ನೌಕರ ಅರ್ಜಿ ಸಲ್ಲಿಸಬೇಕು ಎಂದೇನಿಲ್ಲ| ಸ್ವಯಂಪ್ರೇರಿತವಾಗಿ ಗ್ರಾಚ್ಯುಟಿ ನೀಡಬೇಕು| ಗ್ರಾಚ್ಯುಯಿಟಿ ವಿಳಂಬ ಮಾಡಿದ್ದ ಪ್ರಕರಣದಲ್ಲಿ ಬಡ್ಡಿ ಸೇರಿಸಿ ಗ್ರಾಚ್ಯುಟಿ ನೀಡುವಂತೆ ವಿಚಾರಣಾಧೀನ ನ್ಯಾಯಾಲಯ ನೀಡಿದ್ದ ಆದೇಶ| ಆದೇಶ ಪ್ರಶ್ನಿಸಿ ವರ್ಮ ಇಂಡಸ್ಟ್ರೀಸ್ ಪ್ರೈ. ಲಿ. ಹಾಗೂ ಐಬಿಸಿ ನಾಲೆಡ್ಜ್ ಪಾರ್ಕ್ ಪೈ. ಲಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ|
ಬೆಂಗಳೂರು(ಮಾ.28): ಯಾವುದೇ ನೌಕರ ಉದ್ಯೋಗ ತೊರೆದ 30 ದಿನಗಳಲ್ಲಿ ಗ್ರಾಚ್ಯುಟಿ ಮೊತ್ತವನ್ನು ಉದ್ಯೋಗದಾತ ಸಂಸ್ಥೆ ಸ್ವಯಂ ಪ್ರೇರಣೆಯಿಂದ ಪಾವತಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಗ್ರಾಚ್ಯುಯಿಟಿ ವಿಳಂಬ ಮಾಡಿದ್ದ ಪ್ರಕರಣದಲ್ಲಿ ಬಡ್ಡಿ ಸೇರಿಸಿ ಗ್ರಾಚ್ಯುಟಿ ನೀಡುವಂತೆ ವಿಚಾರಣಾಧೀನ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ವರ್ಮ ಇಂಡಸ್ಟ್ರೀಸ್ ಪ್ರೈ. ಲಿ. ಹಾಗೂ ಐಬಿಸಿ ನಾಲೆಡ್ಜ್ ಪಾರ್ಕ್ ಪೈ. ಲಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ. ಉದ್ಯೋಗ ಕೊನೆಗೊಂಡ ಬಳಿಕ ನೌಕರ ಅರ್ಜಿ ಸಲ್ಲಿಸಲು ವಿಳಂಬ ಮಾಡಿದ್ದಾರೆ. ಹೀಗಾಗಿ ಬಡ್ಡಿ ನೀಡುವ ಅಗತ್ಯವಿಲ್ಲ ಎಂಬ ಸಂಸ್ಥೆಗಳ ವಾದವನ್ನು ಅಲ್ಲಗೆಳೆದಿರುವ ಹೈಕೋರ್ಟ್, ಕಾಯ್ದೆ ನಿಯಮಾನುಸಾರ ಸಂಸ್ಥೆ ತಾನೇ ಮುಂದಾಗಿ ಉದ್ಯೋಗಿ ಕೆಲಸ ಕೊನೆಗೊಳಿಸಿದ 30 ದಿನಗಳಲ್ಲಿ ಗ್ರಾಚ್ಯುಟಿ ಪಾವತಿಸಬೇಕು. ಅದಕ್ಕಾಗಿ ಕೆಲಸ ಬಿಟ್ಟವ್ಯಕ್ತಿ ಅರ್ಜಿ ಸಲ್ಲಿಸಬೇಕು ಎಂದು ನಿರೀಕ್ಷಿಸುವ ಅಗತ್ಯವಿಲ್ಲ ಎಂದು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಇನ್ನು 1-3 ವರ್ಷ ಕೆಲಸ ಮಾಡಿದ ನೌಕರರಿಗೂ ಗ್ರಾಚ್ಯುಟಿ?
ಪ್ರಕರಣ:
ಬೆಂಗಳೂರಿನ ವರ್ಮ ಇಂಡಸ್ಟ್ರಿಯಲ್ ಪ್ರೈ. ಲಿ ಹಾಗೂ ಐಬಿಸಿ ನಾಲೆಡ್ಜ್ ಪಾರ್ಕ್ನಲ್ಲಿ ಸೇವೆ ಸಲ್ಲಿಸಿದ್ದ ಪಿ.ಎನ್ ಜಾನಕಿರಾಮನ್ ಶೆಟ್ಟಿ2002 ರಲ್ಲಿ ನಿವೃತ್ತಿ ಹೊಂದಿದ್ದರು. ಆದರೆ ಗ್ರಾಚ್ಯುಟಿಯನ್ನು 2015ರಲ್ಲಿ ಅರ್ಜಿ ಸಲ್ಲಿಸಿದ ನಂತರ ಪಾವತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಾನಕಿ ರಾಮನ್ ಗ್ರಾಚ್ಯುಟಿ ಕಾಯ್ದೆ ಅನ್ವಯ ಸ್ಥಾಪಿಸಿರುವ ನ್ಯಾಯಾಧಿಕರಣದಲ್ಲಿ ದಾವೆ ಹೂಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ಗ್ರಾಚ್ಯುಟಿ ವಿಳಂಬ ಮಾಡಿದ್ದಕ್ಕೆ ಬಡ್ಡಿ ಪಾವತಿಸಬೇಕು ಎಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಎರಡೂ ಸಂಸ್ಥೆಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು.