Hampi G20 summit: ಲಂಬಾಣಿ ಕಸೂತಿಗೆ ಉದ್ದಿಮೆ ರೂಪ: ಪ್ರಹ್ಲಾದ್‌ ಜೋಶಿ

By Kannadaprabha News  |  First Published Jul 11, 2023, 7:38 AM IST

ಜಿ- 20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಉದ್ದೇಶದಂತೆ ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಕೈಗಾರಿಕೆಗಳ ಆರ್ಥಿಕತೆಯ ಪ್ರಚಾರ ಮಾಡುವ ನಿಟ್ಟಿನಲ್ಲಿ ಲಂಬಾಣಿ ಕಸೂತಿ ವಸ್ತು ಪ್ರದರ್ಶನವನ್ನು ಹಂಪಿಯಲ್ಲಿ ಏರ್ಪಡಿಸಲಾಗಿದೆ. ಲಂಬಾಣಿ ಕಸೂತಿಗೆ ಉದ್ದಿಮೆ ರೂಪ ನೀಡಿ ಅಂತಾರಾಷ್ಟ್ರೀಯ ಮಾರುಕಟ್ಟೆಒದಗಿಸಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಘೋಷಿಸಿದರು.


ಹೊಸಪೇಟೆ (ಜು.11) : ಜಿ- 20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಉದ್ದೇಶದಂತೆ ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಕೈಗಾರಿಕೆಗಳ ಆರ್ಥಿಕತೆಯ ಪ್ರಚಾರ ಮಾಡುವ ನಿಟ್ಟಿನಲ್ಲಿ ಲಂಬಾಣಿ ಕಸೂತಿ ವಸ್ತು ಪ್ರದರ್ಶನವನ್ನು ಹಂಪಿಯಲ್ಲಿ ಏರ್ಪಡಿಸಲಾಗಿದೆ. ಲಂಬಾಣಿ ಕಸೂತಿಗೆ ಉದ್ದಿಮೆ ರೂಪ ನೀಡಿ ಅಂತಾರಾಷ್ಟ್ರೀಯ ಮಾರುಕಟ್ಟೆಒದಗಿಸಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಘೋಷಿಸಿದರು.

ಲಂಬಾಣಿ ಕಸೂತಿ ಕಲೆ ಪ್ರದರ್ಶನ(Lambani Embroidery Art Exhibition)ದಲ್ಲಿ ಗಿನ್ನಿಸ್‌ ದಾಖಲೆ ಪ್ರಮಾಣಪತ್ರ ಸ್ವೀಕರಿಸಿ ಮಾತನಾಡಿದ ಅವರು, ಹಂಪಿ ವಿಜಯನಗರ ಸುವರ್ಣಯುಗ ಕಂಡ ಸಾಮ್ರಾಜ್ಯವಾಗಿ ಇತಿಹಾಸದಲ್ಲಿ ದಾಖಲಾಗಿದೆ. 15- 16ನೇ ಶತಮಾನದ ಬಹುದೊಡ್ಡ ಪುರಾತನ ಶಿಲ್ಪಕಲೆ, ವಾಸ್ತುಶಿಲ್ಪದಲ್ಲಿ ಜ್ಞಾನ ತಂತ್ರಜ್ಞಾನ ಇತ್ತು. ಸಾಮ್ರಾಜ್ಯ ಶ್ರೀಮಂತವಾಗಿರಲು ಆಳುವವರಲ್ಲಿ ಮತ್ತು ಪ್ರಜೆಗಳಲ್ಲಿ ಅಷ್ಟೇ ಪ್ರಾಮಾಣಿಕತೆ ಇತ್ತು. ದೇಶ- ವಿದೇಶಗಳ ಇತಿಹಾಸಕಾರರು ಸಹ ಇದರ ಕುರಿತು ಉಲ್ಲೇಖಿಸಿದ್ದಾರೆ. ಹಂಪಿಯ ಸ್ಮಾರಕಗಳು ಇಂದಿಗೂ ಆ ವೈಭವನ್ನು ಸಾರುತ್ತಿವೆ ಎಂದು ಕೇಂದ್ರ ಸಚಿವ ಪಹ್ಲಾದ್‌ ಜೋಶಿ ಸ್ಮರಿಸಿದರು.

Latest Videos

undefined

Hampi G20 summit: ಹಂಪಿ ಸಾಮ್ರಾಜ್ಯದ ಇತಿಹಾಸ ಮೆಲುಕು ಹಾಕಿದ ಜೋಶಿ

ಹಲವು ತುಣುಕುಗಳು ಸೇರಿ ಕಸೂತಿ ಕಲೆಯಲ್ಲಿ ಸುಂದರ ಕಲಾಕೃತಿಗಳು ಆಗುವಂತೆ, ಜಾಗತಿಕವಾಗಿ ಎಲ್ಲ ರಾಷ್ಟ್ರಗಳು ಒಂದಾಗಬೇಕು ಎಂಬ ತತ್ವವನ್ನು ಲಂಬಾಣಿ ಕಸೂತಿ ಕಲೆ ಜಗತ್ತಿಗೆ ಸಾರುತ್ತಿದೆ ಎಂದರು.

ಸಂಡೂರಿನ ಕುಶಲ ಕಲಾಕೇಂದ್ರದ ಶಾಂತಾಬಾಯಿ ಮಾತನಾಡಿ, ಕಳೆದ 29 ವರ್ಷಗಳಿಂದ ಈ ಕೇಂದ್ರದಲ್ಲಿ ಲಂಬಾಣಿ ಕಲಾ ಕಸೂತಿಯನ್ನು ಮಾಡುತ್ತಿರುವೆ. ರಾಷ್ಟ್ರೀಯ ಮನ್ನಣೆ ಪಡೆದ ನಮ್ಮ ಕಲಾಕೇಂದ್ರ ಗಿನ್ನಿಸ್‌ ದಾಖಲೆಗೆ ಸಾಕ್ಷಿಯಾಗುತ್ತಿರುವುದು ಸಂತಸ ತಂದಿದೆ ಎಂದರು.

ಕಾರ್ಯದರ್ಶಿ ಶೃತಿ ಮುನಿಯಪ್ಪ ಸಂಸ್ಥೆ ಬೆಳೆದ ಬಂದು ಹಾದಿಯನ್ನು ವಿವರಿಸಿದರು.

ಸಾಂಪ್ರದಾಯಿಕ ಸ್ವಾಗತ:

ವಸ್ತು ಪ್ರದರ್ಶನಕ್ಕಾಗಿ ಹಂಪಿಯ ಎದುರು ಬಸವಣ್ಣ ವೇದಿಕೆ ಬಳಿ ಆಯೋಜಿಸಿದ್ದ ಮಳಿಗೆಗೆ ಆಗಮಿಸಿದ ಸದಸ್ಯ ಹಾಗೂ ಅತಿಥಿ ರಾಷ್ಟ್ರಗಳ ಅತ್ಯುನ್ನತ ಪ್ರತಿನಿಧಿಗಳಿಗೆ ಲಂಬಾಣಿ ನೃತ್ಯದ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು.

ವಸ್ತು ಪ್ರದರ್ಶನ ಸ್ಥಳಕ್ಕೆ ಪ್ರತಿನಿಧಿಗಳು ಆಗಮಿಸುತ್ತಿದ್ದಂತೆ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಲಂಬಾಣಿ ಮಹಿಳೆಯರು ತಲೆ ಮೇಲೆ ಮಣ್ಣಿನ ಹೂಕುಂಡ ಹೊತ್ತು ತಮಟೆ ವಾದನಕ್ಕೆ ಹೆಜ್ಜೆ ಹಾಕುತ್ತಾ ಸ್ವಾಗತ ಕೋರಿದರು. ಅತ್ಯುನ್ನತ ಪ್ರತಿನಿಧಿಗಳಿಗೆ ಲಂಬಾಣಿ ಮಹಿಳೆಯರ ಸಾಂಪದ್ರಾಯಿಕ ತೊಡುಗೆ, ನೃತ್ಯ ಗಮನಸೆಳೆದವು.

ಈ ಸಂದರ್ಭದಲ್ಲಿ ಕಲಬುರಗಿ ಸಂಸದ ಉಮೇಶ್‌ ಜಾಧವ್‌, ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಿಲ್ಲಿ ಪಾಂಡೆ, ವಿವಿಧ ದೇಶಗಳಿಂದ ಆಗಮಿಸಿದ ಜಿ- 20 ಸದಸ್ಯ ಹಾಗೂ ಅತಿಥಿ ರಾಷ್ಟ್ರಗಳ ಪ್ರತಿನಿಧಿಗಳು, ಜಿಲ್ಲಾಧಿಕಾರಿ ಕೆ. ವೆಂಕಟೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌. ಸಂಡೂರು ಕುಶಲ ಕಲಾ ಕೇಂದ್ರದ ನಿರ್ದೇಶಕಿ ಸೂರ್ಯಪ್ರಭಾ ಘೋರ್ಪಡೆ ಇದ್ದರು. ಲಂಬಾಣಿ ಕಸೂತಿ ಕಲೆ ಪ್ರದರ್ಶನದಲ್ಲಿ ಜಿ- 20 ರಾಷ್ಟ್ರಗಳ ಪ್ರತಿನಿಧಿಗಳು, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಂಸದ ಉಮೇಶ್‌ ಜಾಧವ್‌ ಅವರು ಕಸೂತಿ ಕಲೆಯನ್ನು ಪ್ರದರ್ಶಿಸಿದರು.

ಗಿನ್ನಿಸ್ ಬುಕ್ ದಾಖಲೆಗೆ ಸೇರಿದ ಲಂಬಾಣಿ ಕಸೂತಿ ಕಲೆ: ಜಿ.20 ಸಭೆಯಲ್ಲಿ ಪ್ರಮಾಪತ್ರ ಸ್ವೀಕಾರ

Commendable effort, which will popularise Lambani culture, art and craft as well as encourage Nari Shakti participation in cultural initiatives. https://t.co/ladDbRMZ3u

— Narendra Modi (@narendramodi)

 

click me!