
ಮೈಸೂರು (ಜುಲೈ.10): ನಾನು ಜೆಡಿಎಸ್‌ನಲ್ಲಿ ಇರಬೇಕಾ, ಬೇಡವಾ? ಬಿಜೆಪಿಗೆ ಅಥವಾ ಕಾಂಗ್ರೆಸ್‌ಗೆ ಹೋಗಬೇಕಾ ಎಂದು ನನ್ನ ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಬುಧವಾರ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀನು ಬರದಿದ್ದರೆ ಸರ್ಕಾರ ಉಳಿಯಲ್ಲ ಬಾ ಅಂತ ಸಿದ್ದರಾಮಯ್ಯ ಆಗಲಿ, ಡಿ.ಕೆ.ಶಿವಕುಮಾರ್ ಆಗಲಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ನನ್ನ ಯಾರೂ ಕರೆದಿಲ್ಲ. ಹಾಗಂತ ನಾನು ಯಾವ ಪಕ್ಷಕ್ಕೂ ಹೋಗಲ್ಲ. ಕಾಂಗ್ರೆಸ್, ಬಿಜೆಪಿ ಯಾರೂ ಕರೆದಿಲ್ಲ ಎಂದು ಹೇಳಿದರು.
25 ವರ್ಷ ಸಿದ್ದರಾಮಯ್ಯ ಜೊತೆ ಇದ್ದು, ಸಿದ್ದರಾಮಯ್ಯ ವಿಪಕ್ಷ ನಾಯಕ, ಸಿಎಂ ಆದಾಗ ಯಾವ ರೀತಿ ಕೆಲಸ ಮಾಡಿಕೊಂಡು ಬಂದಿದೀನಿ ಅನ್ನೋದು ಬೇರೆ ಶಾಸಕರಿಗೆ ಗೊತ್ತಿಲ್ಲ. ನಾನು ದೊಡ್ಡ ನಾಯಕನ ವಿರುದ್ಧ ಹೋರಾಟ ಮಾಡಿಕೊಂಡು ಬಂದಿರುವ ಕ್ಷೇತ್ರ ಇದು ಎಂದರು.
ನಾನು ಜೆಡಿಎಸ್ ಶಾಸಕ. ಚುನಾವಣೆಯಲ್ಲಿ ಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷಾಂತರ ಮಾಡಿಲ್ಲ. ಈ ಹಿಂದೆ 20 ತಿಂಗಳು ಯಡಿಯೂರಪ್ಪಗೆ ಅಧಿಕಾರ ಕೊಡಲಿಲ್ಲ ಅಂತ ಬೆಂಬಲ ನೀಡಿದ್ದೆ. ಇನ್ನು ನಮ್ಮ ಅವಧಿ 3 ವರ್ಷ ಇದೆ. ನನಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಕೊಡಲಿಲ್ಲ ಅಂತ ಬೇಸರವಿದೆ. ಹಿರಿಯನಾಗಿದ್ದು ನನಗೆ ಅವಕಾಶ ಕೊಡಲಿಲ್ಲ. ಸುರೇಶ್ ಬಾಬುಗೆ ಕುಮಾರಸ್ವಾಮಿ ಅಧಿಕಾರ ಕೊಟ್ಟರು. ಸದ್ಯ ನಾನು ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ