ಪ್ರವಾಸಿಗರ ಸ್ವರ್ಗ ಚಾರ್ಮಾಡಿ ಘಾಟಿಯಲ್ಲಿ ಪುಂಡರ ಹಾವಳಿ: ಪೊಲೀಸರೇ ಏನ್ಮಾಡ್ತೀದ್ದೀರಿ

By Sathish Kumar KH  |  First Published Jul 10, 2023, 10:21 PM IST

ಸರಣಿ ಜಲಪಾತಗಳ ಸ್ವರ್ಗವೇ ಸೃಷ್ಠಿಯಾಗುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಪ್ರವಾಸಿಗರು ಕಿರುಕುಳ ಅನುಭವಿಸುತ್ತಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜು.10): ಮುಂಗಾರಿನಲ್ಲಿ ಸರಣಿ ಜಲಪಾತಗಳ ಸ್ವರ್ಗವೇ ಸೃಷ್ಠಿಯಾಗುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪುಂಡರ ಹಾವಳಿ ಪದೇ ಪದೇ ಮರುಕಳಿಸುತ್ತಿದೆ. ಇದರಿಂದ ಇತರೆ ಪ್ರವಾಸಿಗರು ಕಿರಿ ಕಿರಿ ಅನುಭವಿಸುವಂತಾಗಿದೆ.

Tap to resize

Latest Videos

undefined

ವಾರಾಂತ್ಯದ ದಿನಗಳಲ್ಲಿ  ಘಾಟಿ ರಸ್ತೆಯ ಮೂರ್‍ನಾಲ್ಕು ಕಡೆಗಳಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿಕೊಂಡು ಯುವಕರ ಗುಂಪು ಕೇಕೆ ಹಾಕುತ್ತ ಕುಣಿದು ಹುಚ್ಚಾಟ ಮೆರೆದಿದ್ದಾರೆ. ಈ ಪುಂಡಾಟ ಕಂಡು ಘಾಟಿಯ ರಮಣೀಯತೆಯನ್ನು ಸವಿಯಲು ಕುಟುಂಬ ಸಮೇತ ಬಂದಿದ್ದ ಕೆಲವರು ಗಾಬರಿಗೊಂಡಿದ್ದಾರೆ. ಚಿಕ್ಕಮಗಳೂರು ಹಾಗೂ ಮಂಗಳೂರು ಕಡೆಗೆ ಪಯಣಿಸುವ ಪ್ರವಾಸಿಗರು ಮತ್ತು ಸಾಮಾನ್ಯ ಜನರು ಇದರಿಂದ ಕಿರಿಕಿರಿ ಅನುಭವಿಸಿದ್ದಾರೆ. ಘಾಟಿ ರಸ್ತೆಯು ಒಂದು ಭಾಗದಲ್ಲಿ ಮೈ ಮನಕ್ಕೆ ಮುದ ನೀಡುವ ಹಾಲ್ನೊರೆಯಂತಹ ಜಲಪಾತಗಳನ್ನು ಸೃಷ್ಠಿಸಿದರೆ ಮತ್ತೊಂದು ಬದಿಯಲ್ಲಿ ಅಷ್ಟೇ ಅಪಾಯಕಾರಿಯಾದ, ಸಾವಿರಾರು ಅಡಿ ಆಳದ ಪ್ರಪಾತವೂ ಇದೆ. 

ಪ್ರವಾಸಿಗರ ಸ್ವರ್ಗವಾದ ಧುಮ್ಮಿಕ್ಕುವ ಸಿರಿಮನೆ ಫಾಲ್ಸ್‌: ಒನ್‌ಡೇ ಟ್ರಿಪ್‌ಗೆ ಬೆಸ್ಟ್‌ ಪ್ಲೇಸ್‌

ಜಲಪಾತದ ಸಿರಿ ಕಣ್ತುಂಬಿಕೊಳ್ಳುವ ನೆಪದಲ್ಲಿ ಬರುವ ಕೆಲವು ಪುಂಡ ಯುವಕರ ಗುಂಪು ಅಪಾಯವನ್ನೂ ಲೆಕ್ಕಿಸದೆ ಮೈಮರೆತು ಕುಣಿದು ಕುಪ್ಪಳಿಸುವ ಜೊತೆಗೆ ಜೋರಾಗಿ ಕೂಗುತ್ತಾ, ಕೇಕೆ ಹಾಕುತ್ತ ಸಭ್ಯತೆಯನ್ನು ಮೀರುತ್ತಿರುವುದರ ಬಗ್ಗೆ ಖಂಡನೆಯೂ ವ್ಯಕ್ತವಾಗುತ್ತಿದೆ. ಜಲಪಾತ ಪರಿಸರಗಳಲ್ಲಿ ವಾಹನ ನಿಲ್ಲಿಸಿ ರಸ್ತೆ ಮಧ್ಯೆ ನೃತ್ಯ ಮಾಡುವುದುಕೇಕೆ ಹಾಕುವುದನ್ನು ಮುಂದುವರಿಸಿದ ಹಲವು ಪ್ರವಾಸಿಗರು ಇತರ ವೀಕ್ಷಕರಿಗೆ ಮುಜುಗರದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ.  

ಪೊಲೀಸ್ ಬೀಟ್ ಇದ್ದರೂ ಪ್ರಯೋಜವಿಲ್ಲ : ಕಳೆದ ಕೆಲವು ದಿನಗಳ ಹಿಂದೆ ಇದೇ ರೀತಿ ಘಾಟಿ ರಸ್ತೆಯ ಅಲ್ಲಲ್ಲಿ ಯುವಕರು ಪುಂಡಾಟಿಕೆ ತೋರಿದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್ ಬೀಟ್ ಹಾಕಲಾಗಿದೆ. ಆದರೂ ಅವರ ಕಣ್ಣು ತಪ್ಪಿಸಿ, ಅವರು ಇರುವಲ್ಲಿಂದ ಮತ್ತೊಂದು ಕಡೆಯಲ್ಲಿ ದುರ್ವರ್ತನೆ ತೋರುತ್ತಿದ್ದಾರೆ.ಇವರಲ್ಲದೆ, ಹೊರ ಜಿಲ್ಲೆ, ರಾಜ್ಯಗಳಿಂದ ಬೈಕ್ಗಳಲ್ಲಿ ಪ್ರವಾಸ ಬರುವ ಕೆಲವು ಮಂದಿ ಸೈಲೆನ್ಸರ್ಗಳನ್ನು ಮಾರ್ಪಡಿಸಿ ಕರ್ಕಶ ಶಬ್ಧ ಮಾಡುವುದು, ಏಕಾ ಏಕಿ ಮತ್ತೊಂದು ವಾಹನದ ಪಕ್ಕದಲ್ಲಿ ಕಿವಿಗಡಚಿಕ್ಕುವ ರೀತಿ ಸೈಲೆನ್ಸರ್ನಿಂದ ಸದ್ದು ಮಾಡುವುದು ಇಲ್ಲಿ ಮಾಮೂಲಾಗಿದೆ.

ಈ ರೀತಿ ಅನಿರೀಕ್ಷಿತ ಶಬ್ಧದಿಂದ ಬಹಳಷ್ಟು ವಾಹನ ಚಾಲಕರು ಗಲಿಬಿಲಿಗೊಳ್ಳುತ್ತಿದ್ದಾರೆ.ಪೊಲೀಸ್ ಇಲಾಖೆ ಇಂತಹ ವರ್ತನೆ ತೋರುತ್ತಿರುವವರನ್ನು ಹಿಡಿದು ಕಾನೂನು ಕ್ರಮ ಜರುಗಿಸಬೇಕು. ಘಾಟಿಯಲ್ಲಿ ಇನ್ನಷ್ಟು ಗಸ್ತು ಬಲಪಡಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

ಪ್ರವಾಸಿಗರ ಸ್ವರ್ಗವಾದ ಸಿರಿಮನೆ ಫಾಲ್ಸ್‌:  ಚಿಕ್ಕಮಗಳೂರು (ಜು.09): ರಾಜ್ಯದಲ್ಲಿ ಅತಿಹೆಚ್ಚು ಜಲಪಾತಗಳನ್ನು ಹೊಂದಿರುವ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಿನಿ ಜೋಗವೆಂದೇ ಪ್ರಸಿದ್ಧಿಯಾದ ಸಿರಿಮನೆ ಫಾಲ್ಸ್‌ ಧುಮ್ಮಿಕ್ಕಿ ಹರಿಯುತ್ತಿದೆ. ಹಚ್ಚ ಹಸಿರು ಕಾನನದ ನಡುವೆ ಭೋರ್ಗರೆವ ಸದ್ದು ಎಂತಹ ಮನಸ್ಸನ್ನೂ ಮಂತ್ರಮುಗ್ದಗೊಳಿಸಿ ತನ್ನತ್ತ ಆಕರ್ಷಿಸುವುದು ಗ್ಯಾರಂಟಿಯಾಗಿದೆ. ಇನ್ನು ಒನ್‌ಡೇ ಟ್ರಿಪ್‌ಗೆ ಅತ್ಯಂತ ಸೂಕ್ತ ಪ್ರವಾಸಿ ತಾಣವೂ ಆಗಿದೆ. 

ಧುಮ್ಮಿಕ್ಕುತ್ತಿರುವ ಜೋಗದ ಸೊಬಗು: ರಾಜ, ರಾಣಿ, ರೋರರ್‌, ರಾಕೆಟ್‌, ಲೇಡಿ ನೋಡಲು ಪ್ರವಾ​ಸಿ​ಗ​ರ ದಂಡು

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಣ್ಣು ಕೋರೈಸೋ ಪ್ರವಾಸಿ ತಾಣಗಳಿಗೇನು ಕೊರತೆ ಇಲ್ಲ. ಜಾಡು ಹಿಡಿದು ಹೊರಟಲ್ಲೆಲ್ಲಾ ಒಂದೊಂದು ಸುಮಧುರ ತಾಣಗಳು. ಆ ಮನಮೋಹಕ ತಾಣಗಳಲ್ಲಿ ಜಲಪಾತಗಳದ್ದೇ ಸಿಂಹಪಾಲು ಆಗಿದೆ. ಮಲೆನಾಡಲ್ಲಿ ನೀವು ದಾರಿತಪ್ಪಿ ಹೋದ್ರು ಮನೋರಂಜನೆಗೆ ಒಂದು ಜಲಪಾತ ಸಿಗೋದು ಫಿಕ್ಸ್. ಅದ್ರಲ್ಲೂ ಮಳೆಗಾಲದಲ್ಲಿ ಸುರಿದ ಮಳೆಯಿಂದ ಕಣ್ಣು ಹಾಯಿಸಿದಲೆಲ್ಲಾ ಜಲಪಾತಗಳದ್ದೇ ಸೊಬಗು ಮತ್ತು ವೈಭವ ಆಗಿರುತ್ತದೆ. ಅವುಗಳು ನೋಡುಗನ ಮನಸ್ಸಿನ ಭಾವನೆಗೆ ಮತ್ತಷ್ಟು ಜೀವ ತುಂಬುತ್ತವೆ. ಅಂತಹ ತಾಣಗಳಲ್ಲಿ ಸಿರಿಮನೆ ಜಲಪಾತವೂ ಒಂದು. ಇದನ್ನ ಪ್ರವಾಸಿಗರು ಮಿನಿ ಜೋಗ ಎಂದೇ ಕರೆಯುತ್ತಾರೆ. 

click me!