ಬಾತ್ ರೂಂಗೆ ಹೋಗಬೇಕು ಅಂದರೂ ಬಿಡದೆ ಕೆಲಸದ ಮಹಿಳೆ ಮೇಲೆ ಪ್ರಜ್ವಲ್ ರೇಪ್‌..!

Published : Sep 10, 2024, 04:59 AM IST
ಬಾತ್ ರೂಂಗೆ ಹೋಗಬೇಕು ಅಂದರೂ ಬಿಡದೆ ಕೆಲಸದ ಮಹಿಳೆ ಮೇಲೆ ಪ್ರಜ್ವಲ್ ರೇಪ್‌..!

ಸಾರಾಂಶ

ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೋಮವಾರ 1,652 ಪುಟಗಳ ಆರೋಪಪಟ್ಟಿ ಸಲ್ಲಿಸಿದ ಎಸ್‌ಐಟಿ, ಪ್ರಜ್ವಲ್ ವಿರುದ್ಧ ಅತ್ಯಾಚಾರ ಕೃತ್ಯ ರುಜುವಾತಾಗಿದೆ ಎಂದು ಉಲ್ಲೇಖಿಸಿದೆ. ಇದು ಪ್ರಜ್ವಲ್ ವಿರುದ್ಧ ಸಲ್ಲಿಕೆಯಾದ ಎರಡನೇ ಅತ್ಯಾಚಾರ ಪ್ರಕರಣದ ಆರೋಪ ಪಟ್ಟಿಯಾಗಿದೆ.  

ಬೆಂಗಳೂರು(ಸೆ.10): ಕೆಲಸದಲ್ಲಿದ್ದ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಮಹಿಳೆ ಮೇಲೆ ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಬೇಡಣ್ಣ ಬಿಟ್ಬಿಡಿ ಎಂದು ಹಿರಿಯ ವಯಸ್ಸಿನ ಮಹಿಳೆ ಹೇಳಿದರೂ ಬಿಡದೆ ಪ್ರಜ್ವಲ್ ಅತ್ಯಾಚಾರ ಎಸಗಿ, ಅದನ್ನು ಚಿತ್ರೀಕರಿಸಿಕೊಂಡಿದ್ದಾರೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದೆ. 

ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೋಮವಾರ 1,652 ಪುಟಗಳ ಆರೋಪಪಟ್ಟಿ ಸಲ್ಲಿಸಿದ ಎಸ್‌ಐಟಿ, ಪ್ರಜ್ವಲ್ ವಿರುದ್ಧ ಅತ್ಯಾಚಾರ ಕೃತ್ಯ ರುಜುವಾತಾಗಿದೆ ಎಂದು ಉಲ್ಲೇಖಿಸಿದೆ. ಇದು ಪ್ರಜ್ವಲ್ ವಿರುದ್ಧ ಸಲ್ಲಿಕೆಯಾದ ಎರಡನೇ ಅತ್ಯಾಚಾರ ಪ್ರಕರಣದ ಆರೋಪ ಪಟ್ಟಿಯಾಗಿದೆ.

ಪ್ರಜ್ವಲ್‌- ಎಚ್‌.ಡಿ. ರೇವಣ್ಣ ವಿರುದ್ಧ ಜಾರ್ಜ್‌ಶೀಟ್‌: ಮನೆಗೆಲಸದ ಒಬ್ಬಳೇ ಮಹಿಳೆಗೆ ತಂದೆಯಿಂದ ಕಿರುಕುಳ, ಮಗನಿಂದ ರೇಪ್‌!

ಹಾಸನ ಪೆನ್ ಡ್ರೈವ್ ಹಗರಣ ಬೆಳಕಿಗೆ ಬಂದ ಕೂಡಲೇ ಈ ಸಂತ್ರಸ್ತೆಯನ್ನು ತಮ್ಮ ಸಹಚರರ ಮೂಲಕ ಮಾಜಿ ಸಂಸದರ ತಂದೆ ಮಾಜಿ ರೇವಣ್ಣ ತಾಯಿ ಭವಾನಿ ರೇವಣ್ಣ ಅಪಹರಿಸಿದರು ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ರೇವಣ್ಣ ತಂಡ ಬಂಧಿತರಾಗಿ ಜೈಲು ಸೇರಿದರೆ, ಜಾಮೀನು ಪಡೆದು ಬಂಧನದಿಂದ ಭವಾನಿ ಪಾರಾಗಿದರು. ಸಚಿವ ಅಂದು ಸಂತ್ರಸ್ತೆಯನ್ನು ರಕ್ಷಿಸಿ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಅತ್ಯಾಚಾರ ಸಂಗತಿ ಬಯಲಾಗಿತ್ತು. ಬಳಿಕ ಸಂತ್ರಸ್ತೆಯ ದೂರು ಆಧರಿಸಿ ಪ್ರಜ್ವಲ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಈಗ ತನಿಖೆಯಲ್ಲಿ ಅತ್ಯಾಚಾರ ನಡೆದಿರುವುದಕ್ಕೆ ವೈಜ್ಞಾನಿಕ ಹಾಗೂ ತಾಂತ್ರಿಕ ಪುರಾವೆಗಳು ಸಿಕ್ಕಿವೆ ಎಂದು ಎಸ್‌ಐಟಿ ಹೇಳಿದೆ.

ಅಣ್ಣ ಬಿಟ್ಟಿಡಿ ಅಂದ್ರೂ ಕೇಳದೆ ಅತ್ಯಾಚಾರ: ಹೊಳೆನರಸೀಪುರದ ಮನೆ ಹಾಗೂ ಅದೇ ತಾಲೂಕಿನ ವ್ಯಾಪ್ತಿಯ ತೋಟದ ಮನೆಯಲ್ಲಿ ಸಂತ್ರಸ್ತ ಕೆಲಸದಲ್ಲಿದ್ದರು. ಆಗ ತಮ್ಮ ಮನೆಯಲ್ಲಿ ಕೋಣೆಗೆ ಕರೆದು ಸಂತ್ರಸ್ತ ಹೊರೆ ಹೋಗದಂತೆ ಪ್ರಜ್ವಲ್ ಬಾಗಿಲು ಹಾಕಿದ್ದರು. ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತ 'ಬಟ್ಟಿ ತೆಗೆಯು, ಏನೂ ಆಗಲ್ಲ ತೆಗೆಯೇ' ಎಂದು ಹೇಳಿದ್ದರು. 'ದಮ್ಮಯ್ಯ ಕಣಣ್ಣ ಬಾಗಿಲು ತೆಗೆದುಬಿಡು' ಎಂದು ಗೋಳಾಡಿದರೂ ಬಿಡದೆ ಸಂತ್ರಸ್ತೆಯ ಬಟ್ಟೆಯನ್ನು ಪ್ರಜ್ವಲ್ ಬಿಚ್ಚಿಸಿದ್ದರು. ಆಗ ಬಾತ್ ರೂಂಗೆ ಹೋಗಬೇಕು ಅರ್ಜೆಂಟ್ ಎಂದರೂ ಬಿಡದೆ ಪ್ರಜ್ವಲ್ ಅತ್ಯಾಚಾರ ಎಸಗಿದ್ದರು ಎಂದು ಉಲ್ಲೇಖವಾಗಿದೆ. ಅತ್ಯಾಚಾರ ಕೃತ್ಯವನ್ನು ಚಿತ್ರೀಕರಿಸಿಕೊಂಡು ಸಂತ್ರಸ್ತೆಗೆ ಪ್ರಜ್ವಲ್ ಬ್ಲಾಕ್‌ಮೇಲ್ ಮಾಡುತ್ತಿದ್ದರು. ಆ ವಿಚಾರವನ್ನು ಯಾರಿಗಾದರೂ ಹೇಳಿದರೆ. ವಿಡಿಯೋವನ್ನು ನಿನ್ನ ಮಗನಿಗೆ ಕಳಿಸುತ್ತೇನೆ ಎಂದು ಬೆದರಿಸಿದರು. ಇದೇ ರೀತಿ ತೋಟದ ಮನೆಯಲ್ಲಿ ಸಹ ಸಂತ್ರಸ್ತೆ ಮೇಲೆ ಪ್ರಜ್ವಲ್ ಮತ್ತೊಮ್ಮೆ ಬಲಾತ್ಕಾರ ಮಾಡಿದ್ದರು. 

ಲಾಕ್‌ಡೌನ್‌ಗಿಂತ ಮೊದಲು ನಡೆದಿದ್ದು: 

2021ರ ಕೋವಿಡ್ ಲಾಕ್‌ಡೌನ್ ಪೂರ್ವ ಒಮ್ಮೆ ತೋಟದ ಮನೆಗೆ ಮಧ್ಯಾಹ್ನದ ಸಮಯದಲ್ಲಿ ಪ್ರಜ್ವಲ್ ಹೋಗಿದ್ದರು. ಆ ವೇಳೆ ತೋಟದ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದ ಸಂತ್ರಸ್ತೆ ಬಳಿ ಹೋಗಿ 'ಏನ್ ಕ್ಲೀನ್ ಆಯ್ತಾ ಅಂತಾ ಕೇಳಿ, ನಂಗೆ ಕುಡಿಯೋದಕ್ಕೆ ಒಂದು ಹೇಳಿದರು. ಅಂತೆಯೇ ನೀರು ತೆಗೆದುಕೊಂಡು ಪ್ರಜ್ವಲ್ ಇದ್ದ ರೂಮ್‌ನೊಳಗೆ ಸಂತ್ರಸ್ತ ತೆರಳಿದ್ದರು. ಆಗ ಕೋಣೆಯ ರೂಮಿನ ಚಿಲಕ ಸಂತ್ರಸ್ತ ಹೊರ ಹೋಗದಂತೆ ನಿರ್ಬಂಧಿಸಿದರು. ಆ ಸಮಯದಲ್ಲಿ 'ಬಾಗಿಲು ತೆಗಿಯಣ್ಣ ಭಯ ಆಯ್ತದೆ' ಅಂದರೂ ಸಹ ಆರೋಪಿ ಬಿಡದೆ ಅತ್ಯಾಚಾರ ಎಸಗಿದ್ದರು ಉಲ್ಲೇಖವಾಗಿದೆ. ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ. 

ಪ್ರಜ್ವಲ್ ರೇವಣ್ಣ ಕೇಸಿನ ಚಾರ್ಜ್‌ಶೀಟ್ ಸಲ್ಲಿಕೆ: ಹೊತ್ತಲ್ಲದ ಹೊತ್ತಲ್ಲಿ ಅತ್ಯಾಚಾರ, 123 ಸಾಕ್ಷಿ ಸಂಗ್ರಹ

1652 ಪುಟಗಳ ಆರೋಪ ಪಟ್ಟಿ ಸಲ್ಲಿಕೆ 

ಮನೆಕೆಲಸದ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಂತ್ರಸ್ತೆ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ ಸಂಬಂಧ 1652 ಪುಟಗಳ ಆರೋಪ ಪಟ್ಟಿಯನ್ನು ಎಸ್‌ಐಟಿ ಸಲ್ಲಿಸಿದೆ. ಇದರಲ್ಲಿ 113 ಮಂದಿ ಸಾಕ್ಷಿಗಳ ಹೇಳಿಕೆ, ವೈದ್ಯಕೀಯ ಹಾಗೂ ವೈಜ್ಞಾನಿಕ ದಾಖಲೆಗಳ ನಮೂದಿಸಲಾಗಿದೆ ಎಂದು ಎಸ್‌ಐಟಿ ತಿಳಿಸಿದೆ. ಆರೋಪಿಯು ಸಂತ್ರಸ್ತೆಯ ಮೇಲೆ ನಿಯಂತ್ರಣ ಹೊಂದಿರುವ ವ್ಯಕ್ತಿಯಾಗಿದ್ದು, ತನ್ನ ಮೇಲಿನ ಅತ್ಯಾಚಾರದ ಬಗ್ಗೆ ಹೇಳಿಕೊಂಡರೆ ತನ್ನ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದೆಂದು ಹೆದರಿಕೊಂಡು, ಮಾನ ಮರ್ಯಾದೆಗೆ ಅಂಜಿ ಆ ಸಮಯದಲ್ಲಿ ಈ ವಿಚಾರವನ್ನು ಸಂತ್ರಸ್ತ ಬಹಿರಂಗಪಡಿಸಿರಲಿಲ್ಲ. ಅಲ್ಲದೇ ಅತ್ಯಾಚಾರ 50-376(2)(ಎ), 376(2) 354(5), 354(5), 354(2), 50% 24 515 5 ಎಂದು ಎಸ್‌ಐಟಿ ಹೇಳಿದೆ.

ಮನೆ ಕೆಲಸದಾಕೆ ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಪ್ರಜ್ವಲ್ ವಿರುದ್ಧ ಮೊದಲ ಆರೋಪಪಟ್ಟಿ # ಪ್ರಜ್ವಲ್ ವಿರುದ್ಧ ದಾಖಲಾಗಿರುವ 2ನೇ ಅತ್ಯಾಚಾರ ಪ್ರಕರಣದಲ್ಲಿ ಎಸ್ ಐಟಿ ಆರೋಪಪಟ್ಟಿ ಸಲ್ಲಿಕೆ . ಹೊಳೆನರಸೀಪುರದ ಮನೆ, ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ದೌರ್ಜನ್ಯ ಕೇಸ್. • ಪೆನ್‌ಡ್ರೈವ್ ಹಗರಣ ಬೆಳಕಿಗೆ ಬಂದ ಬಳಿಕ ಇದೇ ಮಹಿಳೆಯನ್ನು ರೇವಣ್ಣ ಅಪಹರಿಸಿದ್ದ ಆರೋಪದಲ್ಲಿ ಎಚ್‌.ಡಿ. ರೇವಣ್ಣ ಬಂಧನವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ