ಹಾಸನ ಮಹಿಳೆಯರ ಅತ್ಯಾಚಾರ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಮಧ್ಯರಾತ್ರಿಯೂ 2000ಕ್ಕೂ ಅಧಿಕ ಜನರು ನಿದ್ದೆಗೆಟ್ಟು ಆತನ ಮೇಲೆ ಕಣ್ಣಿಟ್ಟಿದ್ದಾರೆ..
ಬೆಂಗಳೂರು (ಮೇ 30): ಹಾಸನದ ಸಂಸದ ಪ್ರಜ್ವಲ್ ರೇವಣ್ಣನ ಮೇಲೆ ಅತ್ಯಾಚಾರ ಆರೋಪ ಕೇಳಿಬಂದ ಬೆನ್ನಲ್ಲಿಯೇ ವಿದೇಶದಲ್ಲಿಯೇ ಉಳಿದಿಕೊಂಡು ಪೊಲೀಸರ ಕೈಗೆ ಸಿಗದೇ ಒಂದು ತಿಂಗಳ ಕಾಲ ತಪ್ಪಿಸಿಕೊಂಡಿದ್ದರು. ಆದರೆ, ಮ್ಯೂನಿಚ್‌ನಿಂದ ಬೆಂಗಳೂರಿಗೆ ವಿಮಾನದಲ್ಲಿ ಮೇ 30ರ ಮಧ್ಯರಾತ್ರಿ 12.30ಕ್ಕೆ ಆಗಮಿಸುವ ವೇಳೆಯೂ ಸುಮಾರು 2,000ಕ್ಕೂ ಅಧಿಕ ಜನರು ನಿದ್ದೆಗೆಟ್ಟು ಅವರ ವಿಮಾನವನ್ನು ಟ್ರ್ಯಾಕ್ ಮಾಡುತ್ತಿದ್ದಾರೆ.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನ ಭೀತಿಯಿಂದಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಾನು ಮೇ 31ರಂದು ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಅದರಂತೆ ಜರ್ಮನಿಯ ಮ್ಯೂನಿಚ್‌ನಿಂದ ಮೇ 30ರ ರಾತ್ರಿ ಬೆಂಗಳೂರಿಗೆ ಬರುವುದಕ್ಕೆ ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಜೆ 3 ಗಂಟೆ ಸುಮಾರಿಗೆ (ಜರ್ಮನಿ ಕಾಲಮಾನ ಬೆಳಗ್ಗೆ 11 ಗಂಟೆ) ಮ್ಯೂನಿಚ್‌ನಿಂದ ವಿಮಾನ ನಿಲ್ದಾಣಕ್ಕೆ ಎರಡು ಟ್ರಾಲಿ ಬ್ಯಾಗ್ ಗಳ ಜೊತೆಗೆ ಪ್ರವೇಶ ಮಾಡಿದ್ದರು.
undefined
2 ಟ್ರಾಲಿ ಬ್ಯಾಗ್ ಹಿಡಿದು ಮ್ಯೂನಿಚ್ ನಿಲ್ದಾಣದಲ್ಲಿ ಬೆಂಗಳೂರಿಗೆ ಫ್ಲೈಟ್ ಹತ್ತಿದ ಪ್ರಜ್ವಲ್ ರೇವಣ್ಣ
ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಸಂಜೆ 4 ಗಂಟೆಗೆ ಲುಫ್ತಾನ್ಸಾ ಏರ್‌ಲೈನ್ಸ್ ವಿಮಾನದ ಬಿಸಿನೆಸ್ ಕ್ಲಾಸ್ ಸೀಟ್ ನಂಬರ್ 8Gಯಲ್ಲಿ ಕುಳಿತು ಪ್ರಜ್ವಲ್ ರೇವಣ್ಣ ಪ್ರಯಾಣ ಮಾಡುತ್ತಿದ್ದು ಮಧ್ಯರಾತ್ರಿ 12.30ರ ವೇಳೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಇವರ ವಿಮಾನವನ್ನು ಮಧ್ಯರಾತ್ರಿಯಾದರೂ ನಿದ್ದೆಗಟ್ಟು ಸುಮಾರು 2,040 ಜನರು ಟ್ರ್ಯಾಕ್ ಮಾಡುತ್ತಿದ್ದಾರೆ. ಇದರಲ್ಲಿ ಪೊಲೀಸರು, ಮಾಧ್ಯಮಗಳು, ರಾಜಕೀಯ ವ್ಯಕ್ತಿಗಳು, ಸಾರ್ವಜನಿಕರು ಹಾಗೂ ವಿಮಾನದಲ್ಲಿರುವ ಇತರೆ ಪ್ರಯಾಣಿಕರ ಮನೆಯವರು ಸೇರಿದ್ದಾರೆ.
ಕಳೆದೊಂದು ತಿಂಗಳಿಂದ ಎಸ್‌ಐಟಿ ಪೊಲೀಸರ ಕೈಗೆ ಸಿಗದೇ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿದ್ದರು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡದರೂ ಹಾಜರಾಗದ ಹಿನ್ನೆಲೆಯಲ್ಲಿ ಬ್ಲೂ ಕಾರ್ನರ್ ನೋಟೀಸ್ ಹೊರಡಿಸಲಾಗಿತ್ತು. ಇನ್ನು ಪ್ರಜ್ವಲ್ ರೇವಣ್ಣ ಈಗಾಗಲೇ ಭಾರತಕ್ಕೆ ಬರುವುದಕ್ಕೆ ಒಟ್ಟು 5 ಬಾರಿ ಟಿಕೆಟ್ ಬುಕ್ ಮಾಡಿದ್ದು, 4 ಬಾರಿ ಕ್ಯಾನ್ಸಲ್ ಆಗಿದೆ. ಈ ಬಾರಿ ಟಿಕೆಟ್ ಬುಕ್ ಮಾಡಿ ಆಗಮಿಸುತ್ತಿದ್ದಾರೆ. ಪ್ರಜ್ವಲ್ ಬರುವ ನಿರೀಕ್ಷೆಯಲ್ಲಿರುವ ಎಸ್‌ಐಟಿ ಬೆಂಗಳೂರಿಗೆ ಬಂದಾಗ ಯಾವ ರೀತಿಯಲ್ಲಿ ಬಂಧಿಸುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಮಂಗಳೂರು ರಸ್ತೇಲಿ ನಮಾಜ್ ಮಾಡಿದವರ ಖುಲಾಸೆ, ಪ್ರಶ್ನಿಸಿದ ಹಿಂದೂ ಕಾರ್ಯಕರ್ತನ ಮೇಲೆ ಎಫ್‌ಐಆರ್
ಟರ್ಮಿನಲ್ 2ರಲ್ಲಿ ಬ್ಯಾರಿಕೇಡ್: ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2 ಬಳಿ ಬ್ಯಾರಿಕೇಡ್ ಹಾಕಲಾಗಿದೆ. ಜೊತೆಗೆ, ಹೆಚ್ಚುವರಿ ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಗಿದೆ. ಏರ್ ಪೋರ್ಟ್ ವಿವಿಐಪಿ ಗೇಟ್ ಬಳಿಯೂ ಬ್ಯಾರಿಕೇಡ್ ತಂದು ಹಾಕಲಾಗಿದ್ದು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇನ್ನು ವಿಮಾನ ಇಳಿಯುತ್ತಿದ್ದಂತೆಯೇ ಅಲ್ಲಿಯೇ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಸಿದ್ಧರಾಗಿದ್ದಾರೆ. ಪ್ರಜ್ವಲ್ ರೇವಣ್ಣ ಬಂದ ನಂತರ ಏನೆಲ್ಲಾ ಪ್ರಹಸನ ನಡೆಯಲಿದೆ ಎಂಬುದು ಕೆಲವೇ ನಿಮಿಷಗಳಲ್ಲಿ ತಿಳಿಯಲಿದೆ.