ಮಾಲ್ಡೀವ್ಸ್ ಅಧ್ಯಕ್ಷರು ರಾಜಭವನಕ್ಕೆ ಆಗಮಿಸುವುದಕ್ಕೆ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಭವನಕ್ಕೆ ತಲುಪಿದ್ದು, ರಾಜ್ಯಪಾಲರನ್ನು ಭೇಟಿಯಾಗಿದ್ದರು. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ನಂತರದಿಂದ ಈವರೆಗೆ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು ಮುಖಾಮುಖಿಯಾಗಿರಲಿಲ್ಲ.
ಬೆಂಗಳೂರು(ಅ.10): ಮುಡಾ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ನಂತರ ಇದೇ ಮೊದಲ ಬಾರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋಥ್ ಮತ್ತು ಸಿದ್ದರಾಮಯ್ಯ ಅವರು ಬುಧವಾರ ಮುಖಾಮುಖಿಯಾದರು. ಬೆಂಗಳೂರಿಗೆ ಭೇಟಿ ನೀಡಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರನ್ನು ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಒಟ್ಟಾಗಿ ರಾಜಭವನಕ್ಕೆ ಸ್ವಾಗತಿಸಿದರು.
ಮಾಲ್ಡೀವ್ಸ್ ಅಧ್ಯಕ್ಷರು ರಾಜಭವನಕ್ಕೆ ಆಗಮಿಸುವುದಕ್ಕೆ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಭವನಕ್ಕೆ ತಲುಪಿದ್ದು, ರಾಜ್ಯಪಾಲರನ್ನು ಭೇಟಿಯಾಗಿದ್ದರು. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ನಂತರದಿಂದ ಈವರೆಗೆ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು ಮುಖಾಮುಖಿಯಾಗಿರಲಿಲ್ಲ. ಇದೀಗ ಮಾಲ್ಡೀವ್ಸ್ ಅಧ್ಯಕ್ಷರ ಸ್ವಾಗತ ಸ್ವಾಗತ ಹಿನ್ನೆಲೆಯಲ್ಲಿ ಇಬ್ಬರೂ ಭೇಟಿಯಾಗಿದ್ದು, ಯಾವೆಲ್ಲ ವಿಚಾರಗಳನ್ನು ಚರ್ಚಿಸಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ರಾಜಕೀಯ ತೀರ್ಪು ಎಂದಿದ್ದ ಜಮೀರ್‌ಗೆ ಸಂಕಷ್ಟ: ನ್ಯಾಯಾಂಗ ನಿಂದನೆ ಕೇಸ್‌ಗೆ ಅಬ್ರಹಾಂ ಪತ್ರ
ಮಾಲ್ಡೀವ್ಸ್ ಅಧ್ಯಕ್ಷ ಮುಯಿಜ್ಜು ಬೆಂಗಳೂರು ಭೇಟಿ
ಬೆಂಗಳೂರು: ರಾಜತಾಂತ್ರಿಕ ವಿಚಾರವಾಗಿ ಭಾರತ ಪ್ರವಾಸ ಕೈಗೊಂಡಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಬುಧವಾರ ಬೆಂಗಳೂರಿಗೆ ಭೇಟಿ ನೀಡಿದರು. ತಮ್ಮ ಪತ್ನಿ ಸಾಜಿದಾ ಮೊಹಮ್ಮದ್ ಹಾಗೂ ಮಾಲ್ಮೀಮ್ನನ ಉನ್ನತ ನಿಯೋಗ ದೊಂದಿಗೆ ಭೇಟಿ ನೀಡಿದ್ದು, ಅವರಿಗೆ ರಾಜಭವನದಲ್ಲಿ ಆತಿಥ್ಯ ನೀಡಲಾಗಿದೆ.
ಮತ್ತೊಂದು ಹಂತಕ್ಕೆ ತಲುಪಿದ ರಾಜ್ಯಪಾಲ- ಸರ್ಕಾರದ ಗುದ್ದಾಟ..!
ರಾಜ್ಯಪಾಲ ಥಾವರಚಂದ್ ಗೆಹಲೋಥ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಬೆಳಗ್ಗೆ ಮೊಹಮ್ಮದ್ ಮುಯಿಜ್ಜುರನ್ನು ರಾಜಭವನಕ್ಕೆ ಸ್ವಾಗತಿಸಿ ಹಲವು ವಿಚಾರಗಳ ಕುರಿತು ಚರ್ಚಿಸಿದರು. ಮಾಲ್ಡೀವ್ಸ್ ಅಧ್ಯಕ್ಷರ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಕೃತಕ ಬುದ್ದಿಮತ್ತೆ, ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ವ್ಯಾಪಾರ ಸೇರಿ ಹಲವು ವಿಷಯಗಳ ಕುರಿತು ರಾಜ್ಯದೊಂದಿಗೆ ಪಾಲುದಾರಿಗೆ ಹೊಂದಲು ಮಾಲೀಮ್ಸ್ ಉತ್ಸುಕತೆ ಹೊಂದಿದೆ. ಅದಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಪ್ರವಾಸದಲ್ಲಿರುವ ಮೊಹಮ್ಮದ್ ಮುಯಿಜ್ಜು ಅವರು, ಮಾಲ್ಡೀವ್ಸ್‌ನ ರಾಯಭಾರಿ ಕಚೇರಿ ಆಯೋಜಿಸಿರುವ ಬೆಂಗಳೂರಿನಲ್ಲಿ ವಾಸವಿರುವ ಮಾಲ್ಡೀವ್ಸ್ ಮೂಲದವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಬೆಂಗಳೂರು ಹಾಗೂ ಇನ್ನಿತರ ವಿಚಾರಗಳ ಕುರಿತುಮಾಲೀವ್ ಪ್ರಜೆಗಳೊಂ ದಿಗೆ ಚರ್ಚಿಸಲಿದ್ದಾರೆ. ಅದರೊಂದಿಗೆ ರಾಜ್ಯ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳೊಂದಿಗೂ ಚರ್ಚಿಸಲಿದ್ದು, ಈ ವೇಳೆ ಐಟಿ-ಬಿಟಿ, ಎಐ, ಚರ್ಚಿಸಲಿದ್ದು, ಸ್ಟಾರ್ಟ್ ಅಪ್ ಬೆಳವಣಿಗೆಗಳ ಕುರಿತು ಮಾಹಿತಿ ಪಡೆಯಲಿದ್ದಾರೆ.