೂರು, (ಡಿ.23): ಕೊರೋನಾ ರೂಪಾಂತರ ವೈರಸ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದು (ಬುಧವಾರ) ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿಯಾಗಲಿದೆ.
undefined
ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್ ಕರ್ಫ್ಯೂ ಇರಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನವರಿ 2ರವರೆಗೂ ರಾತ್ರಿ ಕರ್ಫ್ಯೂ ಇರಲಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ದೊರೆಯಲಿವೆ.
ರಾಜ್ಯದಲ್ಲಿ ನೈಟ್ ಕರ್ಫ್ಯೂ: ರಾತ್ರಿ ಪ್ರಯಾಣಿಕರಿಗೆ ಸವದಿ ವಿಶೇಷ ಮನವಿ
ಸುಧಾಕರ್ ಸುದ್ದಿಗೋಷ್ಠಿಯ ವಿವರಣೆ
ಇಂಗ್ಲೆಂಡ್ನಲ್ಲಿ ರೂಪಾಂತರಗೊಂಡ ಹೊಸ ಮಾದರಿ ಕೊರೋನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆ ರಾಜ್ಯದಲ್ಲಿ ಏನೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಬೇಕು ಎಂಬ ಬಗ್ಗೆ ಇಂದು (ಬುಧವಾರ) ನಿರ್ಧಾರ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ರೂಪಾಂತರಗೊಂಡ ಹೊಸ ಕೊರೋನಾ ವೈರಸ್ ಬಗ್ಗೆ ನಿನ್ನೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಸಭೆ ನಡೆಸಿದ್ದಾರೆ. ಈ ಬಗ್ಗೆ ವರದಿ ನೀಡಲಿದ್ದು, ಅದನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಅನಾರೋಗ್ಯ ಹಾಗೂ ಸಾವಿನ ವಿಚಾರದಲ್ಲಿ ಯಾರೂ ಆಟ ಆಡಲ್ಲ, ಸದ್ಯ ರಾಜ್ಯಕ್ಕೆ ಬ್ರಿಟನ್ನಿಂದ ವಾಪಸ್ಸಾಗಿರುವ 138 ಜನರನ್ನೂ ಟ್ರೇಸ್ ಮಾಡಲಾಗಿದೆ. ಅವರಲ್ಲಿ ಶೇಕಡಾ 70 ರಷ್ಟು ಜನರ ಕೊರೋನಾ ಪರೀಕ್ಷೆಗಳನ್ನು ಮಾಡಲಾಗಿದ್ದು, ಉಳಿದವರಿಗೆ ಇಂದು ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಶೇಕಡಾ 80- 90 ರಷ್ಟು ಜನಕ್ಕೆ ಕೊರೊನಾ ನೆಗೆಟಿವ್ ವರದಿ ಬಂದಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಎಚ್ಚರಿಕೆಯಂತೆ ನಾವು ಕ್ರಮಕೈಗೊಂಡಿದ್ದೇವೆ. ಮುಂದೆಯೂ ಎಚ್ಚರಿಕೆ ವಹಿಸಲಾಗುತ್ತದೆ. ಆ ಸೀಕ್ವೆನ್ಸಿಂಗ್ ಟೆಸ್ಟ್ ನಿಮಾನ್ಸ್ನಲ್ಲಿ ನಡೆಸಲಾಗುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೂಚನೆಯನ್ನೂ ನೀಡಿದ್ದೇನೆ. ಈ ವೈರೆಸ್ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಾನು ಈ ಮೊದಲೇ ಈ ಬಗ್ಗೆ ತಿಳಿಸಿದ್ದೇನೆ. ಇದಕ್ಕೂ ಮುಂಚಿನ ವೈರೆಸ್ಗೂ ಅಂತದ್ದೇನೂ ದೊಡ್ಡ ವ್ಯತ್ಯಾಸವಿಲ್ಲ. ರೋಗ ವೇಗವಾಗಿ ಹರಡುತ್ತಿದೆ, ಆದರೆ ಅಷ್ಟೊಂದು ತೀವ್ರವಾಗಿಲ್ಲ. ಯುರೋಪ್ನಲ್ಲೂ ಲಕ್ಷಂತರ ಜನರಿಗೆ ಹರಡಿದೆ ಆದರೆ ಸಾವು ನೋವುಗಳೇನು ಹೆಚ್ಚಾಗಿಲ್ಲ. ಆದ್ದರಿಂದ ಯಾರೂ ಈ ಬಗ್ಗೆ ಹೆಚ್ಚು ಆತಂಕ ಪಡಬೇಕಾಗಿಲ್ಲ ಎಂದು ಮಾಹಿತಿ ನೀಡಿದರು.
ಚೆನ್ನೈಸೇರಿದಂತೆ ನೆರೆಯ ರಾಜ್ಯಗಳಲ್ಲಿ ಹೊಸ ಪ್ರಭೇದದ ಕೊರೊನಾವೈರಸ್ ಕಾಣಿಸಿಕೊಂಡಿರೋ ಬಗ್ಗೆ ಮಾಹಿತಿಗಳು ತಿಳಿದುಬರುತ್ತಿವೆ, ಆದರೆ ಖಚಿತವಾಗಿಲ್ಲ. ಇಂದು ಈ ಸಂಬಂಧ ಸ್ಪಷ್ಟವಾದ ಮಾಹಿತಿ ಪಡೆದು ನಂತರ ಅದು ಖಚಿತವಾದರೆ ಅದಕ್ಕೆ ಅನುಸರಿಸಬೇಕಾದ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಹೇಳಿದರು.