ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ನಟ ದರ್ಶನ್ ತೂಗದೀಪ ಜೈಲಿನಲ್ಲಿದ್ದು ಒಂದು ತಿಂಗಳು ಕಳೆದಿದೆ. ಮೊದಲೇ ಆತ ಸಿನಿಮಾ ಸ್ಟಾರ್. ಫಿಟ್‌ನೆಸ್, ವರ್ಕ್‌ಔಟ್ ಅವರಿಗೆ ಇಂಪಾರ್ಟೆಂಟ್. ಈಗ ದರ್ಶನ್ ಅವರ ಫಿಟ್‌ನೆಸ್ ಬಗ್ಗೆ ಜಿಮ್ ರವಿ ಮಾತನಾಡಿದ್ದಾರೆ.
ಬೆಂಗಳೂರು (ಜು.27): ನಟ ದರ್ಶನ್ ಜೈಲಿನಲ್ಲಿದ್ದು ಒಂದು ತಿಂಗಳ ಮೇಲಾಗಿದೆ. ಹೊರಗಡೆ ದರ್ಶನ್ ಅಭಿನಯದ ಸಿನಿಮಾದ ಎಲ್ಲಾ ಕೆಲಸಗಳು ಸಂಪೂರ್ಣವಾಗಿ ನಿಂತು ಹೋಗಿದೆ. ಡೆವಿಲ್ ಸಿನಿಮಾದ ನಿಮಾರ್ಪಕ ಮುಂದೇನು ಎಂದು ತಲೆ ಮೇಲೆ ಕೈಹೊತ್ತುಕೊಂಡು ಕುಂತಿದ್ದಾರೆ. ಸಿನಿಮಾ ಸ್ಟಾರ್ ಆಗಿರುವ ದರ್ಶನ್‌ಗೆ ಫಿಟ್‌ನೆಸ್ ಪ್ರಮುಖ. ಜೈಲಿನಲ್ಲಿರೋ ನಟ ದರ್ಶನ್ ಫಿಟ್ನೆಸ್ ಹೇಗಿರುತ್ತೆ ಅನ್ನೋದರ ಬಗ್ಗೆ ಜಿಮ್ ರವಿ ಮಾತನಾಡಿದ್ದಾರೆ. ವರ್ಕ್ ಔಟ್ ಇಲ್ಲದ ದರ್ಶನ್ ದರ್ಶನ್ ಜಿಮ್ ಬಾಡಿ ಏನಾಗಿರುತ್ತೆ.
ದರ್ಶನ್ ಜಿಮ್ ಬಾಡಿ ಬಗ್ಗೆ ಜಿಮ್ ರವಿ ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಫಿಟ್ನೆಸ್ ಬಗ್ಗೆ ಮಾತನಾಡಿದ ಜಿಮ್ ರವಿ, ದರ್ಶನ್ ವರ್ಕ್ ಔಟ್ ವಿಚಾರದಲ್ಲಿ ರಾಂಕ್ ಸ್ಟೂಡೆಂಟ್. ನನಗೆ ಗೊತ್ತಿರೋ ಹಾಗೆ ದರ್ಶನ್ ಸರ್ 30 ವರ್ಷ ಗಳಿಂದ ಜಿಮ್ ಮಾಡುತ್ತಿದ್ದಾರೆ. ದರ್ಶನ್ ಸರ್ ಅಜಾನು ಬಾಹು ಅವರು 6 ತಿಂಗಳು ವರ್ಕ್ ಔಟ್ ಮಾಡಿಲ್ಲ ಅಂದ್ರೂ ಏನೂ ಸಮಸ್ಯೆ ಇಲ್ಲ. ದರ್ಶನ್ ಸರ್ ವರ್ಕ್ ಔಟ್ ಗೆ ಅಡಿಕ್ಟ್ ಆಗಿದ್ದಾರೆ ಎಂದು ಹೇಳಿದ್ದಾರೆ.
ಅವರ ಬಾಡಿ ದರ್ಶನ್ ಅವರು ಆಕ್ಟೀವ್ ಆಗಿರೋ ತರ ಮಾಡುತ್ತದೆ. ಸದ್ಯ ದರ್ಶನ್ ಸರ್ ವರ್ಕ್ ಔಟ್ ಮಾಡ್ತಿಲ್ಲದ ಕಾರಣ ಸ್ವಲ್ಪ ಸಣ್ಣ ಅಗ್ತಾರೆ. ಅವರ ಮಸಲ್ ಸ್ವಲ್ಪ ಕಡಿಮೆ ಆಗಿರುತ್ತೆ. ಆದರೆ, ಅವರ ಬಾಡಿ ಶೇಪ್ ಹಾಗೇ ಇರುತ್ತದೆ. ದರ್ಶನ್ ಸರ್ ಹೊರಗೆ ಬಂದು ಮೂರು ತಿಂಗಳು ವರ್ಕ್ ಔಟ್ ಮಾಡಿದರೆ, ಸಾಕು ಮೊದಲಿನಂತೆ ಆಗುತ್ತಾರೆ. ದರ್ಶನ್ ಸರ್ ಗೆ ಜಿಮ್ ಬಗ್ಗೆ ಸಾಕಷ್ಟು ಜ್ಞಾನ ಇದೆ. ನಾವು ಸುಂಟರಗಾಳಿ ಸಮಯದಲ್ಲಿ ಒಟ್ಟಿಗೆ ಜಿಮ್ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ.
ಜೈಲಿನಲ್ಲಿ ನಟ ದರ್ಶನ್ ಮತ್ತು ನಟಿ ಪವಿತ್ರಾಗೌಡ ನಡುವೆ ಬ್ರೇಕಪ್ ಆಯ್ತಾ? ಹೆಂಡ್ತಿ ಮಾತಿಗೆ ಕಟ್ಟುಬಿದ್ದನಾ ಕಾಟೇರಾ?
ದರ್ಶನ್ ಸರ್ ನನ್ನ ಬಳಿ ಫಿಟ್ನೆಸ್ ಬಗ್ಗೆ ಸಾಕಷ್ಟು ವಿಚಾರ ಕೇಳಿ ತಿಳಿದುಕೊಂಡಿದ್ದಾರೆ. ಸಪ್ಲಿಮೆಂಟ್ ಇಲ್ಲದೆ ನ್ಯಾಚುರಲ್ ಆಗಿ ಬಾಡಿ ಹೇಗೆ ಮೆಂಟೈನ್ ಮಾಡಬೇಕು ಅನ್ನೋದ ಕೇಳಿ ತಿಳ್ಕೊಂಡಿದ್ದಾರೆ. ದರ್ಶನ್ ಸರ್ ಜೈಲಿನಲ್ಲಿದ್ದಾರೆ ಅವರ ದೇಹ ಏನಾಗಿರುತ್ತೆ ಎನ್ನೋ ಅತಂಕ ಬೇಡ. ದರ್ಶನ್ ಜೈಲಿನಿಂದ ಹೊರ ಬರಬೇಕಾದ್ರೆ ಇನ್ನೂ ಸ್ಮಾರ್ಟ್ ಆಗಿ ಬರ್ತಾರೆ ಎಂದು ಹೇಳಿದ್ದಾರೆ.
ಜೈಲಿಂದ ದರ್ಶನ್ ರಿಲೀಸ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೌಡೇಪೀರ ಲಾಲಸಾಬ!