
ವಿಜಯನಗರ(ಸೆ.14): ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ರೋಚಕ ಸುದ್ದಿಯೊಂದು ಬಂದಿದೆ. ಹೌದು, ಕೋಟಿ ಕೋಟಿ ವಂಚನೆಯ ಮಾತುಕತೆ ಮಠದಲ್ಲಿಯೇ ನಡೆದಿತ್ತೇ ಎಂಬ ಚರ್ಚೆ ಶುರುವಾಗಿದೆ.
ಹಿರೇಹಡಗಲಿಯ ಹಾಲಮಠಕ್ಕೆ ಉದ್ಯಮಿ ಗೋವಿಂದ ಬಾಬು, ಚೈತ್ರಾ ಕುಂದಾಪುರ ಭೇಟಿ ನೀಡಿದ್ದರು. ಚುನಾವಣೆಗೂ ಮುನ್ನ ಉದ್ಯಮಿ ಗೋವಿಂದಬಾಬು, ಚೈತ್ರಾ ಕುಂದಾಪುರ ಅವರು ಮಠಕ್ಕೆ ಭೇಟಿ ನೀಡಿದ ಫೋಟೋಗಳು ಇದೀಗ ಬಯಲಿಗೆ ಬಂದಿವೆ.
ಚೈತ್ರಾ ಕುಂದಾಪುರ ಬಂಧನ ಬೆನ್ನಲ್ಲೇ ಅಜ್ಞಾತ ಸ್ಥಳಕ್ಕೆ ಹಾಲಶ್ರೀ
ಕೋಟಿ ಕೋಟಿ ವಂಚನೆ ಪ್ರಕರಣದಲ್ಲಿ ಅಭಿನವ ಹಾಲಶ್ರೀ ಸ್ವಾಮೀಜಿ A3 ಆರೋಪಿಯಾಗಿದ್ದಾರೆ. A1 ಆರೋಪಿ ಚೈತ್ರಾ ಕುಂದಾಪುರ ಜೊತೆಗೆ ದೂರುದಾರ ಗೋವಿಂದ ಬಾಬು ಮಠಕ್ಕೆ ಭೇಟಿ ನೀಡಿದ್ದರು. ಬಿಜೆಪಿ ಟಿಕೆಟ್ ಕೊಡಿಸಲು ಅಭಿನವ ಹಾಲಶ್ರೀ ಶಿಫಾರಸ್ಸು ಮುಖ್ಯ ಅಂತ ಚೈತ್ರಾ ಕುಂದಾಪುರ ಹೇಳಿದ್ದರು. ಅಭಿನವ ಹಾಲಶ್ರೀಗೆ ಉದ್ಯಮಿ ಗೋವಿಂದ ಬಾಬು ಹಣ ನೀಡಿದ್ದರು.
ಬಿಜೆಪಿ ಟಿಕೆಟ್‌ಗಾಗಿ ಹಿರೇಹಡಗಲಿ ಹಾಲಮಠಕ್ಕೆ ಚೈತ್ರಾ ಕುಂದಪುರ ಜೊತೆಗೆ ಉದ್ಯಮಿ ಗೋವಿಂದ ಬಾಬು ಬಂದಿದ್ದರು. ಮಠದಲ್ಲಿ ಗೋವಿಂದ ಬಾಬು ಹಾಗೂ ಚೈತ್ರಾ ಕುಂದಾಪುರ ಅವರಿಗೆ ಅಭಿನವ ಹಾಲಶ್ರೀ ಅವರು ಆಶೀರ್ವಾದ ಮಾಡಿದ್ದರು. ಹೀಗಾಗಿ ಮಠದಲ್ಲಿಯೇ ಮಾತುಕತೆ ಕೋಟಿ ಕೋಟಿ ಮಾತುಕತೆ ನಡೆದಿತ್ತು ಎನ್ನುವ ಅನುಮಾನ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ