ಉಪಚುನಾವಣೆ ಹೊತ್ತಲ್ಲಿ ತುಮಕೂರು ಜಿಲ್ಲೆ ಹುಳಿಯಾರು ಪಟ್ಟಣದಲ್ಲಿ ಸರ್ಕಲ್ ಒಂದಕ್ಕೆ ಹೆಸರಿಡುವ ಸಂಬಂಧ ನಡೆದ ವಾಗ್ವಾದ ತಾರಕಕ್ಕೇರಿದೆ. ಸಚಿವ ಮಾಧುಸ್ವಾಮಿ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ವಿರುದ‍್ಧ ಮಾತನಾಡಿದ್ದಾರೆಂದು ಆರೋಪಿಸಿ ಕುರುಬ ಸಮುದಾಯ ರಾಜ್ಯಾದ್ಯಂತ ಪ್ರತಿಭಟನೆಗಿಳಿದಿದೆ. ಇದನ್ನು ತಡೆಯಲು ಸಿಎಂ ಯಡಿಯೂರಪ್ಪ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಏನದು..?
ಬೆಂಗಳೂರು/ತುಮಕೂರು [ನ.20]: ಕುರುಬ ಸಮುದಾಯದ ಈಶ್ವರಾನಂದಪುರಿ ಶ್ರೀಗಳಿಗೆ ಅಪಮಾನ ಮಾಡಿರೋ ಸಚಿವ ಮಾಧುಸ್ವಾಮಿ ವಿರುದ್ಧ ಸಮುದಾಯದ ಆಕ್ರೋಶ ಮತ್ತಷ್ಟು ಧಗಧಗಿಸುತ್ತಿದೆ.
ಸ್ವಾಮೀಜಿ ಕ್ಷಮೆಯಾಚನೆಗೆ ಒತ್ತಾಯಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆ ಕೂಡ ನಡೀತಿದೆ. ಉಪಚುನಾವಣೆ ಹೊಸ್ತಿಲ್ಲಲೇ ಈ ವಿವಾದ ಭುಗಿಲೆದ್ದಿರೋದು ಬಿಜೆಪಿ ಸರ್ಕಾರವನ್ನ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿಸಿದೆ.
ಬೈ ಎಲೆಕ್ಷನ್ ಹೊತ್ತಲ್ಲಿ ಕಿರಿಕ್: ಉಸ್ತುವಾರಿಯಿಂದ ಮಾಧುಸ್ವಾಮಿ ಔಟ್..!
ಬೈ ಎಲೆಕ್ಷನ್‌ನಲ್ಲಿ ಈ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಕುರುಬ ಸಮುದಾಯದ ಕ್ಷಮೆಯಾಚಿಸಿದರು. ಆದ್ರೆ, ಇತ್ತ ಮಾಧುಸ್ವಾಮಿ ಮಾತ್ರ ಮೊಂಡಾಟ ಪ್ರದರ್ಶಿಸುತ್ತಿದ್ದು, ವಿಷಾದಿಸುತ್ತೇನೆ ಅಷ್ಟೇ, ಯಾರ ಕ್ಷಮೆಯೂ ಕೇಳಲ್ಲ ಎಂದು ದರ್ಪ ಮರೆದಿದ್ದಾರೆ.
ಹುಳಿಯಾರ& ಹೊಸದುರ್ಗ ವೃತ್ತಕ್ಕೆ ಕನಕದಾಸರ ಹೆಸರು
ಯಡಿಯೂರಪ್ಪ ಅವರು ಕ್ಷಮೆಯಾಚಿಸಿದಲ್ಲದೇ ಘಟನೆ ಬಗ್ಗೆ ಮಾಧ್ಯಮ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಅದು ಈ ಕೆಳಗಿನಂತಿದೆ.
"ಹುಳಿಯಾರ ಮತ್ತು ಹೊಸದುರ್ಗ ವೃತ್ತಕ್ಕೆ ಕನಕ ವೃತ್ತ ಎಂದು ಹೆಸರಿಡಲು ಯಾರ ಅಭ್ಯಂತರವೂ ಇಲ್ಲ. ಮಾಧುಸ್ವಾಮಿಯವರ ಅಭ್ಯಂತರವೂ ಇಲ್ಲ. ಮಾಧುಸ್ವಾಮಿ ಮಾತಿನ ಬಗ್ಗೆ ಎದ್ದ ಗೊಂದಲದ ಬಗ್ಗೆ ನಾನು ಕ್ಷಮೆ ಕೇಳಿದ್ದೇನೆ. ಮಾಧುಸ್ವಾಮಿ ತನ್ನನ್ನು ಏಕವಚನದಲ್ಲಿ ಸಂಭೋದಿಸಿಲ್ಲ ಎಂದು ಈಶ್ವರಾನಂದಪುರಿ ಸ್ವಾಮಿಜಿ ಸಹ ಸ್ಪಷ್ಟಪಡಿಸಿದ್ದಾರೆ.
ಹಾಲುಮತಶ್ರೀಗೆ ಅಗೌರವ: ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ: ಮಾಧುಸ್ವಾಮಿ ಪಟ್ಟು!
ಕುರುಬ ಸಮುದಾಯದವರು ಮತ್ತು ಕನಕದಾಸರ ಭಕ್ತರಿಗೆ ನನ್ನ ಮನವಿ ಯಾರು ಉದ್ವೇಗಕ್ಕೆ ಒಳಗಾಗಬೇಡಿ. ಚುನಾವಣೆ ಮುಗಿದ ಬಳಿಕ ಸರ್ಕಾರವೇ ವೃತ್ತ ನಿರ್ಮಾಣ ಮಾಡಿ ಕನಕದಾಸರ ವೃತ್ತ ಎಂದು ನಾಮಕರಣ ಮಾಡುತ್ತೇನೆ.
ನಿಮಗೆ ನೆನಪಿರಲಿ ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಕನಕ ಜಯಂತಿ ಜಾರಿಗೆ ತಂದು ಕಾಗಿನೆಲೆ ಗುರುಪೀಠ ಅಭಿವೃದ್ಧಿಗೆ ಶ್ರಮಿಸಿದ್ದು ನಮ್ಮ ಬಿಜೆಪಿ ಸರ್ಕಾರ.
ನನ್ನ ಜೀವನದಲ್ಲಿ ಸಾದು ಸಂತರನ್ನು ಶರಣರನ್ನು ಗೌರವದಿಂದ ಕಂಡಿದ್ದೇನೆ ಹಾಗೂ ನಡೆದುಕೊಂಡಿದ್ದೇನೆ. ಕನಕ ವೃತ್ತದ ಬಗ್ಗೆ ಎದ್ದ ವಿವಾದಕ್ಕೆ ತೆರೆ ಎಳೆದು ಶಾಂತಿ ಕಾಪಾಡಬೇಕು ಎಂದು ಜನರಲ್ಲಿ ನನ್ನ ಕಳಕಳಿಯ ಮನವಿ. ಈ ವಿಚಾರದಲ್ಲಿ ಯಾವುದೇ ಪ್ರತಿಭಟನೆ, ಬಂದ್ ಮಾಡದಂತೆ ನನ್ನ ಮನವಿ".
ಬಿ.ಎಸ್.ಯಡಿಯೂರಪ್ಪ