ಕೋವಿಡ್‌ ವರದಿಗೆ ಹೆದರಿ ಆಂಧ್ರ, ತೆಲಂಗಾಣ ಜನ ಬೆಂಗ್ಳೂರಿಗೆ ದೌಡು..!

By Kannadaprabha NewsFirst Published Mar 28, 2021, 11:18 AM IST
Highlights

ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಭಾರೀ ಪ್ರಮಾಣದಲ್ಲಿ ಏರಿಕೆ| ಏ.1ರಿಂದ ಅನ್ಯ ರಾಜ್ಯದವರಿಗೆ ಕೋವಿಡ್‌ ನೆಗೆಟಿವ್‌ ಕಡ್ಡಾಯ| ಇದರಿಂದ ತಪ್ಪಿಸಿಕೊಳ್ಳಲು ಅದಕ್ಕೂ ಮುನ್ನ ಬೆಂಗಳೂರು ಸೇರಲು ಯತ್ನ| 

ಅನಂತಪುರ(ಮಾ.28):  ಅನ್ಯ ರಾಜ್ಯಗಳಿಂದ ಬೆಂಗಳೂರಿಗೆ ಬರುವವರು ಏ.1ರಿಂದ ಕೊರೋನಾ ನೆಗೆಟಿವ್‌ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮ ಜಾರಿಗೆ ಬರುವ ಬೆನ್ನಲ್ಲೇ, ನೆರೆಯ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಇನ್ನಿತರ ರಾಜ್ಯಗಳಿಂದ ಭಾರೀ ಪ್ರಮಾಣದ ಜನ ಸಾಗರ ಸಿಲಿಕಾನ್‌ ಸಿಟಿ ಬೆಂಗಳೂರಿನತ್ತ ಆಗಮಿಸುತ್ತಿದೆ.

ಬೆಂಗಳೂರಿನಲ್ಲಿ ತಮ್ಮ ಮಕ್ಕಳು ಅಥವಾ ಕುಟುಂಬ ಸದಸ್ಯರನ್ನು ಹೊಂದಿರುವವರು ಮತ್ತು ನಾನಾ ಕಾರಣಗಳಿಗಾಗಿ ಆಂಧ್ರ ಮತ್ತು ತೆಲಂಗಾಣಕ್ಕೆ ತೆರಳಿದವರು ಭಾರೀ ಪ್ರಮಾಣದಲ್ಲಿ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಹೀಗಾಗಿ ಎಲ್ಲಾ ಬೆಂಗಳೂರಿಗೆ ತೆರಳುವ ಎಲ್ಲಾ ಬಸ್‌, ರೈಲುಗಳು ತುಂಬಿತುಳುಕುತ್ತಿವೆ.

ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ: ಜಾತ್ರೆ, ಧಾರ್ಮಿಕ ಉತ್ಸವ ರದ್ದು!

ಕರ್ನಾಟಕ ಮತ್ತು ಮುಖ್ಯವಾಗಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದರ ನಿಯಂತ್ರಣಕ್ಕಾಗಿ ಅನ್ಯ ರಾಜ್ಯಗಳಿಂದ ಬರುವವರಿಗೆ ಕೊರೋನಾ ನೆಗೆಟಿವ್‌ ವರದಿಯನ್ನು ಕಡ್ಡಾಯಗೊಳಿಸಲಾಗಿದೆ.
 

click me!