* 15 ತಾಸು ದುಡಿದರೂ ಕ್ಷೇತ್ರಕ್ಕೆ ಟೈಂ ಕೊಡಲಾಗ್ತಿಲ್ಲ: ಸಿಎಂ
* ರಾಷ್ಟ್ರಕವಿ ಬಿರುದಿಗೆ ಚನ್ನವೀರ ಕಣವಿ ಹೆಸರು ಶಿಫಾರಸು
* ಕೊಟ್ಟ ಮಾತು ಉಳಿಸಿಕೊಂಡ ಸಮಾಧಾನ
ಹಾವೇರಿ(ಫೆ.13): ‘ಪಕ್ಷದ ಹಿರಿಯರು ಹಾಗೂ ಕ್ಷೇತ್ರದ ಜನತೆ ಆಶೀರ್ವಾದದಿಂದ ಮುಖ್ಯಮಂತ್ರಿಯಾದ(Chief Minister of Karnataka) ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ದಿನದ 15 ತಾಸು ಕೆಲಸ ನಿರ್ವಹಿಸುತ್ತಿದ್ದೇನೆ. ಮೊದಲಿನಂತೆ ಕ್ಷೇತ್ರದ ಜನರಿಗೆ ಸಿಗಲಾಗುತ್ತಿಲ್ಲ ಎಂಬ ಬೇಸರವಿದೆ. ನಿಮ್ಮ ಮನೆ ಮಗನನ್ನು ಉನ್ನತ ಕಾರ್ಯಕ್ಕಾಗಿ ಕಳುಹಿಸಿದ್ದೀರೆಂದು ಭಾವಿಸಿ. ದೇಶ ಕಾಯಲು ಮಿಲಿಟರಿಗೆ ಮಗನನ್ನು ಕಳುಹಿಸಿದ್ದೀರೆಂದು ತಿಳಿದುಕೊಳ್ಳಿ. ನಾಡು ಕಟ್ಟುವ ಕಾರ್ಯಕ್ಕೆ ಮಗನನ್ನು ಕಳುಹಿಸಿದ್ದೀರಿ ಎಂದು ಭಾವಿಸಿ.’
ಇದು ತವರಿನ ಜನತೆ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಮನದಾಳದ ಮಾತುಗಳು. ಶಿಗ್ಗಾಂವಿ ತಾಲೂಕು ಹಿರೇಬೆಂಡಿಗೇರಿ ಗ್ರಾಮದಲ್ಲಿ ಸವಣೂರ ಏತ ನೀರಾವರಿ ಯೋಜನೆಯಡಿ 48 ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದ ಜನರಿಗಾಗಿ ಮೊದಲಿನಂತೆ ಸಮಯ ನೀಡಲಾಗುತ್ತಿಲ್ಲ. ನಿಮ್ಮ ಮನೆ ಮಗನನ್ನು ಉನ್ನತ ಕಾರ್ಯಕ್ಕಾಗಿ ಕಳುಹಿಸಿದ್ದೀರಿ ಎಂದು ಭಾವಿಸಿ ಎಂದು ಕ್ಷೇತ್ರದ ಜನರಲ್ಲಿ ವಿನಮ್ರರಾಗಿ ಮನವಿ ಮಾಡಿದರು.
undefined
Hijab Row: ಕಾಲೇಜು ಆರಂಭವೇ ನಮ್ಮ ಮೊದಲ ಆದ್ಯತೆ: ಸಿಎಂ ಬೊಮ್ಮಾಯಿ
ರೈತರು, ಬಡವರೇ ಸರ್ಕಾರದ ಹೃದಯ ಮಿಡಿತ:
ಕಳೆದ ಎರಡು ವರ್ಷದಲ್ಲಿ ಕೋವಿಡ್(Covid19) ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದ ನಡುವೆಯೂ ಸಂಪನ್ಮೂಲ ಕ್ರೋಢೀಕರಿಸಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗಿದೆ. ಬಜೆಟ್ ಪೂರ್ವದಲ್ಲಿ ರೈತ ಮಕ್ಕಳಿಗೆ ವಿದ್ಯಾನಿಧಿ ಜಾರಿಗೆ ತರಲಾಗಿದೆ. ರಾಜ್ಯದ ಐದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಕೃಷಿ, ತೋಟಗಾರಿಕೆ ಹಾಗೂ ನೀರಾವರಿ ಬೆಳೆ ಹಾನಿ ಪರಿಹಾರವನ್ನು ದ್ವಿಗುಣಗೊಳಿಸಲಾಗಿದೆ. ಗ್ರಾಮೀಣ ಪ್ರದೇಶಕ್ಕೆ ಐದು ಲಕ್ಷ ಮನೆಗಳನ್ನು ಮಂಜೂರಾತಿಗೊಳಿಸಲಾಗಿದೆ. ಪಡಿತರ ವಿತರಣೆ ಹೆಚ್ಚಿಸಲಾಗಿದೆ. ನೀರಾವರಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.
ಬರುವ ದಿನಗಳಲ್ಲಿ ಬಾಕಿ ಯೋಜನೆಗಳನ್ನು ಪೂರ್ಣಗೊಳಿಸಿ ಕನ್ನಡನಾಡಿನ(Karnataka) ಭೂಮಿ ತಾಯಿಗೆ ಹಸಿರು ಸೀರೆ ಉಡಿಸುವ ಸಂಕಲ್ಪ ಮಾಡಲಾಗಿದೆ. ಸರ್ಕಾರದ ಹೃದಯ ಮಿಡಿತ ರೈತರು, ಕಾರ್ಮಿಕರು ಹಾಗೂ ಬಡವರ ಬಗ್ಗೆ ಇದೆ. ಇದು ನಮ್ಮ ಧ್ಯೇಯ ಹಾಗೂ ನೀತಿಯಾಗಿದೆ ಎಂದು ಹೇಳಿದರು.
ಕೊಟ್ಟ ಮಾತು ಉಳಿಸಿಕೊಂಡ ಸಮಾಧಾನ:
ಶಿಗ್ಗಾಂವಿ ಕ್ಷೇತ್ರದ ಪ್ರತಿ ಹಳ್ಳಿಗೆ ನಳದ ನೀರು ಕೊಡುವ ನಿಟ್ಟಿನಲ್ಲಿ 638 ಕೋಟಿ ವೆಚ್ಚದ ಯೋಜನೆ ಹಾಗೂ ಹಾನಗಲ್ ಕ್ಷೇತ್ರದ 230ಕ್ಕೂ ಅಧಿಕ ಹಳ್ಳಿಗೆ ತುಂಗಭದ್ರಾ ನೀರು ಒದಗಿಸುವ ಬೃಹತ್ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಹಿರೇಬೆಂಡಿಗೇರಿ ಕೆರೆ ನೈಸರ್ಗಿಕವಾಗಿ ತುಂಬುತ್ತಿತ್ತು. ಸತತ ಮೂರು ವರ್ಷಗಳ ಬರಗಾಲದಿಂದ ಈ ಕೆರೆ ಬತ್ತಿದ ಕಾರಣ ಹಿರಿಯರ ಮನಸ್ಸಿಗೆ ಬಹಳ ನೋವಾಗಿತ್ತು. ಆಗ ನಾನು ತೀರ್ಮಾನಿಸಿ 40 ಕಿ.ಮೀ. ದೂರದಲ್ಲಿರುವ ವರದಾ ನದಿಯಿಂದ ನೀರು ತರಲಾಗಿದೆ. ಕೊಟ್ಟ ಮಾತು ಮಾತು ಉಳಿಸಿಕೊಂಡಿದ್ದು ಸಮಾಧಾನವಾಗಿದೆ ಎಂದು ಹೇಳಿದರು.
ಹಿಜಾಬ್ ವಿವಾದ, ಬಿಜೆಪಿ ಶಾಸಕ, ಸಚಿವರಿಗೆ ಸಿಎಂ ಖಡಕ್ ಎಚ್ಚರಿಕೆ
ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ರಾಜ್ಯದಲ್ಲಿ 7.5 ಲಕ್ಷ ಎಕರೆ ನೀರಾವರಿ(Irrigation) ಮಾಡಲಾಗಿದೆ. ಒಂದು ಪ್ರಯತ್ನವಾಗಿ ಶಿಗ್ಗಾಂವಿ ಏತ ನೀರಾವರಿ ಯೋಜನೆಯಡಿ ಮೈಕ್ರೋ ಇರಿಗೇಷನ್ ಮಾಡಲಾಯಿತು. ಶಿಗ್ಗಾಂವಿ ಮತ್ತು ಸವಣೂರ ಏತ ನೀರಾವರಿ ಯೋಜನೆ ಮೂಲಕ ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕನಸು ಕಂಡಿದ್ದೆ. ನನ್ನ ಅವ್ವ ಗಂಗಮ್ಮನ ಆಶೀರ್ವಾದದಿಂದ ಇಂದು ಅದು ನನಸಾಗಿದೆ ಎಂದರು.
ರಾಷ್ಟ್ರಕವಿ ಬಿರುದಿಗೆ ಚನ್ನವೀರ ಕಣವಿ ಹೆಸರು ಶಿಫಾರಸು
ಹಾವೇರಿ: ಕನ್ನಡ ಸಾಹಿತ್ಯ ಪರಿಷತ್(Kannada Sahitya Parishat) ಅಭಿಲಾಷೆಯಂತೆ ಹಿರಿಯ ಕವಿ ಚನ್ನವೀರ ಕಣವಿ(Chennaveera Kanavi) ಅವರಿಗೆ ರಾಷ್ಟ್ರಕವಿ ಬಿರುದು ನೀಡಬೇಕೆನ್ನುವ ಬೇಡಿಕೆಯನ್ನು ಪರಿಗಣಿಸಿ ಶಿಫಾರಸು ಮಾಡಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಹಿರೇಬೆಂಡಿಗೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ಇದೇ ವೇಳೆ ಹಾವೇರಿ(Haveri) ಜಿಲ್ಲೆಗೆ ಪ್ರತ್ಯೇಕವಾದ ಹಾಲು ಒಕ್ಕೂಟ ಸ್ಥಾಪಿಸುವ ಪ್ರಕ್ರಿಯೆಯೂ ಅಂತಿಮ ಘಟ್ಟದಲ್ಲಿದೆ. ಅಧಿವೇಶನದ ನಂತರ ಪ್ರತ್ಯೇಕ ಒಕ್ಕೂಟವನ್ನು ಉದ್ಘಾಟನೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.