ಜಿ.ಟಿ.ದೇವೇಗೌಡ ಟೀಂಗೆ ಭರ್ಜರಿ ಜಯಭೇರಿ

By Kannadaprabha NewsFirst Published Mar 29, 2021, 8:42 AM IST
Highlights

ಜಿ.ಟಿ ದೇವೇಗೌಡ ಟೀಂಗೆ ಭರ್ಜರಿ ಗೆಲುವು ಸಾಧಿಸಿದೆ. ಹಲವು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.  14 ಜನರ ತಂಡ ಗೆಲುವು ಸಾಧಿಸಿತು.

ಬೆಂಗಳೂರು (ಮಾ.29):  ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಾಲ್ಕು ವಿಭಾಗಗಳ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ನೇತೃತ್ವದ 14 ಜನರ ತಂಡ ಗೆಲುವು ಸಾಧಿಸಿತು.

ರಾಜ್ಯ ಸಹಕಾರ ಮಹಾಮಂಡಳದ ಮುಂದಿನ ಐದು ವರ್ಷದ ಅವಧಿಗೆ 29 ಜಿಲ್ಲಾ ಒಕ್ಕೂಟದಿಂದ ಒಟ್ಟು 14 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ಚುನಾವಣೆಯಲ್ಲಿ 26 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇದರಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರ ತಂಡ ಜಯಭೇರಿ ಬಾರಿಸಿದೆ.

'2018ರಂತೆ ಮತ್ತೆ 2023ಕ್ಕೆ ಎಚ್‌ಡಿಕೆ ಕಾಲು ಹಿಡಿಯುವ ಸ್ಥಿತಿ' : ಮತ್ತೆ ಸಿಎಂ ಪಟ್ಟ?

ಮಹಾಮಂಡಳ ‘ಮೈಸೂರು ವಿಭಾಗ’ದ ಮೂರು ಸ್ಥಾನಗಳಿಗೆ ನಿರ್ದೇಶಕರಾಗಿ ಜಿ.ಟಿ.ದೇವೇಗೌಡ, ಬಿ.ಸಿ. ಲೋಕಪ್ಪ ಗೌಡ ಮತ್ತು ಬಿ.ಜಯಕರ ಶೆಟ್ಟಿಆಯ್ಕೆಯಾದರು. ‘ಬೆಂಗಳೂರು ವಿಭಾಗ’ದ ನಿರ್ದೇಶಕರ ನಾಲ್ಕು ಸ್ಥಾನಗಳಿಗೆ ಎಚ್‌.ಎನ್‌.ಅಶೋಕ್‌, ಎ.ಸಿ. ನಾಗರಾಜ್‌, ರಾಮಿರೆಡ್ಡಿ ಹಾಗೂ ಬಿ.ಡಿ. ಭೂಕಾಂತ, ‘ಬೆಳಗಾವಿ ವಿಭಾಗ’ದ ಮೂರು ಸ್ಥಾನಗಳಿಗೆ ಜಗದೀಶ ಮಲ್ಲಿಕಾರ್ಜುನ ಕವಟಗಿಮಠ, ಈರಣ್ಣ ಪಟ್ಟಣಶೆಟ್ಟಿಮತ್ತು ಬಸವರಾಜ್‌ ನೀ.ಅರಬಗೊಂಡ ಹಾಗೂ ‘ಕಲಬುರಗಿ ವಿಭಾಗ’ಕ್ಕೆ ಶೇಖರ ಗೌಡ ಪಾಟೀಲ್‌, ಉಮಾಕಾಂತ ನಾಗಮಾರಪಳ್ಳಿ ಮತ್ತು ಜೆ. ಎಂ. ಶಿವಪ್ರಸಾದ್‌ ಆಯ್ಕೆಯಾದರು. ಇತರ ಸಹಕಾರ ಸಂಘಗಳ ಕ್ಷೇತ್ರದ ಒಂದು ಸ್ಥಾನಕ್ಕೆ ಗದಿಗೆಪ್ಪ ಗೌಡ ಪಾಟೀಲ್‌ ವಿಜೇತರಾದರು.

ಚುನಾಯಿತ ಜಿ.ಟಿ. ದೇವೇಗೌಡರ ತಂಡದವರನ್ನು ಮಹಾಮಂಡಳ ಅಧ್ಯಕ್ಷರು ಮತ್ತಿತರು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.

click me!