ಜಿಎಸ್‌ಟಿ ಇಳಿಕೆ ಎಫೆಕ್ಟ್ : ನಂದಿನಿ ಉತ್ಪನ್ನಗಳ ಬೆಲೆಯಲ್ಲಿ ಭಾರಿ ಕಡಿತ

Kannadaprabha News   | Kannada Prabha
Published : Sep 21, 2025, 06:36 AM IST
Nandini

ಸಾರಾಂಶ

ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್ಟಿ ದರ ಇಳಿಸಿರುವ ಹಿನ್ನೆಲೆಯಲ್ಲಿ ದಸರಾ ಹಬ್ಬಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿರುವ ಕೆಎಂಎಫ್‌, ಮೊಸರು ಹೊರತುಪಡಿಸಿ ಹಾಲಿನ ಉತ್ಪನ್ನಗಳಾದ ಬೆಣ್ಣೆ, ತುಪ್ಪ, ಚೀಸ್‌ ಸೇರಿ ಇತರೆ ಉತ್ಪನ್ನಗಳ ಮಾರಾಟ ದರ ಪರಿಷ್ಕರಿಸಿದೆ.

ಬೆಂಗಳೂರು : ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್ಟಿ ದರ ಇಳಿಸಿರುವ ಹಿನ್ನೆಲೆಯಲ್ಲಿ ದಸರಾ ಹಬ್ಬಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿರುವ ಕೆಎಂಎಫ್‌, ಮೊಸರು ಹೊರತುಪಡಿಸಿ ಹಾಲಿನ ಉತ್ಪನ್ನಗಳಾದ ಬೆಣ್ಣೆ, ತುಪ್ಪ, ಚೀಸ್‌ ಸೇರಿ ಇತರೆ ಉತ್ಪನ್ನಗಳ ಮಾರಾಟ ದರ ಪರಿಷ್ಕರಿಸಿದೆ. ಹೊಸ ದರಗಳು ಸೆ.22ರಿಂದ ಜಾರಿಗೆ ಬರಲಿವೆ.

ಶನಿವಾರ ಹಾಲು ಉತ್ಪನ್ನಗಳ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿದ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರು, ನವರಾತ್ರಿಯಿಂದ ಜಾರಿಗೆ ಬರುವಂತೆ ಹಾಲಿನ ಉತ್ಪನ್ನಗಳ ದರ ಕಡಿಮೆ ಮಾಡಲು ಕೇಂದ್ರ ಸರ್ಕಾರ ಆದೇಶಿಸಿತ್ತು. ಅದರಂತೆ ಹಾಲಿನ ಇತರ ಉತ್ಪನ್ನಗಳ ದರವನ್ನು ಇಳಿಕೆ ಮಾಡಲಾಗಿದೆ. ಆದರೆ ಶೇ.5ರಷ್ಟು ಜಿಎಸ್‌ಟಿ ಇರುವ ಮೊಸರಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಈ ಹಿಂದಿನ ದರದಂತೆಯೇ ಮುಂದುವರೆಯಲಿದೆ ಎಂದು ತಿಳಿಸಿದರು.

ನಂದಿನಿ ತುಪ್ಪ, ಬೆಣ್ಣೆ, ಚೀಸ್‌, ಕುರುಕು ತಿಂಡಿಗಳ ಮೇಲಿನ ಜಿಎಸ್‌ಟಿ ಶೇ.12ರಿಂದ 5ಕ್ಕೆ ಇಳಿಸಲಾಗಿದೆ. ನಂದಿನಿ ಕುಕ್ಕಿಸ್‌, ಚಾಕೋಲೇಟ್ಸ್‌, ಐಸ್‌ಕ್ರೀಂ, ಇನ್ಸ್‌ಟಾಂಟ್‌ ಮಿಕ್ಸ್‌ ಮತ್ತು ಪ್ಯಾಕ್ಡ್‌ ನೀಡಿನ ಮೇಲಿನ ಜಿಎಸ್‌ಟಿ ಶೇ.18ರಿಂದ 5ಕ್ಕೆ ಮತ್ತು ನಂದಿನಿ ಪನ್ನೀರ್‌ ಮತ್ತು ಯುಎಚ್‌ಟಿ (ಗುಡ್‌ಲೈಫ್‌) ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಶೇ.5ರಿಂದ ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ. ಪರಿಷ್ಕೃತ ದರಗಳು ಸೋಮವಾರದಿಂದಲೇ ಜಾರಿಗೆ ಬರಲಿದ್ದು ಎಲ್ಲಾ ನಂದಿನಿ ಪಾರ್ಲರ್‌ಗಳು, ಮಳಿಗೆಗಳಲ್ಲಿ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರಕಟಿಸಲು ಏಜೆಂಟರಿಗೆ, ಮಾರಾಟಗಾರರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪರಿಷ್ಕೃತ ದರವನ್ನೇ ಕೊಡಿ:

ಈಗಾಗಲೇ ಮುದ್ರಿತವಾಗಿರುವ ಪ್ಯಾಕೆಟ್‌ಗಳಲ್ಲಿ ಮಾರಾಟ ಮಳಿಗೆಗಳಿಗೆ ಸರಬರಾಜಾಗಿರುವ ಹಾಲಿನ ಉತ್ಪನ್ನಗಳ ಮೇಲೆ ಹಳೆಯ ದರವೇ ಇರುತ್ತದೆ. ಆದರೆ, ಮಾರಾಟಗಾರರು ಪರಿಷ್ಕೃತ ದರವನ್ನೇ ಪಡೆಯಲು ಸೂಚಿಸಲಾಗಿದೆ. ಅಂತೆಯೇ ಗ್ರಾಹಕರು, ಆ ಮಳಿಗೆಗಳಲ್ಲಿ ಪ್ರಕಟಿಸಿರುವ ದರ ಪಟ್ಟಿಯಂತೆ ಪರಿಷ್ಕೃತ ದರ ಪಾವತಿಸಿ ಬೇಕಾದ ಉತ್ಪನ್ನ ಪಡೆಯಬಹುದು. ಹಾಗೆಯೇ ಮಾರಾಟಗಾರರು ಸಗಟು ಖರೀದಿ ಮಾಡುವಾಗ ಈಗಾಗಲೇ ಜಿಎಸ್‌ಟಿ ಕಟ್ಟಿದ್ದರೆ ಅದನ್ನು ವಾಪಸ್‌ ಪಡೆದುಕೊಳ್ಳಬಹುದು ಎಂದು ಶಿವಸ್ವಾಮಿ ಹೇಳಿದರು.

ಹಾಲು ಉತ್ಪನ್ನಗಳ ಪರಿಷ್ಕೃತ ದರ ಪಟ್ಟಿ

ಹಾಲಿನ ಉತ್ಪನ್ನಗಳುಪ್ಯಾಕ್‌ ಸೈಜ್‌ಹಳೆಯ ದರಪರಿಷ್ಕೃತ ದರ (ರು.ಗಳಲ್ಲಿ)

ತುಪ್ಪ (ಪೌಚ್‌)1000 ಮಿಲಿ650610

ಬೆಣ್ಣೆ-ಉಪ್ಪುರಹಿತ500 ಗ್ರಾಂ350286

ಪನೀರ್‌1000 ಗ್ರಾಂ425408

ಗುಡ್‌ಲೈಫ್‌ ಹಾಲು1000 ಮಿಲೀ.7068

ಚೀಸ್‌-ಮೊಝ್ಝಾರೆಲ್ಲಾ1 ಕೆಜಿ 480 - 450

ಚೀಸ್‌-ಸಂಸ್ಕರಿಸಿದ1 ಕೆಜಿ 530 - 497

ಐಸ್‌ ಕ್ರೀಂಗಳು-ವೆನಿಲ್ಲಾ ಟಬ್‌1000 ಮಿಲೀ 200 - 178

ಐಸ್‌ ಕ್ರೀಂ ಫ್ಯಾಮಿಲಿ ಪ್ಯಾಕ್‌ 5000 ಮಿಲಿ 645 - 574

ಐಸ್‌ಕ್ರಿಂ - ಚಾಕೊಲೇಟ್‌ ಸಂಡೇ 500 ಮಿಲೀ 115 - 102

ಐಸ್‌ಕ್ರೀಂ ಮ್ಯಾಂಗೋ ನ್ಯಾಚುರಲ್ಸ್‌100 ಮಿಲೀ 35 - 31

ಖಾರಾ ಉತ್ಪನ್ನಗಳು180 ಗ್ರಾಂ 60 - 56

ಮಫಿನ್‌ಗಳು 150 ಗ್ರಾಂ 50 - 45

ಕೇಕ್‌ಗಳು 200 ಗ್ರಾಂ110 - 98

ನಂದಿನಿ ನೀರು1000 ಮಿಲಿ 20 - 18

ಪಾಯಸ ಮಿಶ್ರಣ200 ಗ್ರಾಂ 90 - 80

ಜಾಮೂನ್‌ ಮಿಶ್ರಣ200 ಗ್ರಾಂ8071

ಬಾದಾಮ್‌ ಹಾಲಿನ ಪುಡಿ 200 ಗ್ರಾಂ120 - 107

ಕುಕೀಸ್‌ 100 ಗ್ರಾಂ 35 - 31

ಸ್ಲಾಶ್‌ವೇ ಡ್ರಿಂಕ್ಸ್‌ 200 ಮಿಲೀ 109.50

ಬೌನ್ಸ್‌200 ಮಿಲೀ1515

ರೈಸ್‌ ಕ್ರಿಪಿ ಮಿಲ್ಕ್‌ ಚಾಕೋ 80 ಗ್ರಾಂ 65 - 58

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ