
ಬೆಂಗಳೂರು(ಏ.25): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಿಳಾ ಮತದಾರರನ್ನು 'ಸೆಳೆಯಲು' ಗೃಹ ಲಕ್ಷ್ಮಿ ಯೋಜನೆಯ ಮೇ ತಿಂಗಳ 2 ಸಾವಿರ ರು. ಮುಂಗಡವಾಗಿ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಆದರೆ ಇದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ನಿರಾಕರಿಸಿದ್ದು, ಮಾರ್ಚ್ ತಿಂಗಳ ಬಾಕಿಯನ್ನು ಪಾವತಿಸಲಾಗಿದೆ ಎಂದು ಸ್ಪಷ್ಟಪಡಿಸಿವೆ.
ಲೋಕಸಭೆ ಚುನಾವಣೆ 2024: ಗೃಹಲಕ್ಷ್ಮಿ ಹಣ ಜಯಪ್ರಕಾಶ್ ಹೆಗಡೆಗೆ ದೇಣಿಗೆ ನೀಡಿದ ಮಹಿಳೆ..!
ಹಲವು ಫಲಾನುಭವಿಗಳಿಗೆ ಈ ತಿಂಗಳ ಆರಂಭದಲ್ಲಿ 2 ಸಾವಿರ ರು. ಪಾವತಿಯಾಗಿತ್ತು. ಏ.24 ರಂದು ಪುನಃ 2 ಸಾವಿರ ರು. ವರ್ಗಾವಣೆ ಆಗಿದ್ದರಿಂದ '10 ದಿವಸ ಮೊದಲೇ ಮೇ ತಿಂಗಳ ಹಣ ಪಾವತಿಯಾಗಿದೆ. ಚುನಾವಣೆಯಲ್ಲಿ ಮಹಿಳೆಯರ ಮತ ಪಡೆಯಲು ಹೀಗೆ ಮಾಡಲಾಗಿದೆ' ಎಂಬ ಸಂದೇಶಗಳು ಹರಿದಾಡಿದ್ದವು. ಆದರೆ ಇಲಾಖೆಯು ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ