ಸರ್ಕಾರಿ ನೌಕರರ ಮಕ್ಕಳಿಗೆ ಸರ್ಕಾರಿ ಶಾಲೆ ಕಡ್ಡಾಯ ಮಸೂದೆ?

By Kannadaprabha NewsFirst Published Mar 20, 2020, 10:11 AM IST
Highlights

ಸರ್ಕಾರಿ ನೌಕರಿಯಲ್ಲಿರುವವ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಬೇಕು ಎನ್ನುವ ಮಸೂದೆ ಜಾರಿ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ. 

ವಿಧಾನ ಪರಿಷತ್‌ [ಮಾ.20]:  ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುವುದನ್ನು ಕಡ್ಡಾಯಗೊಳಿಸುವ ಸಂಬಂಧ ಸಲ್ಲಿಸಿರುವ ಖಾಸಗಿ ಮಸೂದೆಯನ್ನು ಶುಕ್ರವಾರ ಮಂಡಿಸದಿದ್ದರೆ ಸಭಾಪತಿಗಳ ಮುಂದೆ ಪ್ರತಿಭಟನೆ ಮಾಡುವುದಾಗಿ ಕಾಂಗ್ರೆಸ್‌ ಸದಸ್ಯ ರಘು ಆಚಾರ್‌ ಹೇಳಿದ ಪ್ರಸಂಗ ನಡೆಯಿತು.

ಸಂವಿಧಾನದ ಮೇಲೆ ಮಾತನಾಡುವ ಸಂದರ್ಭದಲ್ಲಿ ಸಂವಿಧಾನ 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು, ಆರೋಗ್ಯ ರಕ್ಷಣೆ ನೀಡಬೇಕೆಂದು ಹೇಳುತ್ತದೆ, ಆದರೆ ಅದನ್ನು ನಾವು ಒದಗಿಸಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದರು.

ಮಕ್ಕಳ ಶಿಕ್ಷಣ ಕುರಿತು ಬಸವರಾಜ ಹೊರಟ್ಟಿಅವರ ಜೊತೆ ತಾವು ಕೈ ಜೋಡಿಸಿ ಸಿದ್ಧಪಡಿಸಿರುವ ಈ ಮಸೂದೆಯನ್ನು ಈವರೆಗೆ ಮಂಡಿಸಿಲ್ಲ, ಹಾಗಾಗಿ ಶುಕ್ರವಾರ ಸದನದಲ್ಲಿ ಮಂಡಿಸಲೇಬೇಕು ಎಂದು ಆಗ್ರಹಿಸಿದರು.

Video: ಇಲ್ ನೋಡ್ರಿ, ನಮ್ಮ ಸರ್ಕಾರಿ ಶಾಲೆ ಮಕ್ಳು ಕೊರೋನಾ ಬಗ್ಗೆ ಎಷ್ಟ್ ಚೆಂದ ಜಾಗೃತಿ ಮೂಡಿಸ್ಯಾರ..!..

ಇದಕ್ಕೂ ಮುನ್ನ ಮಾತನಾಡಿದ ರಘು ಆಚಾರ್‌, ಎಲ್ಲ ಸದಸ್ಯರು ಸಂವಿಧಾನದ ಬಗ್ಗೆ ಸಾಕಷ್ಟುಮಾತನಾಡಿದ್ದಾರೆ. ಹಾಗಾಗಿ ತಾವು ಹೆಚ್ಚಿಗೆ ಮಾತನಾಡುವುದಿಲ್ಲ. ಈವರೆಗೆ ಸಂವಿಧಾನದಲ್ಲಿ ಆಗಿರುವ ತಿದ್ದುಪಡಿ ಪ್ರಕಾರ ನಾವೆಲ್ಲ ಎಷ್ಟುಜನ ನಡೆದುಕೊಂಡಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಮೊದಲು ಮೇಲ್ಮನೆಯಲ್ಲಿ ನಡೆಯುತ್ತಿರುವ ಚರ್ಚೆಗಳು ಸಾಕಷ್ಟುಉತ್ತಮವಾಗಿರುತ್ತಿತ್ತು. ಆದರೆ ಈಗ ಆ ಕಡೆ ಇಬ್ಬರು, ಈ ಕಡೆ ಇಬ್ಬರು ಎದ್ದು ನಿಂತು ಮಾತನಾಡುತ್ತಾರೆ. ಹೀಗಾಗಿ ಸದನಕ್ಕೆ ಬರುವ ಆಸಕ್ತಿಯೇ ಕಡಿಮೆಯಾಗಿದೆ. ಸಂವಿಧಾನದ ಬಗ್ಗೆ ಇಷ್ಟೆಲ್ಲ ಮಾತನಾಡುವ ನಾವು ಎಷ್ಟುಜನ ವಾಹನಗಳ ಬೆಲ್ಟ್‌ ಹಾಕಿಕೊಂಡು ಬಂದಿದ್ದೇವೆ ಎಂದರು.

click me!