ಮಹಿಳಾ ಪೊಲೀಸರಿಂದಲೇ ಪ್ರಜ್ವಲ್‌ನ ಬಂಧಿಸಿದ್ದು ಯಾಕೆ? ಇಲ್ಲಿದೆ ಎಸ್‌ಐಟಿ ಪ್ಲಾನ್!

Published : May 31, 2024, 07:15 AM ISTUpdated : May 31, 2024, 01:18 PM IST
ಮಹಿಳಾ ಪೊಲೀಸರಿಂದಲೇ ಪ್ರಜ್ವಲ್‌ನ ಬಂಧಿಸಿದ್ದು ಯಾಕೆ? ಇಲ್ಲಿದೆ ಎಸ್‌ಐಟಿ ಪ್ಲಾನ್!

ಸಾರಾಂಶ

ಹಾಸನ ಪೆನ್‌ಡ್ರೈವ್ ಪ್ರಕರಣ ಬಳಿಕ ದೇಶ ತೊರೆದಿದ್ದ ಸಂಸದ ಪ್ರಜ್ವಲ್ ರೇವಣ್ಣರನ್ನ 35 ದಿನಗಳ ಬಳಿಕ ಕೊನೆಗೂ ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಪ್ರಜ್ವಲ್‌ರನ್ನ ಮಹಿಳಾ ಪೊಲೀಸರೇ ಬಂಧಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.  ಬಂಧನ ವೇಳೆ ಚಾಲಕ ಹೊರತು ಪಡಿಸಿ ಮೂವರು ಮಹಿಳಾ ಸಿಬ್ಬಂದಿಯಿಂದಲೇ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು (ಮೇ.31): ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ದೇಶ ತೊರೆದಿದ್ದ ಸಂಸದ ಪ್ರಜ್ವಲ್ ರೇವಣ್ಣ 35 ದಿನಗಳ ಬಳಿಕ ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಮೇ.30ರಂದು ಬರುವುದಾಗಿ ಪ್ರಜ್ವಲ್ ವಿಡಿಯೋ ಮಾಡಿದ ದಿನದಿಂದಲೇ ಎಸ್‌ಐಟಿ ಅಧಿಕಾರಿಗಳು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಬೀಡುಬಿಟ್ಟಿದ್ದರು. ಕಳೆದ ಬಾರಿಯಂತೆ ಟಿಕೆಟ್  ಕ್ಯಾನ್ಸಲ್ ಮಾಡುವ ಸಂಭವವೂ ಇತ್ತು. ರಾಜತಾಂತ್ರಿಕ ವೀಸಾದ ಅವಧಿ ಇನ್ನೂ ಇದೆ ಹೀಗಿರುವಾಗ ಬರುವ ಸಾಧ್ಯತೆ ಕಡಿಮೆ ಇತ್ತು. ಆದರೆ ವಿಡಿಯೋದಲ್ಲಿ ಹೇಳಿದಂತೆ ಮೇ.30ಕ್ಕೆ ಬರುವುದು ಕನ್ಫರ್ಮ್ ಆದಾಗ ಅಲರ್ಟ್‌ ಆಗಿದ್ದ ಪೊಲೀಸರು. ಜರ್ಮನಿಯಿಂದಲೇ ಟ್ರ್ಯಾಕ್ ಮಾಡಿ ಬೆಂಗಳೂರಿನಲ್ಲಿ ಮಧ್ಯರಾತ್ರಿ 12.47ಕ್ಕೆ ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ಮೂವರು ಮಹಿಳಾ ಪೊಲೀಸ್ ಪೇದೆಗಳ ಮೂಲಕ ವಶಕ್ಕೆ ಪಡೆದಿದ್ದರು. ಮಹಿಳಾ ಪೊಲೀಸರಿಂದಲೇ ಬಂಧಿಸಿದ್ದು ಯಾಕೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಪ್ರಜ್ವಲ್ ರೇವಣ್ಣನನ್ನು ಹೆಡೆಮುರಿಕಟ್ಟಿದ ಐವರು ಮಹಿಳಾ ಪೊಲೀಸರು; ಮುಂದೈತೆ ಅಸಲಿ ತನಿಖೆ

ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಮಾಡಿದ್ದ ಎಸ್‌ಐಟಿ! ಹೌದು ಏರ್‌ಪೋರ್ಟ್‌ನಲ್ಲಿ ಮೂವರು ಮಹಿಳಾ ಅಧಿಕಾರಿಗಳಿಂದಲೇ  ಪ್ರಜ್ವಲ್ ಅರೆಸ್ಟ್ ಮಾಡಿಸಿದ ಎಸ್‌ಐಟಿ ಅಧಿಕಾರಿಗಳು. ಜೀಪ್ ಚಾಲಕ ಹೊರತುಪಡಿಸಿದ್ರೆ ಉಳಿದವರೆಲ್ಲ ಮಹಿಳಾ ಅಧಿಕಾರಿಗಳೇ ಇದ್ದರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೆಣ್ಣನ್ನು ಕೇವಲವಾಗಿ ನೋಡಿದ ಪ್ರಜ್ವಲ್‌ಗೆ ಮುಜುಗರ, ಅವಮಾನಿಸಲು, ನಾಚಿಕೆಪಡುವಂತಾಗಲಿ ಎಂದು ಮಹಿಳಾ ಅಧಿಕಾರಿಗಳಿಂದಲೇ ಅರೆಸ್ಟ್ ಮಾಡಿಸಿದ ಎಸ್‌ಐಟಿ ಆ ಮೂಲಕ ಹೆಣ್ಣು ಅಬಲೆಯಲ್ಲ, ನಾವಿದ್ದೇವೆ ಧೈರ್ಯವಾಗಿ ಬಂದು ದೂರು ನೀಡುವಂತೆ ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬುವ ಸಂದೇಶ ರವಾನಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!