ಗೃಹಲಕ್ಷ್ಮೀ ಎಫೆಕ್ಟ್; ಬ್ಯಾಂಕ್‌ ಮುಂದೆ ನೂರಾರು ಮಹಿಳೆಯರು ಕ್ಯೂ!

By Kannadaprabha News  |  First Published Sep 5, 2023, 10:31 AM IST

ದೇನು ಪ್ರತಿಭಟನೆ ಅಂದುಕೊಂಡ್ರಾ, ಖಂಡಿತವಾಗಿಯೂ ಅಲ್ಲ. ಗೃಹ ಲಕ್ಷ್ಮಿಯ ಎಫೆಕ್ಟ್‌. ಹೀಗಂತ ದಾರಿಯಲ್ಲಿ ಹೋಗುವರು ಮಾತನಾಡುತ್ತಾ ಮುಂದೆ ಸಾಗುತ್ತಿದ್ದರು. ಈ ಚಿತ್ರಣ ಕಂಡು ಬಂದಿದ್ದು, ನಗರದ ಕಮರ್ಷಿಯಲ್‌ ಸ್ಟ್ರೀಟ್‌ ಆಗಿರುವ ಎಂ.ಜಿ. ರಸ್ತೆಯ ಐಡಿಬಿಐ ಬ್ಯಾಂಕ್‌ ಎದುರು.


ಚಿಕ್ಕಮಗಳೂರು (ಸೆ.5) :  ದೇನು ಪ್ರತಿಭಟನೆ ಅಂದುಕೊಂಡ್ರಾ, ಖಂಡಿತವಾಗಿಯೂ ಅಲ್ಲ. ಗೃಹ ಲಕ್ಷ್ಮಿಯ ಎಫೆಕ್ಟ್‌. ಹೀಗಂತ ದಾರಿಯಲ್ಲಿ ಹೋಗುವರು ಮಾತನಾಡುತ್ತಾ ಮುಂದೆ ಸಾಗುತ್ತಿದ್ದರು. ಈ ಚಿತ್ರಣ ಕಂಡು ಬಂದಿದ್ದು, ನಗರದ ಕಮರ್ಷಿಯಲ್‌ ಸ್ಟ್ರೀಟ್‌ ಆಗಿರುವ ಎಂ.ಜಿ. ರಸ್ತೆಯ ಐಡಿಬಿಐ ಬ್ಯಾಂಕ್‌ ಎದುರು.

ಬ್ಯಾಂಕ್‌ ಮುಂದೆ ಬೆಳಿಗ್ಗೆಯಿಂದಲೇ ಸುಮಾರು 600ಕ್ಕೂ ಹೆಚ್ಚು ಮಹಿಳೆಯರು ಸಾಲು ಗಟ್ಟಿ ನಿಂತಿದ್ದರು. ಕಾರಣ, ಗೃಹ ಲಕ್ಷ್ಮಿ ಯೋಜನೆಯಡಿ ಬಂದಿರುವ 2 ಸಾವಿರ ರುಪಾಯಿಯನ್ನು ಪಾಸ್‌ಬುಕ್‌ಗೆ ಎಂಟ್ರಿ ಮಾಡಿಸಿಕೊಳ್ಳಲು.

Latest Videos

undefined

ಚಿಕ್ಕಮಗಳೂರು: ಆರ್‌ಟಿಒ ಅಟೆಂಡರ್ ಲೋಕಾಯುಕ್ತ ಬಲೆಗೆ

ಜಿಲ್ಲಾ ಕೇಂದ್ರದಲ್ಲಿ ಹಲವು ಬ್ಯಾಂಕ್‌ಗಳು ಇವೆ. ಇತರೆ ಬ್ಯಾಂಕ್‌ಗಳ ಮುಂದೆ ಜನರೇ ಇಲ್ಲ. ಆದರೆ, ಐಡಿಬಿಐ ಬ್ಯಾಂಕ್ ಮುಂದೆ ನೂರಾರು ಮಹಿಳೆಯರು ನಿಲ್ಲಲು ಮತ್ತೊಂದು ಕಾರಣ ಇದೆ, ಬೇರೆ ಬ್ಯಾಂಕ್‌ಗಳಿಗೆ ಹೋಲಿಕೆ ಮಾಡಿದರೆ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಬ್ಯಾಂಕ್‌ನಲ್ಲಿ ಅಕೌಂಟ್‌ ಮಾಡಿಸಿದ್ದಾರೆ.

ಬ್ಯಾಂಕಿನ ಹಿರಿಯ ಅಧಿಕಾರಿಗಳು ಹೇಳುವ ಪ್ರಕಾರ, ಈ ಒಂದೇ ಬ್ಯಾಂಕ್‌ನಲ್ಲಿ ಸುಮಾರು 10 ಸಾವಿರ ಮಹಿಳೆಯರು ಅಕೌಂಟ್‌ ಮಾಡಿಸಿದ್ದಾರೆ. ಇದರ ಜತೆಗೆ 4500 ಮಹಿಳಾ ಸ್ವಸಹಾಯ ಸಂಘಗಳು ಇದೇ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿವೆ. ಒಂದೇ ದಿನ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವಂತಾಯಿತು.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದರಿಂದ ನೂಕುನುಗ್ಗಲು ತಡೆಯಲು ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮಹಿಳೆ ಸರದಿ ಸಾಲಿನಲ್ಲಿ ನಿಂತು ಪಾಸ್‌ಬುಕ್‌ನಲ್ಲಿ ಎಂಟ್ರಿ ಮಾಡಿಸಿ ಮನೆಗಳಿಗೆ ತೆರಳಿದರು.

ಬೆಂಗಳೂರು: ಸರ್ಕಾರಿ ಅಧಿಕಾರಿಗಳ ಸುಲಿಗೆ, ನಕಲಿ ಲೋಕಾಯುಕ್ತ ಅರೆಸ್ಟ್

click me!