ರೋಗಿಗೆ ಯಾವಾಗ ಆಕ್ಸಿಜನ್‌ ನೀಡಬೇಕು? ಮಾರ್ಗಸೂಚಿ

By Kannadaprabha NewsFirst Published Aug 22, 2020, 12:25 PM IST
Highlights

ರಾಜ್ಯದಲ್ಲಿ ಕೊರೋನಾ ಸೋಂಕಿತರ  ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ದಿನ ಕಳೆದಂತೆ ಆಕ್ಸಿಜನ್ಗೆ ತೀವ್ರ ಕೊರತೆ ಉಂಟಾಗುತ್ತಿದೆ. ಆದ್ದರಿಂದ ಆಕ್ಸಿಜನ್ ಯಾವಾಗ ಬಳಕೆ ಮಾಡಬೇಕು ಎನ್ನುವ ಬಗ್ಗೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.

 ಬೆಂಗಳೂರು(ಆ.22):  ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳು ಅನಗತ್ಯವಾಗಿ ಹಾಗೂ ಅತಿಯಾಗಿ ಆಕ್ಸಿಜನ್‌ ಬಳಕೆ ಮಾಡುತ್ತಿರುವುದೇ ಆಮ್ಲಜನಕ ಕೊರತೆ ಉಂಟಾಗಲು ಕಾರಣವಾಗಿದ್ದು, ಯಾವ ಸ್ಥಿತಿಯಲ್ಲಿರುವ ರೋಗಿಗಳಿಗೆ ಆಕ್ಸಿಜನ್‌ ಬಳಕೆ ಮಾಡಬೇಕೆಂದು ಸೂಚಿಸಿ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಕೋವಿಡ್‌-19 ರೋಗಿಗಳಲ್ಲಿ ರಕ್ತದಲ್ಲಿ ಆಮ್ಲಜನಕ ಶುದ್ಧತ್ವ ಮಟ್ಟಶೇ.94ರಿಂದ 96ರಷ್ಟು, ದೀರ್ಘಕಾಲದ ಶ್ವಾಸಕೋಶ ಸಮಸ್ಯೆ ಇರುವವರಿಗೆ ಶೇ.88ರಿಂದ 92ರಷ್ಟು, ವೆಂಟಿಲೇಶನ್‌ನಲ್ಲಿರುವವರಿಗೆ ಶೇ.90ರಿಂದ 92ರಷ್ಟಿರಬೇಕು. ಆಮ್ಲಜನಕ ಶುದ್ಧತ್ವ ಮಟ್ಟಈ ಪ್ರಮಾಣಕ್ಕಿಂತ ಕಡಿಮೆ ಇರುವವರ ಚಿಕಿತ್ಸೆಗೆ ಮಾತ್ರ ಆಕ್ಸಿಜನ್‌ ಬಳಕೆ ಮಾಡಬೇಕು ಎಂದು ಸೂಚಿಸಲಾಗಿದೆ.

Latest Videos

ಕೊಪ್ಪಳ: ವೆಂಟಿಲೇಟರ್‌ ಸಮಸ್ಯೆಯಿಂದಲೇ ಹಲವರ ಸಾವು!...

ಆಕ್ಸಿಜನ್‌ ಬೇಡಿಕೆ ತೀವ್ರಗೊಳ್ಳಲು ಸರ್ಕಾರದ ಕ್ಲಿನಿಕಲ್‌ ಕಮಿಟಿ ನಡೆಸಿದ ಪರಿಶೀಲನೆ ವೇಳೆ, ಅಗತ್ಯವಿಲ್ಲದವರಿಗೂ ಆಕ್ಸಿಜನ್‌ ಬಳಕೆ, ಹೆಚ್ಚುವರಿ, ದುರುದ್ದೇಶಪೂರಿತ ಬಳಕೆ ಹಾಗೂ ಆಮ್ಲಜನಕ ನಿರ್ವಹಣೆ ಇಲ್ಲದಿರುವುದೇ ಬೇಡಿಕೆ ಹೆಚ್ಚಾಗಲು ಕಾರಣ ಎಂಬುದು ಕಂಡುಬಂದಿದೆ. 

ಕುಷ್ಟಗಿ: ಪಲ್ಲಕ್ಕಿ ಉತ್ಸವ, ಬಂಧಿತ 50 ಜನರಲ್ಲಿ 6 ಮಂದಿಗೆ ಕೊರೋನಾ ಸೋಂಕು!.

ಅಲ್ಲದೆ ಇದರಿಂದ ಅನಗತ್ಯವಾಗಿ ಹಣ ಪೋಲಾಗುತ್ತಿದೆ ಎಂದು ಸಮಿತಿ ತಿಳಿಸಿದೆ. ಹಾಗಾಗಿ ಅಮೂಲ್ಯವಾದ ಆಕ್ಸಿಜನ್‌ ದುರ್ಬಳಕೆ ತಡೆದು ಅಗತ್ಯವಿರುವ ರೋಗಿಗಳಿಗೆ ಮಾತ್ರ ಆಮ್ಲಜನಕ ಬಳಕೆ ಮಾಡಲು ಸಮಿತಿಯು ನಾಲ್ಕು ಪುಟಗಳ ಮಾರ್ಗಸೂಚಿ ಸಿದ್ಧಪಡಿಸಿದ್ದು. ಅವುಗಳನ್ನು ಆಸ್ಪತ್ರೆಗಳು ಕಡ್ಡಾಯವಾಗಿ ಅನುಸರಿಸಬೇಕು ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಶುಕ್ರವಾರ ಸುತ್ತೋಲೆ ಹೊರಡಿಸಿದ್ದಾರೆ.

click me!