25 ವರ್ಷಗಳಲ್ಲಿ ಇಂತಹ ಆಪಾದನೆ ಬಂದಿಲ್ಲ, ಮಾಡದ ತಪ್ಪು ಒಪ್ಪಿಕೊಳ್ಳುವಂತೆ ಅಧಿಕಾರಿಗಳ ಒತ್ತಡ: ಜಡ್ಜ್‌ಗೆ ರೇವಣ್ಣ ದೂರು

Published : May 09, 2024, 10:59 AM IST
 25 ವರ್ಷಗಳಲ್ಲಿ ಇಂತಹ ಆಪಾದನೆ ಬಂದಿಲ್ಲ, ಮಾಡದ ತಪ್ಪು ಒಪ್ಪಿಕೊಳ್ಳುವಂತೆ ಅಧಿಕಾರಿಗಳ ಒತ್ತಡ: ಜಡ್ಜ್‌ಗೆ ರೇವಣ್ಣ ದೂರು

ಸಾರಾಂಶ

ನ್ಯಾಯಾಧೀಶರು, ರೇವಣ್ಣ ಅವರಿಗೆ ಪ್ರಕರಣ ಕುರಿತು ವಿಚಾರಿಸಿದರು. ಆಗ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ ರೇವಣ, ರಾಜಕೀಯ ಷಡ್ಕಂತ್ರ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಅಳಲು ತೋಡಿಕೊಂಡರು. 

ಬೆಂಗಳೂರು(ಮೇ.09): 'ನನ್ನ ಇಪ್ಪತ್ತೈದು ವರ್ಷಗಳ ರಾಜಕಾರಣದಲ್ಲಿ ಈ ರೀತಿ ಅಪಾದನೆ ಯಾವತ್ತೂ ಬಂದಿಲ್ಲ. ನಾನು ನಿಷ್ಕಳಂಕ ರಾಜಕಾರಣಿ, ನನಗೆ ಹಿಂಸೆ ಕೊಟ್ಟು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಎಸ್‌ಐಟಿ ಅಧಿಕಾರಿಗಳು ಒತ್ತಡಹಾಕಿದರು' ಎಂದು ಎಸ್ ಐಟಿಯಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ, ಎಚ್.ಡಿ.ರೇವಣ್ಣ ಅವರು ನ್ಯಾಯಾಧೀಶರ ಎದುರು ಹೇಳಿದ್ದಾರೆ. ಲೈಂಗಿಕ ಹಗರಣದ ಶೋಷಿತ ಮಹಿಳೆ ಅಪಹರಣ ಪ್ರಕರಣ ಸಂಬಂಧ ಪೊಲೀಸ್ ಕಸ್ಟಡಿ ಮುಗಿದ ಹಿನ್ನಲೆಯಲ್ಲಿ ಬುಧವಾರ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಎಸ್‌ಐಟಿ ಕಾರಿನಲ್ಲಿ ಎಚ್.ಡಿ.ರೇವಣ್ಣ

ಈ ವೇಳೆ ನ್ಯಾಯಾಧೀಶರು, ರೇವಣ್ಣ ಅವರಿಗೆ ಪ್ರಕರಣ ಕುರಿತು ವಿಚಾರಿಸಿದರು. ಆಗ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ ರೇವಣ, ರಾಜಕೀಯ ಷಡ್ಕಂತ್ರ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಅಳಲು ತೋಡಿಕೊಂಡರು.

ಒಕ್ಕಲಿಗರಿಗೂ ಪ್ರಜ್ವಲ್‌ ಕಳಂಕಕ್ಕೂ ಸಂಬಂಧವಿಲ್ಲ: ಒಕ್ಕಲಿಗ ನಾಯಕರ ಆಕ್ರೋಶ

"ನಾನು 25 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಎಂದಿಗೂ ಈ ರೀತಿ ಅಪಾದನೆ ಬಂದಿಲ್ಲ. ನಾನು ನಿಷ್ಕಳಂಕ ರಾಜಕಾರಣಿಯಾಗಿದ್ದೇನೆ. ನಾನು ತಪ್ಪು ಮಾಡಿಲ್ಲ. ಮಹಿಳೆ ಅಪಹರಣ ನಡೆದ ದಿನ ನಾನು ಊರಿನಲ್ಲೇ ಇರಲಿಲ್ಲ. ನಾನು ಯಾರಿಗೂ ಕರೆ ಮಾಡಿ ಮಾತು ಸಹ ಆಡಿಲ್ಲ. ಹೀಗಿದ್ದರೂ ನನ್ನನ್ನು ಮಹಿಳೆ ಅಪಹರಣದಲ್ಲಿ ಆರೋಪಿ ಮಾಡಿದ್ದಾರೆ' ಎಂದು ತಿಳಿಸಿದರು.

'ನನಗೆ ಎಸ್‌ಐಟಿ ಅಧಿಕಾರಿಗಳು ವಿವ ದೀತ ತೊಂದರೆ ಕೊಟ್ಟಿದ್ದಾರೆ. ವೈದ್ಯರು ಚಿಕಿತ್ಸೆ ಕೊಡಿಸುವಂತೆ ಹೇಳಿದರೂ ಕೂಡ ನನಗೆ ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ಯನ್ನು ಅಧಿಕಾರಿಗಳು ಕೊಡಿಸಿಲ್ಲ. ನಿನ್ನೆ ವಿಚಾರಣೆ ಎಲ್ಲ ಮುಗಿದಿದೆ ಎಂದು ಹೇಳಿ. ನನ್ನನ್ನು ಆಸ್ಪತ್ರೆಯಿಂದ ಅಧಿಕಾರಿಗಳು ಕರೆ ತಂದರು. ಆದರೆ ಇಂದು ಬೆಳಗ್ಗೆ ಮತ್ತೆ 2 ಗಂಟೆಗಳು ವಿಚಾರಣೆ ಮಾಡಿ ನನಗೆ ಕಿರು ಕುಳ ಕೊಟ್ಟಿದ್ದಾರೆ. ನಾನು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಅಧಿಕಾರಿಗಳು ಒತ್ತಡ ಹಾಕಿದರು. ಮಾಡದ ತಪ್ಪನ್ನು ಹೇಗೆ ಒಪ್ಪಿ ಕೊಳ್ಳಲಿ ಎಂದು ರೇವಣ್ಣನಿವೇದಿಸಿದರು.

ಕಾಂಗ್ರೆಸ್‌ನವ್ರು ಹಿಡನ್ ಕ್ಯಾಮೆರಾ ಇಟ್ಟು ರೆರ್ಕಾಡ್ ಮಾಡಿಸಿದ್ದಿವಾ?: ಎಚ್‌ಡಿಕೆಗೆ ಪ್ರಿಯಾಂಕ್‌ ಪ್ರಶ್ನೆ

ನಾನು ನನ್ನ ಕೈಲಾದ ಮಟ್ಟಿಗೆ ಅಧಿಕಾರಿ ಗಳ ತನಿಖೆಗೆ ಸಹಕರಿಸಿದ್ದೇನೆ. ಅವರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಇದಕ್ಕಿಂತ ಅನ್ನು ತನಿಖೆಗೆ ಸಹರಿಸಲು ನನ್ನಿಂದ ಸಾಧ್ಯವಿಲ್ಲ ಕಳೆದ ಮೂರು ದಿನಗಳಿಂದ ನಾನು ನಿದ್ದೆ ಮಾಡಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದೆ. ನಾನು ಸಭ್ಯ ರಾಜಕಾರಣ ಮಾಡಿದ್ದೇನೆ. ಕಾನೂನಿಗೆ ತಲೆಬಾಗಿ ನಡೆದುಕೊಂಡಿದ್ದೇನೆ ಎಂದು ಭಾವುಕರಾಗಿ ನುಡಿದರು.

ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ಬೆಂಗಳೂರು: ಲೈಂಗಿಕ ಪ್ರಕರಣದ ಸಂತ್ರಸ್ತೆಯ ಅಪಹರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತೆ ಮುಂದೂಡಿದೆ. ಬುಧವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ಗುರುವಾರಕ್ಕೆ ವಿಚಾರಣೆಯನ್ನು ಮುಂದೂಡಿತು. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲ ಕಾಲಾವಕಾಶ ನೀಡುವಂತೆ ಎಸ್‌ಐಟಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ ಇದಕ್ಕೆ ಒಪ್ಪದ ನ್ಯಾಯಾಲಯವು ಗುರುವಾರ ಆಕ್ಷೇಪಣೆ ಸಲ್ಲಿಸುವಂತೆ ತಿಳಿಸಿ ವಿಚಾರಣೆಯನ್ನು ಮುಂದೂಡಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್