ನೌಕರರು ಕ್ವಾರಂಟೈನ್‌ನಲ್ಲಿದ್ದರೆ ರಜೆ ಪರಿಗಣಿಸಲು ಸರ್ಕಾರದ ಆದೇಶ

By Kannadaprabha NewsFirst Published Nov 7, 2020, 9:33 AM IST
Highlights

ಸರ್ಕಾರಿ, ಖಾಸಗಿ ಸಂಸ್ಥೆಗಳು ಈ ಅವಧಿಯನ್ನು ಗೈರು ಎಂದು ಪರಿಗಣಿಸುವಂತಿಲ್ಲ| ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಆದೇಶಿಸಿದ ರಾಜ್ಯ ಸರ್ಕಾರ| 

ಬೆಂಗಳೂರು(ನ.07): ಕೋವಿಡ್‌-19 ಸಾಂಕ್ರಾಮಿಕ ರೋಗದಿಂದ ಬಾಧಿತರಾದ ನೌಕರರು ಅಥವಾ ಕಾರ್ಮಿಕರು ಕ್ವಾರಂಟೈನ್‌ನಲ್ಲಿ ಇರುವ ಅವಧಿಯನ್ನು ಗೈರು ಹಾಜರಿ ಎನ್ನದೆ ರಜೆಯೆಂದು ಪರಿಗಣಿಸುವಂತೆ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಸರ್ಕಾರ ಆದೇಶಿಸಿದೆ.

ಕೊರೋನಾ ವೈರಸ್‌ನಿಂದ ಬಾಧಿತರಾಗುವ ವ್ಯಕ್ತಿಗಳು ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಯಾವುದೇ ಸಂಸ್ಥೆಯ ಕಾರ್ಮಿಕರು ಅವರ ಹಕ್ಕಿನಲ್ಲಿರುವ ರಜೆಗಳನ್ನು ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಇಎಸ್‌ಐ ವ್ಯಾಪ್ತಿಗೆ ಒಳಪಡದ ಕೊರೋನಾ ರೋಗದಿಂದ ಬಾಧಿತರಾದ ನೌಕರರ ಸಾಮಾಜಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸ್ವಇಚ್ಛೆಯಿಂದ ಕ್ವಾರಂಟೈನ್‌ ಅವಧಿಗೆ ಅವರ ಹಕ್ಕಿನಲ್ಲಿ ಲಭ್ಯವಿರುವ ರಜೆಯನ್ನು ಮಂಜೂರು ಮಾಡಬೇಕು ಎಂದು ಆದೇಶಿಸಿದೆ.

ಕ್ವಾರಂಟೈನ್‌ ಕೇಂದ್ರದಲ್ಲಿ ಊಟ, ತಿಂಡಿ ಸರಿಯಾಗಿ ನೀಡುತ್ತಿಲ್ಲ; ಸೋಂಕಿತರ ಆಕ್ರೋಶ

ಕೊರೋನಾ ಬಾಧಿಕ ನೌಕರರು ಇಲ್ಲವೇ ಕಾರ್ಮಿಕರು ಅವರ ಖಾತೆಯಲ್ಲಿ ರಜೆ ಇಲ್ಲದಿದ್ದಲ್ಲಿ, ಇತರ ಕಾರ್ಮಿಕರ ರಜೆಯನ್ನು ವರ್ಗಾಯಿಸಿಕೊಂಡು ನಿಯಮಾನುಸಾರ ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಕಾರ್ಮಿಕರ ಹಕ್ಕಿನಲ್ಲಿ ರಜೆಯು ಇಲ್ಲದಿದ್ದ ಪಕ್ಷದಲ್ಲಿ ಅಥವಾ ರಜೆಯನ್ನು ಈಗಾಗಲೇ ಸಂಪೂರ್ಣವಾಗಿ ಬಳಸಿಕೊಂಡಿದ್ದಲ್ಲಿ ಮುಂದಿನ ದಿನಗಳಲ್ಲಿ ಅವರು ಪಡೆಯಬಹುದಾದ ರಜೆಯನ್ನು ಮುಂಗಡವಾಗಿ ಉಪಯೋಗಿಸಿಕೊಳ್ಳಲು ಅವಕಾಶ ನೀಡಬೇಕು. ಮಾಲೀಕರು ಸ್ವ ಇಚ್ಛೆಯಿಂದ ರಜೆ ಮಂಜೂರು ಮಾಡಲು ಅವಕಾಶವಾಗದಿದ್ದಲ್ಲಿ ಕಾರ್ಮಿಕರ ಹಕ್ಕಿನ ರಜೆ ಇಲ್ಲದಿದ್ದಲ್ಲಿ ಸದರಿ ಅವಧಿಗೆ ವಿಶೇಷ ರಜೆಯನ್ನು ನೀಡುವ ಕುರಿತು ಮಾಲೀಕರು ಮತ್ತು ಕಾರ್ಮಿಕರು ಉಭಯ ಸಮಾಲೋಚನೆ ನಡೆಸಿ ಬಗೆಹರಿಸಿಕೊಳ್ಳುವಂತೆ ಸರ್ಕಾರ ಹೊರಡಿಸಿರುವ ರಾಜ್ಯಪತ್ರದಲ್ಲಿ ಸ್ಪಷ್ಟಪಡಿಸಿದೆ.

click me!