* ಸರ್ಕಾರದ ಆದೇಶವನ್ನು ಎತ್ತಿ ಹಿಡಿದ ಕೋರ್ಟ್
* ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎಂದ ಕರ್ನಾಟಕ ಹೈಕೋರ್ಟ್
* ಈ ಬಗ್ಗೆ ಕುಮಾರಸ್ವಾಮಿ, ದೇವೇಗೌಡ ಹೇಳಿದ್ದಿಷ್ಟು
ಬೆಂಗಳೂರು.ನವದೆಹಲಿ, (ಮಾ.15): ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎಂದಿದೆ. ಅಲ್ಲದೇ ಶಾಲೆಗೆ ಕೇಸರಿ ಶಾಲು, ಹಿಜಾಬ್ ಆಗಲಿ ಯಾವುದೂ ಧರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಸರ್ಕಾರ ಕಡ್ಡಾಯಗೊಳಿಸಿದ್ದ ಸರ್ಕಾರದ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ (Karnataka Hijab Verdict).
ಹೈಕೋರ್ಟ್ ತೀರ್ಪಿನ ಬಗ್ಗೆ ಮಾಧ್ಯಮಗಳಿಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾಸ್ವಾಮಿ ಪ್ರತಿಕ್ರಿಯಿಸಿದ್ದು, ಶಾಲಾ-ಕಾಲೇಜುಗಳಲ್ಲಿ ಅಹಿತಕರ ವಾತಾವರಣವಿತ್ತು. ಸಮವಸ್ತ್ರದ ಬಗ್ಗೆ ಕಾನೂನು ಭಂಗವಾಗಿತ್ತು. ಇದರ ಬಗ್ಗೆ ನಿನ್ನೆ ಸದನದಲ್ಲಿ ನಿಲುವಳಿ ಮಂಡಿಸಿದ್ದೆ. ಇದು ಕಾಕತಾಳೀಯ ಅನಿಸುತ್ತೆ. ನಿನ್ನೆ ನಿಲುವಳಿ ಮಂಡಿಸಿದ್ದೆ, ಇಂದು ತೀರ್ಪು ಬಂದಿದೆ ಎಂದರು.
Hijab Verdict ಕರ್ನಾಟಕ ಹೈಕೋರ್ಟ್ ಹಿಜಾಬ್ ನಿಷೇಧ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ!
ಟಿವಿಗಳಲ್ಲಿ ಗಮನಿಸಿದೆ. ಕಾಂಗ್ರೆಸ್ನವರು ಕಾನೂನು ಹದಗೆಟ್ಟಿರುವ ಬಗ್ಗೆ ನೋಟಿಸ್ ಏನೋ ಕೊಡ್ತೀವಿ ಅಂತ ಹೇಳುತ್ತಿದ್ದಾರೆ. ನಾಳೆ ನಿಲುವಳಿ ಬಗ್ಗೆ ಪ್ರಸ್ತಾಪ ಮಾಡೋಕೆ ಸ್ಪೀಕರ್ ಅವಕಾಶ ಕೊಡ್ತಾರೆ.ಯಾವ ವಿಷಯ ಪ್ರಸ್ತಾಪ ಮಾಡಬೇಕೆಂದು ನಾಳೆ ಸದನದಲ್ಲಿ ಮಾತನಾಡ್ತೀನಿ. ತ್ರಿಸದಸ್ಯ ಪೀಠ ನೀಡಿರುವ ತೀರ್ಪು ಪಾಲಿಸಬೇಕಾಗಿರುವುದು ನಮ್ಮ ಕರ್ತವ್ಯ. ಶಾಲೆಗಳಲ್ಲಿ ಮಕ್ಕಳ ಭವಿಷ್ಯದ ಮೇಲಾಗಿರುವ ಸಮಸ್ಯೆಗಳನ್ನ ಸರ್ಕಾರ ಸರಿಪಡಿಸಬೇಕಾಗಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ದೇವೇಗೌಡ್ರ ಅಭಿಪ್ರಾಯ
ಇನ್ನು ಈ ಕುರಿತು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರು (HD Devegowda) ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಹೈಕೋರ್ಟ್ ಆದೇಶ ಏನಿದೆ ಅದನ್ನು ಒಪ್ಪಿಕೊಳ್ಳಲೇಬೇಕು. ನಮ್ಮ ಪಕ್ಷದ ನಿಲುವು ಹೈಕೋರ್ಟ್ ಆದೇಶದ ಪರವಾಗಿದೆ ಎಂದು ಎಂದಿದ್ದಾರೆ.
ರಾಜಕೀಯ ಲಾಭ-ನಷ್ಟದ ಬಗ್ಗೆ ನಾವು ಯೋಚನೆ ಮಾಡಲ್ಲ ಎಂದಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ರಾಜ್ಯದಲ್ಲಿ ಶಾಂತಿ ಇರಬೇಕು, ಕಲಿಕೆಗೆ ತೊಂದ್ರೆ ಆಗಬಾರದು. ಹಿಜಾಬ್ ವಿಚಾರದಲ್ಲಿ ಸರ್ಕಾರ ವಿಫಲವಾಯ್ತು ಅನಿಸುತ್ತದೆ. ಈ ವಿಚಾರ ಇಷ್ಟು ದೊಡ್ಡಮಟ್ಟಕ್ಕೆ ಬೆಳೆಯಲು ಬಿಡಬಾರದಿತ್ತು ಎಂದೂ ರಾಜ್ಯ ಸರ್ಕಾರದ ಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ಹಿಜಾಬ್ ತೀರ್ಪು
ಹಿಜಾಬ್ ಆಗಿನ ಕಾಲಘಟ್ಟದಲ್ಲಿ ಇಸ್ಲಾಂಗೆ ಸೀಮಿತವಾಗಿರಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಗಾಗಿ ಹಿಜಾಬ್ ಬಳಸಲಾಗಿತ್ತು. ಇದು ಧರ್ಮಕ್ಕಿಂತ ಆಗ ಸಂಸ್ಕೃತಿಯ ಭಾಗವಾಗಿತ್ತು. ಇಸ್ಲಾಂ ಪ್ರಾರಂಭದ ವೇಳೆ ಮಹಿಳೆಯ ಸ್ಥಿತಿ ಹೀನವಾಗಿತ್ತು. ಹೀಗಾಗಿ ಹಿಜಾಬ್ ಧರಿಸಲು ಆಗ ಸೂಚಿಸಲಾಗಿತ್ತು. ಈಗಲೂ ಅದೇ ಪರಿಸ್ಥಿತಿ ಇದೆಯೇ? ಹೀಗೆಂದು ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕು. ಹೀಗೆಂದು ಮುಸ್ಲಿಂ ವಿದ್ವಾಂಸ ಯೂಸುಫ್ ಅಲಿ ವಿಶ್ಲೇಷಿಸಿದ್ದಾರೆ. ಧರ್ಮದಲ್ಲಿ ಹೇಳಿರುವುದೆಲ್ಲಾ ಕಡ್ಡಾಯವೆಂದು ಭಾವಿಸಬೇಕಿಲ್ಲ. 1400 ವರ್ಷ ಹಳೆಯ ತ್ರಿವಳಿ ತಲಾಖ್ ರದ್ದುಪಡಿಸಲಾಗಿದೆ. ಸುರಾದಲ್ಲಿರುವುದನ್ನು ವಿಶ್ಲೇಷಿಸಿ ಪ್ರಮಾಣಪತ್ರ ಸಲ್ಲಿಸಿಲ್ಲ. ಯಾವುದೇ ಮೌಲ್ವಿಯ ಪ್ರಮಾಣಪತ್ರ ಸಲ್ಲಿಸಿಲ್ಲ. ಹೀಗಾಗಿ ಹಿಜಾಬ್ ಇಸ್ಲಾಂನಲ್ಲಿ ಅತ್ಯಗತ್ಯ ಆಚರಣೆಯಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿ
ಕರ್ನಾಟಕ ಹೈಕೋರ್ಟ್ನ ತ್ರಿಸದಸ್ಯ ಪೀಠ ಇವತ್ತು(ಮಾರ್ಚ್ 15) ಮಹತ್ವದ ತೀರ್ಪು ಪ್ರಕಟಿಸಿದೆ. ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆದ್ರೆ ಈ ತೀರ್ಪನ್ನು ಪ್ರಶ್ನಿಸಿ ವಿದ್ಯಾರ್ಥಿನಿ ನಿಬಾ ನಾಜ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.